*ಇಂದಿನಿಂದ (ಏ.4 ರಿಂದ) ಹುಳಿಯಾರು ದುರ್ಗಮ್ಮನ ಜಾತ್ರೆ ಆರಂಭ*
-----------------------
ಹುಳಿಯಾರು ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಿಯ 54ನೇ ವರ್ಷದ ಜಾತ್ರಾಮಹೋತ್ಸವ ಇಂದು ಏ.4 ರ ಶನಿವಾರದಿಂದ ಪ್ರಾರಂಭಗೊಂಡು 12 ರ ಭಾನುವಾರದವರೆಗೆ ಒಂಬತ್ತು ದಿನಗಳ ಕಾಲ ಜರುಗಲಿದೆ.
ಏ.4 ರ ಶನಿವಾರ ಕೋಡಿಪಾಳ್ಯ, ಲಿಂಗಪ್ಪನಪಾಳ್ಯದವರಿಂದ ಹಾಗೂ 5 ರ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನ ಪಾಳ್ಯದ ಭಕ್ತಾಧಿಗಳಿಂದ ಅಮ್ಮನವರಿಗೆ ಮಡಿಲಕ್ಕಿ ಸೇವೆ ನಡೆಯಲಿದೆ.
ಏ.6ರ ಸೋಮವಾರ ಬೆಳಿಗ್ಗೆ ಎಡೆಸೇವೆ,ಸಂಜೆ ಅಮ್ಮನವರ ಮಧುವಣಗಿತ್ತಿ ಕಾರ್ಯ ಹಾಗೂ ಧ್ವಜಾರೋಹಣ ಮತ್ತು ಅಂಕುರಾರ್ಪಣೆ ಕಾರ್ಯ ನಡೆಯಲಿದೆ.
ಏ.7 ರ ಮಂಗಳವಾರ ಗ್ರಾಮಸ್ಥರಿಂದ ಆರತಿಬಾನ, ಎಡೆಸೇವೆ ನಡೆಯಲಿದೆ.
ಏ.8ರ ಬುಧವಾರ ರಾತ್ರಿ ಹುಳಿಯಾರು ಗ್ರಾಮದೇವತೆ ಹುಳಿಯಾರಮ್ಮ, ಕೆಂಚಮ್ಮನವರು,ಹೊಸಹಳ್ಳಿಯ ಶ್ರೀ ಕೊಲ್ಲಾಪುರದಮ್ಮ ,ಹೊಸಹಳ್ಳಿ ಪಾಳ್ಯದ ಅಂತರಘಟ್ಟೆಅಮ್ಮ, ಗೌಡಗೆರೆಯ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ಕೆಸಿ ಪಾಳ್ಯದ ಶ್ರೀ ಅಂತರಘಟ್ಟಮ್ಮ , ಸೋಮಜ್ಜನ ಪಾಳ್ಯದ ಶ್ರೀ ಅಂತರಘಟ್ಟಮ್ಮ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆದು ನಂತರ ಗಂಗಾಸ್ನಾನಕ್ಕೆ ಹುಳಿಯಾರು ಕೆರೆಗೆ ದಯಮಾಡಿಸುವುದು.
ಏ.9 ರ ಗುರುವಾರ ಮುಂಜಾನೆ 7ಕ್ಕೆ ಕೆರೆಯ ಹತ್ತಿರ ಕಳಸ ಸ್ಥಾಪನೆ ನಡೆದು ನಂತರ ಕಳಸ ಸಮೇತ ನಡೆಮುಡಿಯಲ್ಲಿ ಅಮ್ಮನವರ ಮೂಲಸ್ಥಾನಕ್ಕೆ ದಯಮಾಡಿಸುವುದು. ಅದೇ ದಿನ ರಾತ್ರಿ ಉಯ್ಯಾಲೋತ್ಸವ ನಡೆಯಲಿದೆ.
ಇದೇ ದಿನ ಸಂಜೆ 7.30 ಗಂಟೆಗೆ ಅಮ್ಮನವರ ಬಂಟ ಚಾಮಪ್ಪನಿಗೆ ಅದ್ದೂರಿ ಮಣೇವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಏ.10 ರ ಶುಕ್ರವಾರ ಮಧ್ಯಾಹ್ನ ಅಮ್ಮನವರ ವೈಭವಯುತ ಬ್ರಹ್ಮರಥೋತ್ಸವ ನಡೆದು ನಂತರ ವಸಂತಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಸಂಜೆ ವಿನಾಯಕನಗರದ ದುರ್ಗಮ್ಮನ ಮದಾಲ್‌ಸಿ ಉತ್ಸವ ಜರುಗಲಿದೆ.
ಏ.11 ರ ಶನಿವಾರ ಬೆಳಿಗ್ಗೆ ಸಿಡಿ ಕಾರ್ಯ ,ಓಕಳಿಸೇವೆ, ಕಂಕಣ ವಿಸರ್ಜನೆ ನಡೆದು ಏ.12 ರ ಭಾನುವಾರದಂದು ಮಡಿಲಕ್ಕಿ ಸೇವೆ ನಡೆಯುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.
ಹುಳಿಯಾರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಧರ್ಮದರ್ಶಿ ಎಸ್ಆರ್‌ಎಸ್ ದಯಾನಂದ್ ಹಾಗೂ ಕನ್ವೀನರ್ ಪಟೇಲ್ ರಾಜಕುಮಾರ್ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನ ಕಮಿಟಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ