ಮೊದಲು ಪೊಲೀಸರೊಂದಿಗೆ ಕಿರಿಕ್, ಆಮೇಲೆ ಸಾರ್ವಜನಿಕರಿಗೆ ಅವೇರ್ನೆಸ್: ಸವಾರನ ವಿಡಿಯೋ ವೈರಲ್! ಹುಳಿಯಾರು : ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಸವಾರನೊಬ್ಬನನ್ನು ಪೊಲೀಸರು ತಡೆದು ದಂಡ ಹಾಕಿದಾಗ, ಮೊದಲಿಗೆ ಪೊಲೀಸರ ವಿರುದ್ಧವೇ ಆಕ್ರೋಶ ಹೊರಹಾಕಿ, ತದನಂತರ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಘಟನೆಯ ಹಿನ್ನೆಲೆ: ಜಿಲ್ಲೆಯ ತಿಪಟೂರು ಉಪವಿಭಾಗದ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈಮರ ಗೇಟ್ ಬಳಿ ದ್ವಿಚಕ್ರ ವಾಹನ ಸವಾರನೊಬ್ಬ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದಾಗ ಕರ್ತವ್ಯದಲ್ಲಿದ್ದ ಪೊಲೀಸರು ಆತನನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಸಿಟ್ಟಾದ ಸವಾರ, "ಇಲ್ಲಿ ಏಕಾಗಿ ವಾಹನ ತಡೆಯುತ್ತಿದ್ದೀರಿ? ಕ್ರೈಂ ಡಿಪಾರ್ಟ್‌ಮೆಂಟ್‌ನವರು ಹೆಲ್ಮೆಟ್ ಹಿಡಿಯಬಹುದೇ? ಇಲ್ಲಿ ಗಾಡಿ ಹಿಡಿಯಲು ಅವಕಾಶವಿದೆಯೇ?" ಎಂದು ಪೊಲೀಸರ ಜೊತೆ ತೀವ್ರ ವಾಗ್ವಾದಕ್ಕಿಳಿದಿದ್ದಾನೆ. ಅಲ್ಲದೆ, ಪೊಲೀಸರು ಟೀ ಶರ್ಟ್ ಧರಿಸಿದ್ದಾರೆ ಎಂದು ಆರೋಪಿಸಿ, ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಬದಲಾದ ಸವಾರ : ಸವಾರ ವಾಗ್ವಾದ ನಡೆಸಿದರೂ ತಾಳ್ಮೆ ಕಳೆದುಕೊಳ್ಳದ ಪೊಲೀಸರು, ಆತನಿಗೆ ₹500 ದಂಡ ವಿಧಿಸಿದ್ದಲ್ಲದೆ, ಸಂಚಾರಿ ನಿಯಮಗಳ ಮಹತ್ವ ಹಾಗೂ ಕಾನೂನಿನ ಅರಿವು ಮೂಡಿಸಿದ್ದಾರೆ. ಪೊಲೀಸರ ಜವಾಬ್ದಾರಿಯುತ ಮಾತಿಗೆ ಮನಪರಿವರ್...