ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಇತ್ತೀಚಿನ ಪೋಸ್ಟ್‌ಗಳು

ಹುಳಿಯಾರು: ಬಸವೇಶ್ವರ ಪತ್ತಿನ ಸಹಕಾರ ಸಂಘದಿಂದ ಬಸವ ಜಯಂತಿ ಆಚರಣೆ

ಹುಳಿಯಾರು: ಬಸವೇಶ್ವರ ಪತ್ತಿನ ಸಹಕಾರ ಸಂಘದಿಂದ ಬಸವ ಜಯಂತಿ ಆಚರಣೆ ಹುಳಿಯಾರಿನಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಬಸವ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಸವಣ್ಣನವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಬಸವಣ್ಣನವರ ತತ್ವಗಳು ಸರ್ವಕಾಲಿಕವಾಗಿದ್ದು  ಸಮಾನತೆ, ಸತ್ಯನಿಷ್ಠೆ ಮತ್ತು ಸೇವಾಭಾವ ಎಂಬ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶದ ಮೂಲಕ ಶ್ರಮಕ್ಕೆ ಮಹತ್ವ ನೀಡಿದ ಮಹಾನ್ ಸಮಾಜ ಸುಧಾರಕರಾಗಿದ್ದು, ಅಂಧಶ್ರದ್ಧೆ ಹಾಗೂ ಜಾತಿ ಭೇದಗಳಿಗೆ ವಿರೋಧವಾಗಿ ಹೋರಾಡಿದವರು. ಅವರ ವಿಚಾರಧಾರೆಗಳು ಸಮಾಜದಲ್ಲಿ ಸಮಾನತೆ ತರಲು ಸಹಕಾರಿಯಾಗಿದೆ ಎಂದು ಕರೆ ನೀಡಿದರು. ಇದೇ ವೇಳೆ ನೂರಾರು ಜನರಿಗೆ ಪಾನಕ ಹಾಗೂ ಕೋಸಂಬರಿ ವಿತರಿಸುವ ಮೂಲಕ ಬಸವ ತತ್ವದ ದಾಸೋಹ ಸೇವೆಯನ್ನು ಸ್ಮರಿಸಲಾಯಿತು.  ಬಸವೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಲ್‌ಐಸಿ ದೇವರಾಜ್, ಕಾರ್ಯನಿರ್ವಹಣಾಧಿಕಾರಿ ವೀಣಾ, ಆರ್ಥಿಕ ಸಲಹೆಗಾರ ಶಿವರಾಮ್, ರಂಗನಕೆರೆ ವಿರೂಪಾಕ್ಷ, ಕಾಳಿಕಾಂಬ ವಿಜಿ, ಧನಂಜಯಮೂರ್ತಿ, ತೋಟದ ಮನೆ ಶೇಖರ್, ಪಾಳ್ಯ ಶಿವಶಂಕರ್, ಕರವೇ ಜಿಲ್ಲಾ ಉಪಾಧ್ಯಕ್ಷ ಚನ್ನಬಸವಯ್ಯ, ಪ್ರಿಂಟಿಂಗ್ ಪ್ರೆಸ್ ಚಿದ...

ರಾಜ್ಯಕ್ಕೆ 3ನೇ ರ‌್ಯಾಂಕ್: ಹುಳಿಯಾರಿನ ಅಮೋಘ್ ಬಿ. ಲೋಕ ಅಪ್ರತಿಮ ಸಾಧನೆ!

*ರಾಜ್ಯಕ್ಕೆ 3ನೇ ರ‌್ಯಾಂಕ್: ಹುಳಿಯಾರಿನ ಅಮೋಘ್ ಬಿ. ಲೋಕ ಅಪ್ರತಿಮ ಸಾಧನೆ!* ಹುಳಿಯಾರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹುಳಿಯಾರಿನ ಪ್ರತಿಭೆ *ಅಮೋಘ್ ಬಿ. ಲೋಕ* ರಾಜ್ಯ ಮಟ್ಟದಲ್ಲಿ ತೃತೀಯ (3rd) ರ‌್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರು, ವಿಜ್ಞಾನ ವಿಭಾಗದಲ್ಲಿ *600ಕ್ಕೆ 596* ಅಂಕಗಳನ್ನು ಗಳಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. * ನೂರಕ್ಕೆ ನೂರರ ಸಾಧನೆ! * :  ಅಮೋಘ್  ಪರೀಕ್ಷೆಯ ಆರು ವಿಷಯಗಳ ಪೈಕಿ ನಾಲ್ಕು ಪ್ರಮುಖ ವಿಷಯಗಳಲ್ಲಿ ಇವರು ಶೇ. 100 ರಷ್ಟು ಅಂಕಗಳನ್ನು ಬಾಚಿಕೊಂಡಿದ್ದಾರೆ.           ಕನ್ನಡ, ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry) ಮತ್ತು ಗಣಿತ (Mathematics) ವಿಷಯಗಳಲ್ಲಿ *100ಕ್ಕೆ 100* ಅಂಕಗಳನ್ನು ಪಡೆದಿದ್ದಾರೆ.          *ಇಂಗ್ಲಿಷ್‌ನಲ್ಲಿ 97 ಹಾಗೂ ಜೀವಶಾಸ್ತ್ರದಲ್ಲಿ (Biology) 99 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಹುಳಿಯಾರಿನ ಹೆಮ್ಮೆ : ಹುಳಿಯಾರಿನ  ಎಪಿಎಂಸಿ ವರ್ತಕರಾದ *ಎಲ್.ಆರ್. ಬಾಲಾಜಿ* ಅವರ ಪುತ್ರನಾದ ಅಮೋಘ್, ಎಸ್‌ಎಸ್‌ಎಲ್‌ಸಿಯಲ್ಲೂ ಉನ್ನತ ಸಾಧನೆ ಮಾಡಿದ್ದರು. ಈಗ ಪಿಯುಸಿಯಲ್ಲೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಶೈಕ್ಷಣಿ...

ಕುಡಿಯುವ ನೀರಿಗಾಗಿ ಹಾಹಾಕಾರ: ದಸೂಡಿ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಕುಡಿಯುವ ನೀರಿಗಾಗಿ ಹಾಹಾಕಾರ: ದಸೂಡಿ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ ಹುಳಿಯಾರು : ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮ್ಲಾ ನಾಯಕ ತಾಂಡಾದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸ್ಥಳೀಯ ಆಡಳಿತದ ವಿಳಂಬ ಧೋರಣೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ತಾಂಡಾದಲ್ಲಿ ಸುಮಾರು 140ಕ್ಕೂ ಹೆಚ್ಚು ಮನೆಗಳಿದ್ದು, ಕುಡಿಯುವ ನೀರಿಲ್ಲದೆ ಜನರು ಪರದಾಡುವಂತಾಗಿದೆ. ಪಂಚಾಯಿತಿ ವತಿಯಿಂದ ಕೇವಲ ಒಂದು ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, ಅದು ಇಡೀ ತಾಂಡಾಕ್ಕೆ ಸಾಕಾಗುತ್ತಿಲ್ಲ. ಇದರಿಂದಾಗಿ ಜನರು ದೈನಂದಿನ ಕೆಲಸಗಳಿಗೂ ನೀರಿನ ಅಭಾವ ಎದುರಿಸುತ್ತಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (EO) ಹಲವು ಬಾರಿ ಕರೆ ಮಾಡಿ ದೂರು ನೀಡಿದ್ದರೂ, ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.  ನೀರಿನ ಸಮಸ್ಯೆ ಬಗ್ಗೆ ಕೇಳಿದಾಗ, ದಸೂಡಿ ಗ್ರಾಮದ RO ಪ್ಲಾಂಟ್‌ನಿಂದ ನೀರು ತಂದುಕೊಳ್ಳಿ ಎಂದು PDO ಹಗುರವಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ. ತಾಂಡಾದಿಂದ ದಸೂಡಿ ಗ್ರಾಮವು ಸುಮಾರು 2 ಕಿಲೋಮೀಟರ್ ದೂರದಲ್ಲಿದೆ. ಹೆಣ್ಣುಮಕ್ಕಳು ಅಷ್ಟು ದೂರ ನಡೆದು ನೀರು ತರುವುದು ಅಸಾಧ್ಯವೆಂದು ಪ್ರಶ್ನಿಸಿದಾಗ, "ನಾನು ಎಲ್ಲರಿಗೂ ಬೈಕ್ ಕೊಡಿಸಲು ಸಾಧ್ಯವಿಲ್ಲ" ಎಂದು ಉಡ...

ತೊರೆಸೂರಗೊಂಡನಹಳ್ಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ: ಇಂದು ಬ್ರಹ್ಮ ರಥೋತ್ಸವದ ಸಂಭ್ರಮ

*ತೊರೆಸೂರಗೊಂಡನಹಳ್ಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ: ಇಂದು ಬ್ರಹ್ಮ ರಥೋತ್ಸವದ ಸಂಭ್ರಮ*   ಹುಳಿಯಾರು ಹೋಬಳಿಯ *ತೊರೆಸೂರಗೊಂಡನಹಳ್ಳಿ* ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವವು ಭಾನುವಾರದಿಂದ (ಏಪ್ರಿಲ್ 5) ಅತ್ಯಂತ ಶ್ರದ್ಧಾಭಕ್ತಿಗಳಿಂದ ಆರಂಭಗೊಂಡಿದ್ದು ಏಪ್ರಿಲ್ 8ರ ಬುಧವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ನಡೆಯಲಿದೆ. * ಇಂದಿನ ವಿಶೇಷ* (ಸೋಮವಾರ, ಏಪ್ರಿಲ್ 6): ಇಂದು ಜಾತ್ರೆಯ ಪ್ರಮುಖ ದಿನವಾಗಿದ್ದು, ಬೆಳಿಗ್ಗೆಯಿಂದಲೇ ವಿವಿಧ ಕೈಂಕರ್ಯಗಳು ಜರುಗುತ್ತಿವೆ: ದರ್ಬಾರ್ ಅಲಂಕಾರ: ಬೆಳಿಗ್ಗೆ 7:30ಕ್ಕೆ ಸ್ವಾಮಿಯವರ ಮೂಲಸ್ಥಾನಕ್ಕೆ ವಿಶೇಷ ದರ್ಬಾರ್ ಅಲಂಕಾರ ಮಾಡಲಾಗಿದೆ. ಹೊಳೆಸೇವೆ: ಬೆಳಿಗ್ಗೆ 9:15ಕ್ಕೆ ಪುಷ್ಪಾಲಂಕೃತ ಸ್ವಾಮಿಯವರಿಗೆ ಹೊಳೆಸೇವೆ ನೆರವೇರಲಿದೆ. ಅಗ್ನಿಕೊಂಡ: ಬೆಳಿಗ್ಗೆ 11:00 ಗಂಟೆಗೆ ಭಕ್ತಾದಿಗಳ ಸಮ್ಮುಖದಲ್ಲಿ ಅಗ್ನಿಕೊಂಡ ಕಾರ್ಯಕ್ರಮ ಜರುಗಲಿದೆ. ಬ್ರಹ್ಮ ರಥೋತ್ಸವ: ಬೆಳಿಗ್ಗೆ 11:30ಕ್ಕೆ ಮಂಗಳವಾದ್ಯಗಳೊಂದಿಗೆ *ಶ್ರೀ ಬಸವೇಶ್ವರ ಸ್ವಾಮಿಯವರ ಅದ್ದೂರಿ ಬ್ರಹ್ಮ ರಥೋತ್ಸವ*ಕ್ಕೆ ಚಾಲನೆ ನೀಡಲಾಗುವುದು.  ಇಂದು ಮಧ್ಯಾಹ್ನ 1:00 ಗಂಟೆಗೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಗ್ರಾಮಸ್ಥರಿಂದ *ಅನ...

ಹುಳಿಯಾರು: ಮೊಬೈಲ್ ಮೂಲಕ 'ಸ್ವಯಂ ಜನಗಣತಿ'ಗೆ ಚಾಲನೆ

ಹುಳಿಯಾರು: ಮೊಬೈಲ್ ಮೂಲಕ 'ಸ್ವಯಂ ಜನಗಣತಿ'ಗೆ ಚಾಲನೆ ---------------------------- ಹುಳಿಯಾರು: 2027ರ ಜನಗಣತಿ ಪ್ರಕ್ರಿಯೆಗೆ ಪಟ್ಟಣದಲ್ಲಿ ಅಧಿಕೃತವಾಗಿ ಚಾಲನೆ ದೊರೆತಿದ್ದು, ಈ ಬಾರಿ ನಾಗರಿಕರು ತಮ್ಮ ಮಾಹಿತಿಯನ್ನು ತಾವೇ ಆನ್‌ಲೈನ್ ಮೂಲಕ ದಾಖಲಿಸುವ 'ಸ್ವಯಂ ಗಣತಿ' (Self Enumeration) ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.  ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಅವರು ಈ ನೂತನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ  ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ನಾಗರಿಕರು ಈ ಪೋರ್ಟಲ್ ಮೂಲಕ ಸ್ವಯಂ ಮಾಹಿತಿಯನ್ನು ದಾಖಲಿಸಲು ಅವಕಾಶವಿದೆ. ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಇಲ್ಲದವರು ಸಮೀಪದ ಕಂಪ್ಯೂಟರ್ ಕೇಂದ್ರಗಳ ಮೂಲಕವೂ ಈ ಪ್ರಕ್ರಿಯೆ ಪೂರ್ಣಗೊಳಿಸಿ ನೋಂದಣಿ ಸಂಖ್ಯೆ ಪಡೆಯಬಹುದಾಗಿದೆ ಎಂದರು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ದೊರೆಯುವ ಅರ್ಜಿಸಂಖ್ಯೆಯನ್ನು ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ನೀಡಬೇಕು. ಇದರಿಂದ ಗಣತಿದಾರರ ಕೆಲಸ ಸುಲಭವಾಗುವುದಲ್ಲದೆ, ಕಡಿಮೆ ಅವಧಿಯಲ್ಲಿ ನಿಖರ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು. -------------- "ನಮ್ಮ ಜನಗಣತಿ - ನಮ್ಮ ಅಭಿವೃದ್ಧಿ" ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಜನಗಣತಿ ನಡೆಯುತ್ತಿದೆ. ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆಗೆ ಜನಗಣತಿಯೇ ಬುನಾದಿ. ಹಾಗಾಗಿ,...

ಕೆಂಕೆರೆಯಲ್ಲಿ ಇಂದಿನಿಂದ (ಏಪ್ರಿಲ್ 4ರಿಂದ) ಶ್ರೀ ಕಾಳಿಕಾಂಬಾ ದೇವಿ ಜಾತ್ರಾ ಮಹೋತ್ಸವ

ಕೆಂಕೆರೆಯಲ್ಲಿ ಇಂದಿನಿಂದ (ಏಪ್ರಿಲ್ 4ರಿಂದ) ಶ್ರೀ ಕಾಳಿಕಾಂಬಾ ದೇವಿ ಜಾತ್ರಾ ಮಹೋತ್ಸವ ----------- ​ವರದಿ :✍️ ನರೇಂದ್ರಬಾಬು-ಹುಳಿಯಾರು ----------- ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ನೆಲೆಸಿರುವ ಲೋಕಮಾತೆ ಶ್ರೀ ಕಾಳಿಕಾಂಬಾ ದೇವಿಯವರ ಜಾತ್ರಾ ಮಹೋತ್ಸವವು ಇಂದು ಏಪ್ರಿಲ್ 4ರಿಂದ 11ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. ​ಎಂಟು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ  ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಜಾತ್ರೆಯ ಪ್ರಮುಖ ಆಕರ್ಷಣೆಯಾದ 'ಅಗ್ನಿಕುಂಡ ಸೇವೆ' ಏಪ್ರಿಲ್ 4, 5 ಹಾಗೂ 6ರಂದು (ಶನಿವಾರ, ಭಾನುವಾರ ಮತ್ತು ಸೋಮವಾರ) ಸತತ ಮೂರು ದಿನಗಳ ಕಾಲ ಸಂಜೆ ಜರುಗಲಿದೆ. ​ಕಾರ್ಯಕ್ರಮದ ವಿವರ: ​ಏಪ್ರಿಲ್ 07 (ಮಂಗಳವಾರ): ಅಂದು 'ದೊಡ್ಡಬಾನ' ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಗೆ ಶ್ರೀ ಕಾಳಿಕಾಂಬಾ ದೇವಿ, ಶ್ರೀ ಈರಬೊಮ್ಮಕ್ಕ ದೇವಿ, ಶ್ರೀ ದುರ್ಗಮ್ಮ ದೇವಿ ಹಾಗೂ ಶ್ರೀ ಅಂಬಿಕಾ ದೇವಿಯವರ ಆಗಮನ ಮತ್ತು  'ಕೂಡು ಭೇಟಿ'  ನಡೆಯಲಿದೆ. ದಮ್ಮಡಿಹಟ್ಟಿ ಗ್ರಾಮಸ್ಥರಿಂದ ಮದವಣಗಿತ್ತಿ ಕಾರ್ಯಕ್ರಮ ನಡೆಯಲಿದೆ. ​ಏಪ್ರಿಲ್ 08 (ಬುಧವಾರ): ಅಂದು ಮಡಿಲಕ್ಕಿ ಸೇವೆ ನೆರವೇರಲಿದ್ದು, ರಾತ್ರಿ 10 ಗಂಟೆಗೆ ಕೆಂಕೆರೆಯ ಶನೇಶ್ವರ ಕಲಾ ಸಂಘದ ವತಿಯಿಂದ 'ರಾಜ ಸತ್ಯವ್ರತ ಮತ್ತು ಶನಿ ಪ್ರಭಾವ' ಎಂಬ ಪೌರಾಣಿಕ ನ...