ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು:ಕರ್ನಾಟಕ ಬಂದ್ ಗೆ ಯಾವುದೇ ಪ್ರತಿಕ್ರಿಯೆ ಇಲ್ಲ :ಯತ್ನಾಳ್ ವಿರುದ್ಧ ಆಕ್ರೋಶ

ಜನಜೀವನ ಎಂದಿನಂತೆ: ಕರವೇಯಿಂದ ಪ್ರತಿಭಟನಾ ರ‍್ಯಾಲಿ ಹುಳಿಯಾರು:ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದಿಗೆ ಹುಳಿಯಾರಿನಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಪಟ್ಟಣದಲ್ಲಿ ಬಂದ್ ವಾತಾವರಣ ಲವಲೇಶವೂ ಕಂಡುಬರಲಿಲ್ಲ.ವ್ಯಾಪಾರ-ವಹಿವಾಟು ಎಂದಿನಂತೆ ನಡೆಯಿತು.ಕೆಎಸ್ಆರ್ಟಿಸಿ ಬಸ್ ಸಂಚಾರ ಎಂದಿನಂತೆ ಇತ್ತು. ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿತು.ಎಂದಿನಂತೆ ಜನಸಂಚಾರ,ವಾಹನ ಸಂಚಾರ ಕಂಡುಬಂತು.ಅಂಗಡಿ-ಮುಂಗಟ್ಟುಗಳು,ಹೋಟಲ್ ಗಳು ಎಂದಿನಂತೆ ತೆರೆದಿತ್ತು.ಒಟ್ಟಾರೆ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.        ಕನ್ನಡಪರ ಸಂಘಟನೆಗಳ ಪೈಕಿ ಕರ್ನಾಟಕ ರಕ್ಷಣಾ ವೇದಿಕೆ ಹುಳಿಯಾರು ಘಟಕದಿಂದ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು .ಕರವೇ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕರವೇ ಸರ್ಕಲ್ ನಿಂದ,ಬಸ್ ನಿಲ್ದಾಣ,ರಾಮಗೋಪಾಲ್ ಸರ್ಕಲ್ ಮೂಲಕ ನಾಡಕಚೇರಿಗೆ ಬೈಕ್ ರ‍್ಯಾಲಿ ಯಲ್ಲಿ ಆಗಮಿಸಿ ಉಪತಹಸೀಲ್ದಾರ್ ಸುಮತಿ ಅವರಿಗೆ ಮನವಿ ಸಲ್ಲಿಸಿದರು.            ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್ ಬೆಳಗಾವಿಯಲ್ಲಿ ಸದಾಕಾಲವೂ ಕನ್ನಡ ಧ್ವಜ, ಭಾಷೆ ವಿರೋಧಿಸುತ್ತ ಬಂದಿರುವ ಮರಾಠಿಗರಿಗೆ ನಿಗಮ ಮಂಡಳಿ ಸ್ಥಾಪನೆ ಮಾ...