ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು: ಬಸವೇಶ್ವರ ಪತ್ತಿನ ಸಹಕಾರ ಸಂಘದಿಂದ ಬಸವ ಜಯಂತಿ ಆಚರಣೆ

ಹುಳಿಯಾರು: ಬಸವೇಶ್ವರ ಪತ್ತಿನ ಸಹಕಾರ ಸಂಘದಿಂದ ಬಸವ ಜಯಂತಿ ಆಚರಣೆ ಹುಳಿಯಾರಿನಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಬಸವ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಸವಣ್ಣನವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಬಸವಣ್ಣನವರ ತತ್ವಗಳು ಸರ್ವಕಾಲಿಕವಾಗಿದ್ದು  ಸಮಾನತೆ, ಸತ್ಯನಿಷ್ಠೆ ಮತ್ತು ಸೇವಾಭಾವ ಎಂಬ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶದ ಮೂಲಕ ಶ್ರಮಕ್ಕೆ ಮಹತ್ವ ನೀಡಿದ ಮಹಾನ್ ಸಮಾಜ ಸುಧಾರಕರಾಗಿದ್ದು, ಅಂಧಶ್ರದ್ಧೆ ಹಾಗೂ ಜಾತಿ ಭೇದಗಳಿಗೆ ವಿರೋಧವಾಗಿ ಹೋರಾಡಿದವರು. ಅವರ ವಿಚಾರಧಾರೆಗಳು ಸಮಾಜದಲ್ಲಿ ಸಮಾನತೆ ತರಲು ಸಹಕಾರಿಯಾಗಿದೆ ಎಂದು ಕರೆ ನೀಡಿದರು. ಇದೇ ವೇಳೆ ನೂರಾರು ಜನರಿಗೆ ಪಾನಕ ಹಾಗೂ ಕೋಸಂಬರಿ ವಿತರಿಸುವ ಮೂಲಕ ಬಸವ ತತ್ವದ ದಾಸೋಹ ಸೇವೆಯನ್ನು ಸ್ಮರಿಸಲಾಯಿತು.  ಬಸವೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಲ್‌ಐಸಿ ದೇವರಾಜ್, ಕಾರ್ಯನಿರ್ವಹಣಾಧಿಕಾರಿ ವೀಣಾ, ಆರ್ಥಿಕ ಸಲಹೆಗಾರ ಶಿವರಾಮ್, ರಂಗನಕೆರೆ ವಿರೂಪಾಕ್ಷ, ಕಾಳಿಕಾಂಬ ವಿಜಿ, ಧನಂಜಯಮೂರ್ತಿ, ತೋಟದ ಮನೆ ಶೇಖರ್, ಪಾಳ್ಯ ಶಿವಶಂಕರ್, ಕರವೇ ಜಿಲ್ಲಾ ಉಪಾಧ್ಯಕ್ಷ ಚನ್ನಬಸವಯ್ಯ, ಪ್ರಿಂಟಿಂಗ್ ಪ್ರೆಸ್ ಚಿದ...

ರಾಜ್ಯಕ್ಕೆ 3ನೇ ರ‌್ಯಾಂಕ್: ಹುಳಿಯಾರಿನ ಅಮೋಘ್ ಬಿ. ಲೋಕ ಅಪ್ರತಿಮ ಸಾಧನೆ!

*ರಾಜ್ಯಕ್ಕೆ 3ನೇ ರ‌್ಯಾಂಕ್: ಹುಳಿಯಾರಿನ ಅಮೋಘ್ ಬಿ. ಲೋಕ ಅಪ್ರತಿಮ ಸಾಧನೆ!* ಹುಳಿಯಾರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹುಳಿಯಾರಿನ ಪ್ರತಿಭೆ *ಅಮೋಘ್ ಬಿ. ಲೋಕ* ರಾಜ್ಯ ಮಟ್ಟದಲ್ಲಿ ತೃತೀಯ (3rd) ರ‌್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರು, ವಿಜ್ಞಾನ ವಿಭಾಗದಲ್ಲಿ *600ಕ್ಕೆ 596* ಅಂಕಗಳನ್ನು ಗಳಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. * ನೂರಕ್ಕೆ ನೂರರ ಸಾಧನೆ! * :  ಅಮೋಘ್  ಪರೀಕ್ಷೆಯ ಆರು ವಿಷಯಗಳ ಪೈಕಿ ನಾಲ್ಕು ಪ್ರಮುಖ ವಿಷಯಗಳಲ್ಲಿ ಇವರು ಶೇ. 100 ರಷ್ಟು ಅಂಕಗಳನ್ನು ಬಾಚಿಕೊಂಡಿದ್ದಾರೆ.           ಕನ್ನಡ, ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry) ಮತ್ತು ಗಣಿತ (Mathematics) ವಿಷಯಗಳಲ್ಲಿ *100ಕ್ಕೆ 100* ಅಂಕಗಳನ್ನು ಪಡೆದಿದ್ದಾರೆ.          *ಇಂಗ್ಲಿಷ್‌ನಲ್ಲಿ 97 ಹಾಗೂ ಜೀವಶಾಸ್ತ್ರದಲ್ಲಿ (Biology) 99 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಹುಳಿಯಾರಿನ ಹೆಮ್ಮೆ : ಹುಳಿಯಾರಿನ  ಎಪಿಎಂಸಿ ವರ್ತಕರಾದ *ಎಲ್.ಆರ್. ಬಾಲಾಜಿ* ಅವರ ಪುತ್ರನಾದ ಅಮೋಘ್, ಎಸ್‌ಎಸ್‌ಎಲ್‌ಸಿಯಲ್ಲೂ ಉನ್ನತ ಸಾಧನೆ ಮಾಡಿದ್ದರು. ಈಗ ಪಿಯುಸಿಯಲ್ಲೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಶೈಕ್ಷಣಿ...

ಕುಡಿಯುವ ನೀರಿಗಾಗಿ ಹಾಹಾಕಾರ: ದಸೂಡಿ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಕುಡಿಯುವ ನೀರಿಗಾಗಿ ಹಾಹಾಕಾರ: ದಸೂಡಿ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ ಹುಳಿಯಾರು : ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮ್ಲಾ ನಾಯಕ ತಾಂಡಾದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸ್ಥಳೀಯ ಆಡಳಿತದ ವಿಳಂಬ ಧೋರಣೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ತಾಂಡಾದಲ್ಲಿ ಸುಮಾರು 140ಕ್ಕೂ ಹೆಚ್ಚು ಮನೆಗಳಿದ್ದು, ಕುಡಿಯುವ ನೀರಿಲ್ಲದೆ ಜನರು ಪರದಾಡುವಂತಾಗಿದೆ. ಪಂಚಾಯಿತಿ ವತಿಯಿಂದ ಕೇವಲ ಒಂದು ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, ಅದು ಇಡೀ ತಾಂಡಾಕ್ಕೆ ಸಾಕಾಗುತ್ತಿಲ್ಲ. ಇದರಿಂದಾಗಿ ಜನರು ದೈನಂದಿನ ಕೆಲಸಗಳಿಗೂ ನೀರಿನ ಅಭಾವ ಎದುರಿಸುತ್ತಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (EO) ಹಲವು ಬಾರಿ ಕರೆ ಮಾಡಿ ದೂರು ನೀಡಿದ್ದರೂ, ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.  ನೀರಿನ ಸಮಸ್ಯೆ ಬಗ್ಗೆ ಕೇಳಿದಾಗ, ದಸೂಡಿ ಗ್ರಾಮದ RO ಪ್ಲಾಂಟ್‌ನಿಂದ ನೀರು ತಂದುಕೊಳ್ಳಿ ಎಂದು PDO ಹಗುರವಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ. ತಾಂಡಾದಿಂದ ದಸೂಡಿ ಗ್ರಾಮವು ಸುಮಾರು 2 ಕಿಲೋಮೀಟರ್ ದೂರದಲ್ಲಿದೆ. ಹೆಣ್ಣುಮಕ್ಕಳು ಅಷ್ಟು ದೂರ ನಡೆದು ನೀರು ತರುವುದು ಅಸಾಧ್ಯವೆಂದು ಪ್ರಶ್ನಿಸಿದಾಗ, "ನಾನು ಎಲ್ಲರಿಗೂ ಬೈಕ್ ಕೊಡಿಸಲು ಸಾಧ್ಯವಿಲ್ಲ" ಎಂದು ಉಡ...

ತೊರೆಸೂರಗೊಂಡನಹಳ್ಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ: ಇಂದು ಬ್ರಹ್ಮ ರಥೋತ್ಸವದ ಸಂಭ್ರಮ

*ತೊರೆಸೂರಗೊಂಡನಹಳ್ಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ: ಇಂದು ಬ್ರಹ್ಮ ರಥೋತ್ಸವದ ಸಂಭ್ರಮ*   ಹುಳಿಯಾರು ಹೋಬಳಿಯ *ತೊರೆಸೂರಗೊಂಡನಹಳ್ಳಿ* ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವವು ಭಾನುವಾರದಿಂದ (ಏಪ್ರಿಲ್ 5) ಅತ್ಯಂತ ಶ್ರದ್ಧಾಭಕ್ತಿಗಳಿಂದ ಆರಂಭಗೊಂಡಿದ್ದು ಏಪ್ರಿಲ್ 8ರ ಬುಧವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ನಡೆಯಲಿದೆ. * ಇಂದಿನ ವಿಶೇಷ* (ಸೋಮವಾರ, ಏಪ್ರಿಲ್ 6): ಇಂದು ಜಾತ್ರೆಯ ಪ್ರಮುಖ ದಿನವಾಗಿದ್ದು, ಬೆಳಿಗ್ಗೆಯಿಂದಲೇ ವಿವಿಧ ಕೈಂಕರ್ಯಗಳು ಜರುಗುತ್ತಿವೆ: ದರ್ಬಾರ್ ಅಲಂಕಾರ: ಬೆಳಿಗ್ಗೆ 7:30ಕ್ಕೆ ಸ್ವಾಮಿಯವರ ಮೂಲಸ್ಥಾನಕ್ಕೆ ವಿಶೇಷ ದರ್ಬಾರ್ ಅಲಂಕಾರ ಮಾಡಲಾಗಿದೆ. ಹೊಳೆಸೇವೆ: ಬೆಳಿಗ್ಗೆ 9:15ಕ್ಕೆ ಪುಷ್ಪಾಲಂಕೃತ ಸ್ವಾಮಿಯವರಿಗೆ ಹೊಳೆಸೇವೆ ನೆರವೇರಲಿದೆ. ಅಗ್ನಿಕೊಂಡ: ಬೆಳಿಗ್ಗೆ 11:00 ಗಂಟೆಗೆ ಭಕ್ತಾದಿಗಳ ಸಮ್ಮುಖದಲ್ಲಿ ಅಗ್ನಿಕೊಂಡ ಕಾರ್ಯಕ್ರಮ ಜರುಗಲಿದೆ. ಬ್ರಹ್ಮ ರಥೋತ್ಸವ: ಬೆಳಿಗ್ಗೆ 11:30ಕ್ಕೆ ಮಂಗಳವಾದ್ಯಗಳೊಂದಿಗೆ *ಶ್ರೀ ಬಸವೇಶ್ವರ ಸ್ವಾಮಿಯವರ ಅದ್ದೂರಿ ಬ್ರಹ್ಮ ರಥೋತ್ಸವ*ಕ್ಕೆ ಚಾಲನೆ ನೀಡಲಾಗುವುದು.  ಇಂದು ಮಧ್ಯಾಹ್ನ 1:00 ಗಂಟೆಗೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಗ್ರಾಮಸ್ಥರಿಂದ *ಅನ...

ಹುಳಿಯಾರು: ಮೊಬೈಲ್ ಮೂಲಕ 'ಸ್ವಯಂ ಜನಗಣತಿ'ಗೆ ಚಾಲನೆ

ಹುಳಿಯಾರು: ಮೊಬೈಲ್ ಮೂಲಕ 'ಸ್ವಯಂ ಜನಗಣತಿ'ಗೆ ಚಾಲನೆ ---------------------------- ಹುಳಿಯಾರು: 2027ರ ಜನಗಣತಿ ಪ್ರಕ್ರಿಯೆಗೆ ಪಟ್ಟಣದಲ್ಲಿ ಅಧಿಕೃತವಾಗಿ ಚಾಲನೆ ದೊರೆತಿದ್ದು, ಈ ಬಾರಿ ನಾಗರಿಕರು ತಮ್ಮ ಮಾಹಿತಿಯನ್ನು ತಾವೇ ಆನ್‌ಲೈನ್ ಮೂಲಕ ದಾಖಲಿಸುವ 'ಸ್ವಯಂ ಗಣತಿ' (Self Enumeration) ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.  ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಅವರು ಈ ನೂತನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ  ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ನಾಗರಿಕರು ಈ ಪೋರ್ಟಲ್ ಮೂಲಕ ಸ್ವಯಂ ಮಾಹಿತಿಯನ್ನು ದಾಖಲಿಸಲು ಅವಕಾಶವಿದೆ. ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಇಲ್ಲದವರು ಸಮೀಪದ ಕಂಪ್ಯೂಟರ್ ಕೇಂದ್ರಗಳ ಮೂಲಕವೂ ಈ ಪ್ರಕ್ರಿಯೆ ಪೂರ್ಣಗೊಳಿಸಿ ನೋಂದಣಿ ಸಂಖ್ಯೆ ಪಡೆಯಬಹುದಾಗಿದೆ ಎಂದರು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ದೊರೆಯುವ ಅರ್ಜಿಸಂಖ್ಯೆಯನ್ನು ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ನೀಡಬೇಕು. ಇದರಿಂದ ಗಣತಿದಾರರ ಕೆಲಸ ಸುಲಭವಾಗುವುದಲ್ಲದೆ, ಕಡಿಮೆ ಅವಧಿಯಲ್ಲಿ ನಿಖರ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು. -------------- "ನಮ್ಮ ಜನಗಣತಿ - ನಮ್ಮ ಅಭಿವೃದ್ಧಿ" ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಜನಗಣತಿ ನಡೆಯುತ್ತಿದೆ. ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆಗೆ ಜನಗಣತಿಯೇ ಬುನಾದಿ. ಹಾಗಾಗಿ,...

ಕೆಂಕೆರೆಯಲ್ಲಿ ಇಂದಿನಿಂದ (ಏಪ್ರಿಲ್ 4ರಿಂದ) ಶ್ರೀ ಕಾಳಿಕಾಂಬಾ ದೇವಿ ಜಾತ್ರಾ ಮಹೋತ್ಸವ

ಕೆಂಕೆರೆಯಲ್ಲಿ ಇಂದಿನಿಂದ (ಏಪ್ರಿಲ್ 4ರಿಂದ) ಶ್ರೀ ಕಾಳಿಕಾಂಬಾ ದೇವಿ ಜಾತ್ರಾ ಮಹೋತ್ಸವ ----------- ​ವರದಿ :✍️ ನರೇಂದ್ರಬಾಬು-ಹುಳಿಯಾರು ----------- ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ನೆಲೆಸಿರುವ ಲೋಕಮಾತೆ ಶ್ರೀ ಕಾಳಿಕಾಂಬಾ ದೇವಿಯವರ ಜಾತ್ರಾ ಮಹೋತ್ಸವವು ಇಂದು ಏಪ್ರಿಲ್ 4ರಿಂದ 11ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. ​ಎಂಟು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ  ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಜಾತ್ರೆಯ ಪ್ರಮುಖ ಆಕರ್ಷಣೆಯಾದ 'ಅಗ್ನಿಕುಂಡ ಸೇವೆ' ಏಪ್ರಿಲ್ 4, 5 ಹಾಗೂ 6ರಂದು (ಶನಿವಾರ, ಭಾನುವಾರ ಮತ್ತು ಸೋಮವಾರ) ಸತತ ಮೂರು ದಿನಗಳ ಕಾಲ ಸಂಜೆ ಜರುಗಲಿದೆ. ​ಕಾರ್ಯಕ್ರಮದ ವಿವರ: ​ಏಪ್ರಿಲ್ 07 (ಮಂಗಳವಾರ): ಅಂದು 'ದೊಡ್ಡಬಾನ' ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಗೆ ಶ್ರೀ ಕಾಳಿಕಾಂಬಾ ದೇವಿ, ಶ್ರೀ ಈರಬೊಮ್ಮಕ್ಕ ದೇವಿ, ಶ್ರೀ ದುರ್ಗಮ್ಮ ದೇವಿ ಹಾಗೂ ಶ್ರೀ ಅಂಬಿಕಾ ದೇವಿಯವರ ಆಗಮನ ಮತ್ತು  'ಕೂಡು ಭೇಟಿ'  ನಡೆಯಲಿದೆ. ದಮ್ಮಡಿಹಟ್ಟಿ ಗ್ರಾಮಸ್ಥರಿಂದ ಮದವಣಗಿತ್ತಿ ಕಾರ್ಯಕ್ರಮ ನಡೆಯಲಿದೆ. ​ಏಪ್ರಿಲ್ 08 (ಬುಧವಾರ): ಅಂದು ಮಡಿಲಕ್ಕಿ ಸೇವೆ ನೆರವೇರಲಿದ್ದು, ರಾತ್ರಿ 10 ಗಂಟೆಗೆ ಕೆಂಕೆರೆಯ ಶನೇಶ್ವರ ಕಲಾ ಸಂಘದ ವತಿಯಿಂದ 'ರಾಜ ಸತ್ಯವ್ರತ ಮತ್ತು ಶನಿ ಪ್ರಭಾವ' ಎಂಬ ಪೌರಾಣಿಕ ನ...

*ಇಂದಿನಿಂದ (ಏ.4 ರಿಂದ) ಹುಳಿಯಾರು ದುರ್ಗಮ್ಮನ ಜಾತ್ರೆ ಆರಂಭ*

*ಇಂದಿನಿಂದ (ಏ.4 ರಿಂದ) ಹುಳಿಯಾರು ದುರ್ಗಮ್ಮನ ಜಾತ್ರೆ ಆರಂಭ* ----------------------- ಹುಳಿಯಾರು ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಿಯ 54ನೇ ವರ್ಷದ  ಜಾತ್ರಾಮಹೋತ್ಸವ ಇಂದು ಏ.4 ರ ಶನಿವಾರದಿಂದ ಪ್ರಾರಂಭಗೊಂಡು 12 ರ ಭಾನುವಾರದವರೆಗೆ ಒಂಬತ್ತು ದಿನಗಳ ಕಾಲ ಜರುಗಲಿದೆ. ಏ.4 ರ ಶನಿವಾರ ಕೋಡಿಪಾಳ್ಯ, ಲಿಂಗಪ್ಪನಪಾಳ್ಯದವರಿಂದ ಹಾಗೂ 5 ರ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನ ಪಾಳ್ಯದ ಭಕ್ತಾಧಿಗಳಿಂದ ಅಮ್ಮನವರಿಗೆ ಮಡಿಲಕ್ಕಿ ಸೇವೆ ನಡೆಯಲಿದೆ. ಏ.6ರ ಸೋಮವಾರ ಬೆಳಿಗ್ಗೆ ಎಡೆಸೇವೆ,ಸಂಜೆ ಅಮ್ಮನವರ ಮಧುವಣಗಿತ್ತಿ ಕಾರ್ಯ ಹಾಗೂ ಧ್ವಜಾರೋಹಣ ಮತ್ತು ಅಂಕುರಾರ್ಪಣೆ ಕಾರ್ಯ ನಡೆಯಲಿದೆ. ಏ.7 ರ ಮಂಗಳವಾರ ಗ್ರಾಮಸ್ಥರಿಂದ ಆರತಿಬಾನ, ಎಡೆಸೇವೆ ನಡೆಯಲಿದೆ. ಏ.8ರ ಬುಧವಾರ ರಾತ್ರಿ ಹುಳಿಯಾರು ಗ್ರಾಮದೇವತೆ ಹುಳಿಯಾರಮ್ಮ, ಕೆಂಚಮ್ಮನವರು,ಹೊಸಹಳ್ಳಿಯ ಶ್ರೀ ಕೊಲ್ಲಾಪುರದಮ್ಮ ,ಹೊಸಹಳ್ಳಿ ಪಾಳ್ಯದ ಅಂತರಘಟ್ಟೆಅಮ್ಮ, ಗೌಡಗೆರೆಯ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ಕೆಸಿ ಪಾಳ್ಯದ ಶ್ರೀ ಅಂತರಘಟ್ಟಮ್ಮ , ಸೋಮಜ್ಜನ ಪಾಳ್ಯದ ಶ್ರೀ ಅಂತರಘಟ್ಟಮ್ಮ  ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆದು ನಂತರ ಗಂಗಾಸ್ನಾನಕ್ಕೆ ಹುಳಿಯಾರು ಕೆರೆಗೆ ದಯಮಾಡಿಸುವುದು. ಏ.9 ರ ಗುರುವಾರ ಮುಂಜಾನೆ 7ಕ್ಕೆ ಕೆರೆಯ ಹತ್ತಿರ ಕಳಸ ಸ್ಥಾಪನೆ ನಡೆದು ನಂತರ ಕಳಸ ಸಮೇತ ನಡೆಮುಡಿಯಲ್ಲಿ ಅಮ್ಮನವರ ಮೂಲಸ್ಥಾನಕ್ಕೆ ದಯಮಾಡಿಸುವ...

ಹಣ್ಣು ಹಂಪಲು ವಿತರಣೆ ಮೂಲಕ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಹುಟ್ಟುಹಬ್ಬ ಆಚರಣೆ

ಹಣ್ಣು ಹಂಪಲು ವಿತರಣೆ ಮೂಲಕ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಹುಟ್ಟುಹಬ್ಬ ಆಚರಣೆ ಚಿಕ್ಕನಾಯಕನಹಳ್ಳಿ , ಏಪ್ರಿಲ್ 2 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಮಾಸಾಶನ ಪಡೆಯುವ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಯೋಜನೆಯ ಸಿಬ್ಬಂದಿಗಳು ಪ್ರತಿ ಮನೆಗೆ ಭೇಟಿ ನೀಡಿ ಫಲಾನುಭವಿಗಳ ಕ್ಷೇಮ ಸಮಾಚಾರ ವಿಚಾರಿಸಿ, ಹಣ್ಣು ಹಂಪಲುಗಳನ್ನು ಹಂಚುವ ಮೂಲಕ ಮಾನವೀಯತೆ ಮೆರೆದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಪ್ರೇಮಾನಂದ ಎಲ್.ಬಿ., ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಪ್ರಕಾಶ್, ಸದಸ್ಯ ಉಮೇಶ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕವಿತಾ, ಮೇಲ್ವಿಚಾರಕರಾದ ಆಶಾ, ಗಾಯತ್ರಿ, ವಸಂತ್ ಹಾಗೂ ಚೈತ್ರ ಸೇರಿದಂತೆ ಸೇವಾ ಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು ಮತ್ತು ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ಈ ವೇಳೆ ಎಲ್ಲರೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

ದಾಖಲೆ ಬರೆದ ಹುಳಿಯಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಕೇವಲ ಒಂದೂಕಾಲು ಗಂಟೆಯಲ್ಲಿ 60 ಅಜೆಂಡಾಗಳಿಗೆ ಒಪ್ಪಿಗೆ!

ದಾಖಲೆ ಬರೆದ ಹುಳಿಯಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಕೇವಲ ಒಂದೂಕಾಲು ಗಂಟೆಯಲ್ಲಿ 60 ಅಜೆಂಡಾಗಳಿಗೆ ಒಪ್ಪಿಗೆ! ------------------ ಹುಳಿಯಾರು : ಅತಿ ಹೆಚ್ಚಿನ ವಿಷಯಗಳಿದ್ದರೂ ಯಾವುದೇ ಗದ್ದಲ, ಗೊಂದಲವಿಲ್ಲದೆ ಅತ್ಯಂತ ಸುಸೂತ್ರವಾಗಿ ನಡೆದ ಹುಳಿಯಾರು ಪಟ್ಟಣ ಪಂಚಾಯಿತಿಯ ಇಂದಿನ ಸಾಮಾನ್ಯ ಸಭೆಯು ಹೊಸ ದಾಖಲೆ ಬರೆದಿದೆ. ನೂತನ ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಒಟ್ಟು 60 ಪ್ರಮುಖ ವಿಷಯಗಳನ್ನು ಕೇವಲ ಒಂದೂಕಾಲು ಗಂಟೆಯೊಳಗೆ ಚರ್ಚಿಸಿ ಅನುಮೋದನೆ ನೀಡಲಾಯಿತು. ಸಾಮಾನ್ಯವಾಗಿ ಹುಳಿಯಾರು ಪಂಚಾಯಿತಿ ಸಭೆ ಎಂದರೆ ಇಡೀ ದಿನ ಗದ್ದಲ-ಕೋಲಾಹಲಗಳಿಂದ ಕೂಡಿರುತ್ತಿತ್ತು. ಆದರೆ ಇಂದು ಎಲ್ಲಾ ಕೌನ್ಸಿಲರ್‌ಗಳ ಸಹಕಾರದೊಂದಿಗೆ ಅಭಿವೃದ್ಧಿ ಪರ ನಿರ್ಧಾರಗಳನ್ನು ಶೀಘ್ರವಾಗಿ ತೆಗೆದುಕೊಳ್ಳುವ ಮೂಲಕ ಸಭೆ ವಿಶೇಷ ಗಮನ ಸೆಳೆಯಿತು. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಆಯ್ಕೆ : ಸಭೆಯ ಆರಂಭದಲ್ಲಿ ಸರ್ಕಾರಿ ಸುತ್ತೋಲೆಗಳನ್ನು ಮಂಡಿಸಲಾಯಿತು. ಇತ್ತೀಚೆಗೆ ಅಕಾಲಿಕ ನಿಧನರಾದ ಸ್ಥಾಯಿ ಸಮಿತಿ ಅಧ್ಯಕ್ಷ ಒಳಗೆ ಚಂದ್ರಶೇಖರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಕೌನ್ಸಿಲರ್ ಎಸ್.ಆರ್.ಎಸ್ ದಯಾನಂದ್ ಅವರನ್ನು ಸದಸ್ಯರನ್ನಾಗಿ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಅಬೂಬಕ್ಕರ್ ಸಿದ್ದೀಕ್ ಅವರನ್ನು ಸರ್ವಾನುಮ...

ಹುಳಿಯಾರಿನಲ್ಲಿ ಸಿದ್ಧಗಂಗಾ ಶ್ರೀಗಳ 119ನೇ ಜನ್ಮದಿನೋತ್ಸವ ಆಚರಣೆ: ಶ್ರದ್ಧಾಭಕ್ತಿಯ ನಮನ

ಹುಳಿಯಾರಿನಲ್ಲಿ ಸಿದ್ಧಗಂಗಾ ಶ್ರೀಗಳ 119ನೇ ಜನ್ಮದಿನೋತ್ಸವ ಆಚರಣೆ: ಶ್ರದ್ಧಾಭಕ್ತಿಯ ನಮನ- -------------- ಹುಳಿಯಾರು : ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 119ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಹುಳಿಯಾರಿನ ರಾಮಗೋಪಾಲ್ ಸರ್ಕಲ್ ಬಳಿಯ ಭೈರವೇಶ್ವರ ಮೆಡಿಕಲ್ಸ್ ಮುಂಭಾಗದಲ್ಲಿ ಚನ್ನಬಸವಯ್ಯ ಅವರ ನೇತೃತ್ವದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್ ಅವರು ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿಯವರು ಇಡೀ ವಿಶ್ವಕ್ಕೆ ಮಾದರಿಯಾದವರು. ಅವರ ದಾಸೋಹ ಸಂಸ್ಕೃತಿ ಮತ್ತು ಬದುಕಿನ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಶ್ರೀಗಳ ಸೇವೆಯನ್ನು ಸ್ಮರಿಸಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಮತ್ತು ಅನ್ನದ ದಾಸೋಹ ನೀಡಿದ ಸಿದ್ಧಗಂಗಾ ಮಠವು ಒಂದು ಪುಣ್ಯಕ್ಷೇತ್ರ. ಶ್ರೀಗಳು ಇತರ ಮಠಗಳಂತೆ ಶಾಖಾ ಮಠಗಳನ್ನು ತೆರೆಯಲು ಮುಂದಾಗದೆ, ಒಂದೇ ಮಠದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ್ದಾರೆ. ಇಂದು ದೇಶ-ವಿದೇಶಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ವೈದ್ಯರಾಗಿ, ಇಂಜಿನಿಯರ್ ಆಗಿ ಸೇವೆ...

ಹುಳಿಯಾರು ಪಟ್ಟಣದಲ್ಲಿ ಸಾರ್ವಜನಿಕ ಸಮಸ್ಯೆಗಳ ಸರಣಿ: ಮುಖ್ಯಾಧಿಕಾರಿಗೆ ನಾಗರಿಕ ಹಿತ ರಕ್ಷಣಾ ವೇದಿಕೆಯಿಂದ ಮೂರು ಮನವಿ ಪತ್ರ

ಹುಳಿಯಾರು ಪಟ್ಟಣದಲ್ಲಿ ಸಾರ್ವಜನಿಕ ಸಮಸ್ಯೆಗಳ ಸರಣಿ: ಮುಖ್ಯಾಧಿಕಾರಿಗೆ ನಾಗರಿಕ ಹಿತ ರಕ್ಷಣಾ ವೇದಿಕೆಯಿಂದ ಮೂರು ಮನವಿ ಪತ್ರ ---------- ಹುಳಿಯಾರು : ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಫುಟ್ಪಾತ್ ಮೇಲೆ ಸಾರ್ವಜನಿಕರಿಗೆ ಅಡ್ಡಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳ ತೆರವು, ಪಟ್ಟಣ ಪಂಚಾಯಿತಿಯಲ್ಲಿನ ಸಿಬ್ಬಂದಿ ಕೊರತೆ ನೀಗಿಸುವುದು ಹಾಗೂ ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 'ಹುಳಿಯಾರು ನಾಗರಿಕ ಹಿತರಕ್ಷಣಾ ವೇದಿಕೆ'ಯಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು. ವೇದಿಕೆಯ ಪ್ರಮುಖರಾದ ರಾಮಕೃಷ್ಣಪ್ಪ ಅವರ ನೇತೃತ್ವದ ನಿಯೋಗವು ಮುಖ್ಯಾಧಿಕಾರಿ ಎಲ್.ವಿ. ಮಂಜುನಾಥ್ ಅವರನ್ನು ಭೇಟಿ ಮಾಡಿ ಮೂರು ಪ್ರತ್ಯೇಕ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿತು. ಫುಟ್‌ಪಾತ್ ತೆರವಿಗೆ ಆಗ್ರಹ : ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಮುಖ್ಯ ರಸ್ತೆಗಳ ಫುಟ್‌ಪಾತ್‌ಗಳ ಮೇಲೆ ವ್ಯಾಪಾರ ವಹಿವಾಟು ನಡೆಯುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಅಲ್ಲದೆ, ವ್ಯಾಪಾರಿಗಳು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ಅಶುಚಿತ್ವ ನಿರ್ಮಾಣವಾಗುತ್ತಿದೆ. ಆದ್ದರಿಂದ ಬೀದಿ ಬದಿ ವ್ಯಾಪಾರಿಗಳಿ...

ಸವಾಲುಗಳೇ ಇಂದಿನ ಯಶಸ್ಸಿಗೆ ಭದ್ರ ಬುನಾದಿ: ದೊಡ್ಡಬಿದರೆಯಲ್ಲಿ ಇಸ್ರೋ ವಿಜ್ಞಾನಿ ಡಾ. ಆರ್. ಶ್ರೀನಿವಾಸ್ ಸ್ಫೂರ್ತಿದಾಯಕ ನುಡಿ

ಸವಾಲುಗಳೇ ಇಂದಿನ ಯಶಸ್ಸಿಗೆ ಭದ್ರ ಬುನಾದಿ: ದೊಡ್ಡಬಿದರೆಯಲ್ಲಿ ಇಸ್ರೋ ವಿಜ್ಞಾನಿ ಡಾ. ಆರ್. ಶ್ರೀನಿವಾಸ್ ಸ್ಫೂರ್ತಿದಾಯಕ ನುಡಿ --------------------- ಹುಳಿಯಾರು : ಸಮೀಪದ ದೊಡ್ಡಬಿದರೆಯಲ್ಲಿರುವ ಜೆ.ಸಿ.ಎಂ. ಇಂಟರ್ನ್ಯಾಷನಲ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ತಾರಾ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಬಾಹ್ಯಾಕಾಶ ವಿಜ್ಞಾನ ಜಾಗೃತಿ' ಕಾರ್ಯಕ್ರಮದಲ್ಲಿ ಹೈದರಾಬಾದಿನ ಇಸ್ರೋ ವಿಜ್ಞಾನಿ ಡಾ. ಆರ್. ಶ್ರೀನಿವಾಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಪ್ರೇರಣೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಸ್ರೋ ಪಯಣದ ರೋಚಕ ಇತಿಹಾಸ :ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಆರ್. ಶ್ರೀನಿವಾಸ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಅತ್ಯಂತ ಕಠಿಣ ಹಾದಿಯನ್ನು ದಾಟಿ ಇಂದು ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆದು ಬಂದ ಇತಿಹಾಸವನ್ನು ವಿವರಿಸಿದರು.  1963ರಲ್ಲಿ ಕೇರಳದ ತುಂಬಾದಲ್ಲಿರುವ ಒಂದು ಸಣ್ಣ ಚರ್ಚ್‌ನಲ್ಲಿ ಆರಂಭವಾದ ಭಾರತದ ಬಾಹ್ಯಾಕಾಶ ಪಯಣ, ಇಂದು ಚಂದ್ರಯಾನ ಮತ್ತು ಮಂಗಳಯಾನದಂತಹ ಬೃಹತ್ ಸಾಧನೆಗಳನ್ನು ಮಾಡಿದೆ ಎಂದು ಹೆಮ್ಮೆಯಿಂದ ಸ್ಮರಿಸಿದರು. ಆರಂಭದಲ್ಲಿ ವಿಜ್ಞಾನ...

ಬೋರನಕಣಿವೆ ಸಾಯಿಧಾಮದಲ್ಲಿ ನರ್ಮದೋದ್ಭವ ಕಣಿವೆ ಶಂಕರನ ಪ್ರಾಣ ಪ್ರತಿಷ್ಠಾಪನೆ: ಹ್ಯಾಟ್ರಿಕ್ ಹಿರೋ ಶಿವಣ್ಣ ದಂಪತಿ ಭಾಗಿ

ಬೋರನಕಣಿವೆ ಸಾಯಿಧಾಮದಲ್ಲಿ ನರ್ಮದೋದ್ಭವ ಕಣಿವೆ ಶಂಕರನ ಪ್ರಾಣ ಪ್ರತಿಷ್ಠಾಪನೆ: ಹ್ಯಾಟ್ರಿಕ್ ಹಿರೋ ಶಿವಣ್ಣ ದಂಪತಿ ಭಾಗಿ ಹುಳಿಯಾರು : ಹೋಬಳಿಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಬೋರನಕಣಿವೆಯ ಸಾಯಿಧಾಮದಲ್ಲಿ ಇಂದು ಭಕ್ತಿ ಸಂಭ್ರಮ ಮನೆಮಾಡಿತ್ತು. "ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೇಷನ್ ಹಾಗೂ ಸೇವಾ ಚೇತನ" ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನರ್ಮದೋದ್ಭವ ಕಣಿವೆ ಶಂಕರನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವು ಅತ್ಯಂತ ವೈಭವದಿಂದ ನೆರವೇರಿತು. ಶಿವಣ್ಣ ದಂಪತಿಗಳ ಆಗಮನ :ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಧ್ರುವತಾರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.  ಕ್ಷೇತ್ರಕ್ಕೆ ಆಗಮಿಸಿದ ಅತಿಥಿಗಳನ್ನು ಟ್ರಸ್ಟಿನ ಕಾರ್ಯದರ್ಶಿ ವಿಟ್ಟಲ್ ಹಾಗೂ ಅವರ ಕುಟುಂಬದವರು ಗೌರವಪೂರ್ವಕವಾಗಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಶಿವರಾಜ್ ಕುಮಾರ್ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಾಯಿಬಾಬಾ ದರ್ಶನ :ಸಾಯಿ ಮಂದಿರಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಅವರು ಸಾಯಿಬಾಬಾರ ದರ್ಶನ ಪಡೆದರು. ಬಾಬಾ ಅವರ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ, ಸಾಂಪ್ರದಾಯಿಕವಾಗಿ ಚಾದರವನ್ನು ಬದಲಿಸುವ ಮೂಲಕ ಭಕ್ತಿಪೂರ್ವಕ ನಮನ ಸಲ್ಲಿಸಿದರು...