ವಿಷಯಕ್ಕೆ ಹೋಗಿ

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು


ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ
ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ ಬುದ್ದಪೂರ್ಣಿಮೆಯ ದಿನದಂದು ವೈಶಾಖ ಶುಕ್ಲಪೌರ್ಣಿಮೆಯಂದು ರಥೋತ್ಸವ ನಡೆಯುತ್ತದೆ.ಇದೇ ದೇವಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಲಕ್ಷ್ಮೀಶ ಕವಿಯ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ.ಆದರೆ ಇತಿಹಾಸ ಆಸಕ್ತರಿಗೆ ಲಕ್ಷ್ಮೀಶ ಕವಿಯ ಬಗ್ಗೆ ಮಾತ್ರ ಯಾವೊಂದು ಮಾಹಿತಿ ಲಭ್ಯವಾಗುವ ಏರ್ಪಾಡು ಮಾತ್ರ ಮಾಡಿಲ್ಲ.ಇದೇ ಊರಿನಲ್ಲಿರುವ ಗಮಕಿಯೊಬ್ಬರ ಬಳಿ ಕೆಲವು ಮಾಹಿತಿಯನ್ನು ಬೇಕಾದರೆ ಕೇಳಿ ತಿಳಿಯಬಹುದು.ದೇವಾಲಯದ ಹಿಂಭಾಗದಲ್ಲಿರುವ ಲಕ್ಷ್ಮೀಶ ಕವಿಯ ಪ್ರತಿಮೆ ಬಳಿ ಕವಿಯ ಬಗ್ಗೆಗಿಂತ ದಾನಿಗಳ ಹೆಸರನ್ನು ವೈಭವಿಕರಿಸಿರುವುದು ವಿಪರ್ಯಾಸ.ಒಟ್ಟಾರೆ ಮುಂದಿನ ದಿನದಲ್ಲಿ ಕವಿವರ್ಯರ ಬಗ್ಗೆ ಸಂಪೂರ್ಣ ವಿವರ ದೊರಕಿಸುವ ಏರ್ಪಾಡು ಮಾಡುವ ಅಗತ್ಯವಿದೆ.
-------------------------------------------------------------------------------------------------
ಕವಿ ಲಕ್ಷ್ಮೀಶನ ಕುರಿತು
ಲಕ್ಷ್ಮೀಶನು ೧೬ನೆಯ ಶತಮಾನದಲ್ಲಿದ್ದ ಕವಿ. ಈತನ ಊರು
ಚಿಕ್ಕಮಗಳೂರು ಜಿಲ್ಲೆಯ ದೇವನೂರು. ಅಲ್ಲಿಯ ಲಕ್ಷ್ಮೀಕಾಂತ ದೇವಾಲಯದಲ್ಲಿ ಲಕ್ಷ್ಮೀಶನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಜೈಮಿನಿ ಭಾರತ ಲಕ್ಷ್ಮೀಶನ ಪ್ರಸಿದ್ಧ ಕಾವ್ಯ. ಇದು ಸಂಸ್ಕೃತ ಜೈಮಿನಿ ಭಾರತದ ಕನ್ನಡ ರೂಪವಾಗಿದ್ದು ವಾರ್ಧಕ ಷಟ್ಪದಿಯಲ್ಲಿದೆ.ಈತನಿಗೆ 'ಕರ್ನಾಟಕ ಕವಿಚೈತ್ರವನ ಚೂತ'ಎಂಬ ಬಿರುದಿದ್ದಿತು.
ಈತನು ಉಪಮಾಲಂಕಾರವನ್ನು ಹೆಚ್ಚಾಗಿ ಬಳಸಿದ್ದರಿಂದ "ಉಪಮಾಲೋಲ" ಎಂಬ ಅಭಿದಾನಕ್ಕೆ ಪಾತ್ರನಾಗಿದ್ದಾನೆ. 16ನೇ ಶತಮಾನದ ಮಧ್ಯಭಾಗದಲ್ಲಿ ಬದುಕಿದ್ದ ಎನ್ನಲಾದ ಲಕ್ಷ್ಮೀಶನು ಜೈಮಿನಿ ಮುನಿಗಳು ಸಂಸ್ಕೃತದಲ್ಲಿ ಬರೆದಿದ್ದ ಜೈಮಿನಿ ಭಾರತವನ್ನು ಸಂಗ್ರಹಿಸಿ ಕನ್ನಡಕ್ಕೆ ಅನುವಾದಿಸಿದ. ಸಂಸ್ಕೃತದ 68 ಅಧ್ಯಾಯದ ಬೃಹತ್‌ ಗ್ರಂಥವನ್ನು ಕೇವಲ 34 ಸಂಧಿಗಳಲ್ಲಿ ಅಡಕವಾಗುವಂತೆ ಕನ್ನಡಕ್ಕೆ ಅನುವಾದಿಸಿದ ಈತನ ಚಾತುರ್ಯ ಅತ್ಯದ್ಭುತ.ಎಲ್ಲಿಯೂ ರಸಾಭಾಸವಾಗದಂತೆ ಲಕ್ಷ್ಮೀಶನು ಅನುವಾದಿಸಿದ ಈ ಕೃತಿ ಇಂದಿಗೂ- ಎಂದೆಂದಿಗೂ ಸರ್ವಶ್ರೇಷ್ಠ. ಲಕ್ಷ್ಮೀಶ ಕವಿಯ ಛಂದಸ್ಸು, ಶೈಲಿ, ಪಾತ್ರಪೋಷಣೆ, ಹಾಸ್ಯ, ಶೃಂಗಾರ, ಅಲಂಕಾರ, ಚಮತ್ಕಾರಗಳು ಓದುಗರನ್ನು ಮಂತ್ರಮುಗ್ಧಗೊಳಸುತ್ತದೆ.ಅಶ್ವಮೇಧಯಾಗ ಈ ಕೃತಿಯ ಮುಖ್ಯ ವಿಷಯವೇ ಆದರೂ, ಲಕ್ಷ್ಮೀಶನ ಕಥೆಯಲ್ಲಿ ಪ್ರಾಸಂಗಿಕವಾಗಿ ಬರುವ ನೂರಾರು ರಂಜನೀಯ ಕಥೆಗಳಿವೆ. ಹೀಗಾಗೇ ಲಕ್ಷ್ಮೀಶನಿಗೆ ಉಪಮಾಲೋಲ ಎಂಬ ಬಿರುದು. ಈತನ ಪದಲಾಲಿತ್ಯ, ರಂಜನೀಯ ಕಲೆಗಾರಿಕೆಯನ್ನು ಮೆಚ್ಚಿ ಲಕ್ಷ್ಮೀಶನಿಗೆ ಕರ್ಣಾಟ ಕವಿ ಚೂತವನ ಚೈತ್ರ ಎಂದೂ ಬಿರುದು ನೀಡಲಾಗಿತ್ತು. ವಾರ್ಧಕ ಷಟ್ಪದಿಗಳಲ್ಲಿ ಈತ ರಚಿಸಿದ ಕಾವ್ಯ ಹಾಡಲು - ಕೇಳಲು ಬಲು ಇಂಪು.
ಕವಿಚೂತವನಚೈತ್ರ ಎಂಬ ಬಿರುದಿನ ಲಕ್ಷ್ಮೀಶ ಕವಿಯ ಪ್ರಾದೇಶಿಕತೆಯ ಬಗ್ಗೆ ನಿಖರವಾದ ಸಾಕ್ಷ್ಯಾಧಾರವಿಲ್ಲ. ಸುಮಾರು 15ನೇ ಶತಮಾನದಲ್ಲಿ ಗುಲ್ಬರ್ಗದ ದೇವನೂರು ಎಂಬಲ್ಲಿದ್ದನೆಂದು ಕೆಲವರು ಅಭಿಪ್ರಾಯಪಟ್ಟರೆ ಬಹುಮಂದಿ ಚಿಕ್ಕಮಗಳೂರಿನ ಸಮೀಪದ ದೇವನೂರು ಎಂದು ಭಾವಿಸುತ್ತಾರೆ. ಸಂಸ್ಕೃತದಲ್ಲಿ ಜೈಮಿನಿ ಎಂಬ ಋಷಿ ಬರೆದ ಭಾರತವನ್ನು ಲಕ್ಷ್ಮೀಶ ‘‘ಜೈಮಿನಿಭಾರತ’’ ವಾಗಿ ಅನುವಾದಿಸಿದ್ದಾನೆ. ಪಾಂಡವರು ಕುರುಕ್ಷೇತ್ರ ಯುದ್ಧದ ನಂತರ ನಡೆಸಿದ ಅಶ್ವಮೇಧ ಜೈಮಿನಿಭಾರತದ ಕಥಾವಸ್ತು. ಮುಖ್ಯವಾಗಿ ಕುದುರೆಯ ಸಂಚಾರದ ಮಾರ್ಗದಲ್ಲಿ ನಡೆದ ಪ್ರಸಂಗಗಳು, ಅರ್ಜುನನ ಗರ್ವಭಂಗ ಹಾಗೂ ಕೃಷ್ಣನ ಮಹಿಮೆಯನ್ನು ಸಾರುವ ಕಥಾಗುಚ್ಛ.
------------------------------------------------------------------------------------------------
ಶಾಸ್ತ್ರೀಯ ಕನ್ನಡ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮೈಸೂರುಇವರು ಕವಿ ಲಕ್ಷ್ಮಿಶ ನ ಬಗ್ಗೆ ದಾಖಲಿಸಿರುವುದು ಹೀಗಿದೆ.
(
http://www.classicalkannada.org/LiteratureKan.html )
ಲಕ್ಷ್ಮೀಶ
ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ)
ಸ್ಥಳ: ಚಿಕ್ಕಮಗಳೂರು ಜಿಲ್ಲೆಯ ದೇವನೂರು (ಗುಲ್ಬರ್ಗ ಜಿಲ್ಲೆಯ ಸುರಪುರ??)
ಮತ-ಧರ್ಮ: ಬ್ರಾಹ್ಮಣ (ಶ್ರೀ ವೈಷ್ಣವ?)
ರಾಜಾಶ್ರಯ: ಯಾವ ರಾಜನೂ ಇಲ್ಲ.
ಬಿರುದುಗಳು: ಕರ್ನಾಟ ಕವಿಚೂತವನಚೈತ್ರ, ಉಪಮಾಲೋಲ.
ಕೃತಿಗಳು: ಜೈಮಿನಿ ಭಾರತ
ಕಿರು ಪರಿಚಯ: ವಸಾಹತುಪೂರ್ವ ಕಾಲದಲ್ಲಿ, ಲಕ್ಷ್ಮೀಶ ಮತ್ತು ಅವನ ಕಾವ್ಯಗಳಿಗೆ ಬಹಳ ವಿಶಿಷ್ಟವಾದ ಸ್ಥಾನವು ಮೀಸಲಾಗಿತ್ತು. ಆಗ, ಸಾಹಿತ್ಯದ ಸಂವಹನಕ್ಕೆ ಬರವಣಿಗೆ ಮತ್ತು ಶಾಲಾಶಿಕ್ಷಣಗಳಲ್ಲದೆ, ಇತರ ಅನೇಕ ದಾರಿಗಳು ತೆರೆದಿದ್ದವು. ಮೌಖಿಕ ಸಂವಹನ ಮತ್ತು ಗಮಕ ಪರಂಪರೆಗಳ ಫಲವಾಗಿ, ಅನೇಕ ಮಧ್ಯಕಾಲೀನ ಮಹಾಕಾವ್ಯಗಳು, ಅನಕ್ಷರಸ್ಥರ ನಡುವೆಯೂ ಬಹಳ ಜನಪ್ರಿಯವಾಗಿದ್ದವು. ಕರ್ನಾಟಕದ ವಿಭಿನ್ನ ಪ್ರದೇಶಗಳಲ್ಲಿ ಆಯಾ ಸಮುದಾಯಗಳ ಧಾರ್ಮಿಕನಿಷ್ಠೆಗಳ ಪರಿಣಾಮವಾಗಿ, ವಿಭಿನ್ನ ಕಾವ್ಯಗಳು ಹೆಚ್ಚು ಪ್ರಚುರವಾಗಿದ್ದವೆಂಬ ಮಾತು ನಿಜ. ಆದರೂ ಸಮಾಜದ ಉನ್ನತ ವರ್ಗಗಳವರು ನೀಡುತ್ತಿದ್ದ ಮೌಲ್ಯವ್ಯವಸ್ಥೆಗಳಿಗೆ ಬಹಿರಂಗದ ಪ್ರತಿರೋಧವೇನೂ ಇರಲಿಲ್ಲ. ಆದ್ದರಿಂದ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮತ್ತು ಪ್ರಭುಲಿಂಗಲೀಲೆಗಳಂತಹ ಕೃತಿಗಳು ಸಾಕಷ್ಟು ಜನಪ್ರಿಯವಾಗಿದ್ದವು. ಜೈಮಿನಿ ಭಾರತವು ಬಹು ಮಟ್ಟಿಗೆ ಬಿಡಿ ಬಿಡಿಯಾದ ಕಥೆಗಳ ಗೊಂಚಲೇ ಆಗಿದ್ದರಿಂದ, ಅಲ್ಲಿರುವ ಸನ್ನಿವೇಶಗಳನ್ನು ಪ್ರತ್ಯೇಕವಾಗಿ ಪ್ರವಚನ ಮಾಡುವುದು ಸುಲಭವಾಗಿತ್ತು. ಚಂದ್ರಹಾಸನ ಕಥೆ, ಚಂಡಿ-ಉದ್ಧಾಲಕರ ಕಥೆ, ಸೀತಾವನವಾಸ ಪ್ರಸಂಗ, ಸುಧನ್ವನ ಕಾಳಗ ಮುಂತಾದವನ್ನು ಸ್ವತಂತ್ರ ಕೃತಿಗಳೆಂದೇ ಪರಿಗಣಿಸಬಹುದು. ಇಡೀ ದೇಶದಲ್ಲಿ ಭಕ್ತಿಚಳುವಳಿಯು ವ್ಯಾಪಿಸಿದ್ದ ಕಾಲದಲ್ಲಿ ಜೀವಿಸಿದ್ದ ಲಕ್ಷ್ಮೀಶನಿಗೆ ಎರಡು ಅನುಕೂಲಗಳಿದ್ದವು. ಮೊದಲನೆಯದಾಗಿ, ಅವನು ಸಾಹಸ ಪರಾಕ್ರಮಗಳನ್ನು ವೈಭವೀಕರಿಸುತ್ತಲೇ ಅಂತಿಮವಾಗಿ ಅವೆಲ್ಲವೂ ಭಕ್ತಿಯಲ್ಲಿ ಸಾರ್ಥಕವಾಗುವಂತೆ ತೋರಿಸಬಹುದಾಗಿತ್ತು. ಈ ಕವಿಗೆ ಕೃಷ್ಣಭಕ್ತಿ ಮತ್ತು ಸಂಪೂರ್ಣ ಶರಣಾಗತಿಗಳು ಬಹಳ ದೊಡ್ಡ ಮೌಲ್ಯಗಳಾಗಿದ್ದವು. ವಾಸ್ತವವಾಗಿ ಇದು ಶ್ರೀ ವೈಷ್ಣವರ ‘ಪ್ರಪತ್ತಿ’ ಎಂಬ ಪರಿಕಲ್ಪನೆಗೆ ಬಹಳ ಹತ್ತಿರವಾಗಿದೆ. ಲಕ್ಷ್ಮೀಶನು ಚಿತ್ರಿಸುವ ಹಂಸಧ್ವಜ, ಸುಧನ್ವ, ಯೌವನಾಶ್ವ ಮೊದಲಾದ ವೀರರು ಅರ್ಜುನನಿಗಿಂತ ಬಲಶಾಲಿಗಳು. ಆದರೆ, ಅವರು ಕೃಷ್ಣನ ಅನುಗ್ರಹವನ್ನು ಪಡೆಯಲೋಸ್ಕರ ತಮ್ಮ ರಾಜ್ಯದ ಮಾತಿರಲಿ, ಪ್ರಾಣವನ್ನೇ ತ್ಯಾಗಮಾಡಲು ತಯಾರಾಗಿದ್ದರು.
ತನ್ನ ಕೇಳುಗ/ಓದುಗರ ಅಭಿರುಚಿಗಳನ್ನು ತಣಿಸಲೆಂದು ಶೃಂಗಾರ ಮತ್ತು ಹಾಸ್ಯಗಳನ್ನು ಬಳಸಿಕೊಳ್ಳಲು, ಈ ಕವಿಗೆ ಸಾಧ್ಯವಾಯಿತು. ಲಕ್ಷ್ಮೀಶನು ಷಟ್ಪದಿ ಪ್ರಕಾರದಲ್ಲಿ ಅಪಾರ ಸಾಧನೆ ಮಾಡಿದ್ದ ಕುಮಾರವ್ಯಾಸ, ರಾಘವಾಂಕ, ಚಾಮರಸ ಮುಂತಾದವರ ಸವಾಲನ್ನು ಎದುರಿಸಬೇಕಾಗಿತ್ತು. ರಾಮಾಯಣ ಮತ್ತು ಮಹಾಭಾರತಗಳ ಹಲವು ಸಾಧ್ಯತೆಗಳನ್ನು ಅವನಿಗಿಂತ ಹಿಂದಿನ ಹಿರಿಯ ಕವಿಗಳು ಸೂರೆ ಮಾಡಿದ್ದರು. ಆದ್ದರಿಂದಲೇ ಈ ಕವಿಯು, ತನ್ನ ಕಾವ್ಯವಸ್ತುವಾಗಿ, ಮಹಾಭಾರತ ಯುದ್ಧದ ನಂತರದ ಘಟನೆಗಳನ್ನು ಆರಿಸಿಕೊಂಡನು. ಸಹಜವಾಗಿಯೇ ಅವನನ್ನು ಪಂಪ, ಕುಮಾರವ್ಯಾಸರಿಗೆ ಹೋಲಿಸುವ ಸಾಧ್ಯತೆಗಳು ಕಡಿಮೆಯಾದವು. ಏನೇ ಆದರೂ ಜೀವನದರ್ಶನ ಮತ್ತು ಕಾವ್ಯಸಂವಿಧಾನಗಳ ನೆಲೆಯಲ್ಲಿ, ಲಕ್ಷ್ಮೀಶನನ್ನು ಪಂಪ, ಕುಮಾರವ್ಯಾಸರಿಗೆ ಹೋಲಿಸುವುದು ಕಷ್ಟ. ಆದರೆ, ಲಕ್ಷ್ಮೀಶನಿಗೆ ಪ್ರಕೃತಿವರ್ಣನೆಯಲ್ಲಿ ಆಸಕ್ತಿ ಮತ್ತು ಪ್ರತಿಭೆಗಳಿವೆ. ಅಷ್ಟೇ ಅಲ್ಲ, ಅವನು ಪ್ರಕೃತಿ ಮತ್ತು ಮನುಷ್ಯಭಾವನೆಗಳ ನಡುವೆ ಒಂದು ಬಗೆಯ ಸಾತತ್ಯವನ್ನು ತರುತ್ತಾನೆ. ಉದಾಹರಣೆಗೆ, ಚಂದ್ರಹಾಸನ ದುಃಖವನ್ನು ಕಾಡಿನಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳು ಕೂಡ ಹಂಚಿಕೊಳ್ಳುತ್ತವೆ. ಮನುಷ್ಯರು ಮತ್ತು ಪ್ರಾಣಿಗಳನ್ನು ಸಮಾನ ನೆಲೆಯಲ್ಲಿ ಕಾಣುವ ಈ ದೃಷ್ಟಿಕೋನವು ಗಮನೀಯವಾಗಿದೆ.
ಲಕ್ಷ್ಮೀಶನ ಶೈಲೀಯ ಆಯ್ಕೆಗಳು, ಅರ್ಥಕ್ಕಿಂತ ಹೆಚ್ಚಾಗಿ ಮಾಧುರ್ಯದ ಕಡೆಗೆ ಒಲಿಯುತ್ತವೆ. ತನ್ನ ಬರವಣಿಗೆಗೆ ಸಂಗೀತದ ಪರಿವೇಷವನ್ನು ಕೊಡಬಲ್ಲ ಅವನ ಸಾಮರ್ಥ್ಯವು ಆ ದಿನಗಳಲ್ಲಿ ಅನನ್ಯವಾಗಿತ್ತು. ಈ ಕೆಲಸವನ್ನು ಸಂಸ್ಕೃತ ಮತ್ತು ಕನ್ನಡಗಳ ಹಿತಕರವಾದ ಸಂಯೋಜನೆಯಿಂದ ಸಾಧಿಸಲು ಸಾಧ್ಯವಾಗಿದ್ದು ಲಕ್ಷ್ಮೀಶನ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿದೆ. ಹೀಗೆ ಈ ಕವಿಗೆ ಕನ್ನಡ ಕವಿಗಳ ಲೋಕದಲ್ಲಿ ಮಹತ್ವದ ಸ್ಥಾನವಿದೆ.
-------------------------------------------------------------------------------------------------
Lakshmisa From Wikipedia, the free encyclopedia
Lakshmisha was a noted
Kannada language Brahmin writer who lived during the mid–16th or late–17th century period. His most important writing, Jaimini Bharata is a version of the Hindu epic Mahabharata. The writing focuses on the events following the battle of Indraprastha between the Pandavas and Kauravas, using the Ashvamedha ("horse sacrifice") conducted by Yudhisthira as the subject of the story. The writing is in the shatpadi metre (hexa-metre, 6 line verse) and was inspired by the Sanskrit original written by sage Jaimini.
His life
The place, time and religious sect that Lakshmisa belonged to has been a subject of controversy among historians. Some historians believe he was a native of Devanur in modern
Kadur taluk, Chikkamagaluru district, Karnataka state. It is claimed that his family deity was "Lakshmiramana" (a form of Hindu God Vishnu) to whom he dedicated his writing. Devanur was called by multiple names in his writing; Surapura and Girvanapura.[2] Other historians feel Surapura is located in the erstwhile Hyderabad region. Some historians believe that Lakshmisa was a Advaitin or a Smartha Brahmin (believer of monistic philosophy) of the Bhagavata sect because the poet has invoked the names of Hindu God Shiva, his consort Parvati and son Ganapati in the beginning of his writing.[2] However, despite these invocations, he may have been a Srivaishnava (a follower of the Visishtadvaita philosophy preached by 12th century philosopher Ramanujacharya), there being examples of other Srivaishnava poets (who wrote in Kannada) who praised the God Shiva, Parvati and Ganapati in their writings.
There is also controversy about when he wrote Jaimini Bharata. Scholars have assigned him various dates, the earliest being c. 1415,
[3] but more generally mid–16th century,[4][5] and late 17th century.[1][3][6] The 16th century or earlier dating is based on similarities between Virupaksha Pandita's (1584 CE) Chennabasava Purana and Lakshmisa's work,[7] while the 17th century dating is based on the claim that no author, Brahmin or otherwise, has referenced his writing and directly mentioned his name in any literature during the period 15th century through late 17th century. Whereas, authors who do mention Lakshmisa regularly in their writings are from the 18th century.[3]
Magnum opus
The Jaimini Bharata, one of the most well known stories in
Kannada literature was written in the tradition of sage Jaimini. It has remained popular through the centuries. In a writing full of similes and metaphors, puns and alliterations, Lakshmisa created a human tale out of an epic, earning him the honorific "Upamalola" ("One who revels in similes and metaphors") and "Nadalola" ("Master of melody").writing focusses on the events following the battle when the victorious Pandavas conducted the Ashvamedha Yagna to expiate the sin of fratricide. The writing differs entirely from Kumara Vyasa's rendering of the same epic (called Karnata Bharata Kathamanjari) of c. 1430, both in metre and content. Kumara Vyasa had used the flexible bhamini shatpadi metre and followed the Vyasa tradition where as Lakshmisa used the vardhaka shatpadi metre which is well suited for figures of speech. The work has been criticised though, for failing to achieve the level of devotion towards Hindu God Krishna that Kumara Vyasa managed in the various stages of his story.
However, Lakshmisa is considered a successful story-teller with an ability to narrate the Upakhyanas ("story within a story"), describe the physical beauty of a women at length and to hold the reader with his rich Kannada diction and rhetoric. The writing has been considered an asset to the enlightened reader as well as those not so educated. Lakshmisa authored some poems reminiscent of the
Haridasa poetry but without the same success.[4]
-------------------------------------------------------------------------------------------------
ದೇವನೂರಿನಲ್ಲಿ ಲಕ್ಷ್ಮೀಶ ಕವಿ ಪ್ರತಿಮೆ : ಕ್ರಿ.ಶ. 1550ರ ಸುಮಾರಿನಲ್ಲಿ ಜೀವಿಸಿದ್ದ ಕನ್ನಡದ ಪ್ರಾಚೀನ ಕವಿ ಲಕ್ಷ್ಮೀಶನ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪದಲ್ಲಿರುವ ದೇವನೂರಿನ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದಲ್ಲಿ ಲಕ್ಷ್ಮೀಶ ಕವಿಯ ಪ್ರತಿಮೆಯನ್ನು ಸ್ಥಾಪಿಸಲು ಹಾಗೂ ಬಯಲು ರಂಗಮಂದಿರವೊಂದನ್ನು ನಿರ್ಮಿಸಲು, ಕಾವ್ಯ ಮಂಟಪವನ್ನು ದುರಸ್ತಿಗೊಳಿಸಲು ಸರಕಾರ 1.55 ಲಕ್ಷ ರುಪಾಯಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಬಿಡುಗಡೆ ಮಾಡಿದೆ. 50 ಸಾವಿರ ರುಪಾಯಿ ವೆಚ್ಚದಲ್ಲಿ ಕವಿಯ ಪ್ರತಿಮೆಯನ್ನು ಸಿದ್ದಗೊಳಿಸಲಾಗಿದೆ. ಮಹೋತ್ಸವ ದೇವನೂರಿನಲ್ಲಿ ೨೦೦೨ ಜುಲೈ 28ರಂದು ನೆರವೇರಿದೆ.
-------------------------------------------------------------------------------------------------
ಜೈಮಿನಿ ಭಾರತ
ಕಾವ್ಯದ ಹೆಸರು: ಜೈಮಿನಿ ಭಾರತ
ಕವಿಯ ಹೆಸರು: ಲಕ್ಷ್ಮೀಶ
ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ)
ಸ್ಥಳ/ಸ್ಥಳಗಳು: ಚಿಕ್ಕಮಗಳೂರು ಜಿಲ್ಲೆಯ ದೇವನೂರು. (ಗುಲ್ಬರ್ಗ ಜಿಲ್ಲೆಯ ಸುರಪುರ.
ಮತ-ಧರ್ಮ: ಬ್ರಾಹ್ಮಣ
ಆಶ್ರಯದಾತರು: ಯಾವ ರಾಜನೂ ಇಲ್ಲ
ಬಿರುದುಗಳು: ಕರ್ನಾಟ ಕವಿಚೂತವನ ಚೈತ್ರ, ಉಪಮಾಲೋಲ.
ಸಾಹಿತ್ಯಪ್ರಕಾರ: ಕಾವ್ಯ
ಛಂದೋರೂಪ: ವಾರ್ಧಕ ಷಟ್ಪದಿ.
ಹಸ್ತಪ್ರತಿಗಳು: ಓಲೆಯ ಗರಿ ಮತ್ತು ಕಾಗದ
ಪ್ರಕಟವಾದ ವರ್ಷ: 1848, (ಕಲ್ಲಚ್ಚಿನ ಪ್ರತಿ), 1875, ವ್ಯಾಖ್ಯಾನಸಹಿತವಾಗಿ (ಕಲ್ಲಚ್ಚಿನ ಪ್ರತಿ)
ಸಂಪಾದಕರು: ವೆಂಕಟ ರಂಗೋ ಕಟ್ಟಿ (1875)(ಕಲ್ಲಚ್ಚಿನ ಪ್ರತಿ), ಹೊಳಕಲ್ ಶ್ರೀನಿವಾಸ ಪಂಡಿತ, 1875, ಮುದ್ರಿತ ಪ್ರತಿ.
ಪ್ರಕಾಶಕರು: ಕೃಷ್ಣರಾಜ ಮುದ್ರಾಕ್ಷರ ಶಾಲೆ, ಮೈಸೂರು.
ನಂತರದ ಆವೃತ್ತಿಗಳು:
ಅ. ‘ಟೀಕಾ ಜೈಮಿನಿ ಭಾರತವು’ ( ವ್ಯಾಖ್ಯಾನ ಮತ್ತು ಸಾರಾಂಶ ಸಹಿತ), ಬಿ.ಎಂ.ಸಿದ್ದಲಿಂಗ ಶಾಸ್ತ್ರೀ, 1897, ವಾಣೀವಿಲಾಸ ಬುಕ್ ಡಿಪೋ, ಬೆಂಗಳೂರು.
ಆ. ‘ಜೈಮಿನಿ ಭಾರತ’(ಮೂರು ಸಂಪುಟಗಳಲ್ಲಿ) ( ವ್ಯಾಖ್ಯಾನ ಮತ್ತು ಸಾರಾಂಶ ಸಹಿತ), 1888, ರಾಜರಾಜೇಶ್ವರಿ ಮುದ್ರಾಕ್ಷರ ಶಾಲೆ, ಬೆಂಗಳೂರು
ಇ. ‘ಕರ್ಣಾಟಕ ಜೈಮಿನಿ ಭಾರತವು’, ಪಿ.ಆರ್. ಕರಿಬಸವ ಶಾಸ್ತ್ರೀ, 1912.
ಈ. ಪ್ರತಿಪದಾರ್ಥ ಮತ್ತು ತಾತ್ಪರ್ಯಗಳೊಂದಿಗೆ, ಸಂ. ದೊಡ್ಡಬೆಲೆ ನಾರಾಯಣಶಾಸ್ತ್ರೀ, 1912, ಟಿ.ಎನ್. ಕೃಷ್ಣಯ್ಯಶೆಟ್ಟಿ, ಬೆಂಗಳೂರು
ಉ. ಸಂ. ಬಿ. ಭೀಮಸೇನರಾವ್, 1939, ಟಿ.ಎನ್. ಕೃಷ್ಣಯ್ಯಶೆಟ್ಟಿ, ಬೆಂಗಳೂರು
ಊ. ‘ಜೈಮಿನೀಭಾರತ ಸಂಗ್ರಹ’, ಸಂ. ದೇ.ಜವರೇಗೌಡ, 1959, ವಯಸ್ಕರ ಶಿಕ್ಷಣ ಸಮಿತಿ, ಮೈಸೂರು.
ಋ. ಸಂ. ಬಿ.ಎಸ್. ಸಣ್ಣಯ್ಯ ಮತ್ತು ರಾಮೇಗೌಡ, 1993, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
(ಇನ್ನೂ ಹಲವು ಜನಪ್ರಿಯ ಆವೃತ್ತಿಗಳು, ಸಂಗ್ರಹಗಳು ಮತ್ತು ಭಾಗಶಃ ಪ್ರಕಟಣೆಗಳು ಹೊರಬಂದಿವೆ.)
ಕಿರು ಪರಿಚಯ: ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಜೈಮಿನಿ ಭಾರತವು ಕನ್ನಡದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದಾಗಿತ್ತು. ಗಮಕ ಪರಂಪರೆಯ ನೆರವಿನಿಂದ ಹಳ್ಳಹಳ್ಳಿಗಳಲ್ಲಿಯೂ ಪ್ರಚುರವಾಗಿದ್ದ ಈ ಕಾವ್ಯದ ಅನೇಕ ಸನ್ನಿವೇಶಗಳು ನಾಟಕರೂಪವನ್ನೂ ಪಡೆಯುತ್ತಿದ್ದವು. ಜೈಮಿನಿ ಭಾರತವು, ಸಂಸ್ಕೃತದಲ್ಲಿ ಜೈಮಿನಿ ಎಂಬ ಋಷಿಯಿಂದ ರಚಿತವಾದ ಕಾವ್ಯ. ಲಕ್ಷ್ಮೀಶನ ಕಾವ್ಯವು ಯಾವುದೇ ಅರ್ಥದಲ್ಲಿಯೂ ಮೂಲದ ಕನ್ನಡ ಅನುವಾದವಲ್ಲ. ಕವಿಯು ತನಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸಿ ಅನೇಕ ನೀರಸವಾದ ಭಾಗಗಳನ್ನು ಬಿಟ್ಟಿದ್ದಾನೆ ಮತ್ತು ತನ್ನದೇ ಆದ ಹೊಸ ಾಯಾಮಗಳನ್ನು ಸೇರಿಸಿದ್ದಾನೆ. ಈ ಕಾವ್ಯದಲ್ಲಿ 34 ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ 1936 ಪದ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ. ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ಕೃಷ್ಣನ ದೈವಿಕತೆಯನ್ನು ಖಚಿತವಾಗಿ ಸ್ಥಾಪಿಸುವ ಮತ್ತು ಅರ್ಜುನನಂತಹ ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ. ಅಶ್ವಮೇಧಯಾಗವನ್ನು ಮಾಡಬೇಕೆಂಬ ಧರ್ಮರಾಯನ ತೀರ್ಮಾನ ಮತ್ತು ಅದರ ಪೂರ್ವಸಿದ್ಧತೆ, ಪರಿಣಾಮಗಳನ್ನು ಬಹಳ ವಿವರವಾಗಿ ನಿರೂಪಿಸಲಾಗಿದೆ. ಅರ್ಜುನನು ತನಗಿಂತಲೂ ಎಷ್ಟೋ ಪಟ್ಟು ಬಲಶಾಲಿಗಳಾದ, ಆದರೆ ಕೃಷ್ಣನ ಬಗ್ಗೆ ಪ್ರಶ್ನಾತೀತವಾದ ಗೌರವವನ್ನು ಹೊಂದಿರುವ ಅನೇಕ ವೀರರನ್ನು ಅರ್ಜುನನು ಭೇಟಿಯಾಗುತ್ತಾನೆ. ಸುಧನ್ವ, ಹಂಸಧ್ವಜ, ಯೌವನಾಶ್ವ ಮುಂತಾದ ಅನೇಕ ವೀರರು ಅರ್ಜುನನನ್ನು ಸೋಲಿನ ಅಂಚಿಗೆ ತರುತ್ತಾರೆ. ಆದರೆ, ಎಲ್ಲ ಸಂದರ್ಭಗಳಲ್ಲಿಯೂ ಅವನು ಕೃಷ್ಣನ ಅನುಗ್ರಹದಿಂದ ಗೆಲುವು ಪಡೆಯುತ್ತಾನೆ ಮತ್ತು ಮರೆಯಲಾಗದ ಪಾಠವನ್ನು ಕಲಿಯುತ್ತಾನೆ. ಆದ್ದರಿಂದ ಜೈಮಿನಿ ಭಾರತವು ಪರಾಕ್ರಮವನ್ನು ಹಿನ್ನೆಲೆಗೆ ಸರಿಸಿ, ಭಕ್ತಿಯನ್ನು ಮುಂದೆಮಾಡುವ ಭಕ್ತಿಯುಗದ ಉತ್ಪನ್ನವೆಂದರೂ ತಪ್ಪಿಲ್ಲ.
ಆದರೆ, ಲಕ್ಷ್ಮೀಶನ ಕೃತಿಯ ಜನಪ್ರಿಯತೆಗೆ,ತನ್ನ ಕಾವ್ಯವಸ್ತುವಿನ ನಿರ್ವಹಣೆಯಲ್ಲಿ ಕವಿಯು ತೋರಿಸಿರುವ ಅನುಪಮವಾದ ಕುಶಲತೆಯೇ ಕಾರಣ. ವಾಸ್ತವವಾಗಿ ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು. ಯಾಗದ ಕುದುರೆಯ ಹಿಂದೆ ಚಲಿಸುತ್ತಾ ಲೋಕಪರ್ಯಟನೆ ಮಾಡುವ ಅರ್ಜುನನು ಈ ಕಥೆಗಳನ್ನು ಪೋಣಿಸುವ ದಾರ. ಆದರೆ, ಈ ಕಾವ್ಯದ್ದು, ಬಿಡುಬೀಸಾಗಿ ಚಲಿಸುವ ನಿಧಾನಗತಿಯೇ ವಿನಾ ಯುದ್ಧಕಾತರವಾದ ನಾಗಾಲೋಟವಲ್ಲ. ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಅವನು ನಿಸರ್ಗಸೌಂದರ್ಯವನ್ನು ಗುರುತಿಸಬಲ್ಲ. ಅಂತೆಯೇ ಮನುಷ್ಯಸ್ವಭಾವದ ಆಳವಾದ ಪರಿಚಯವೂ ಅವನಿಗಿದೆ. ಈ ಕಾವ್ಯದಲ್ಲಿ ಬರುವ ಸೀತಾಪರಿತ್ಯಾಗದ ಹೃದಯಸ್ಪರ್ಶಿಯಾಗಿದ್ದು, ಸರಿಯಾಗಿ ವ್ಯಾಖ್ಯಾನ ಮಾಡಿದಾಗ ಅದು ಸ್ತ್ರೀವಾದೀ ಆಯಾಮಗಳನ್ನು ಪಡೆಯಬಲ್ಲುದು. ಚಂಡಿ-ಉದ್ಧಾಲಕರ ಪ್ರಸಂಗದಲ್ಲಿ ಲಕ್ಷ್ಮೀಶನ ಹಾಸ್ಯಪ್ರಜ್ಞೆಯು ಪ್ರಖರವಾಗಿ ಕಂಡುಬರುತ್ತದೆ. ಚಂದ್ರಹಾಸನ ಕಥೆಯು ಕನ್ನಡ ಓದುಗರಿಗೆ ಪ್ರಿಯವಾದ ಇನ್ನೊಂದು ಸಂದರ್ಭ. ಕವಿಯು ತನ್ನ ಕಾವ್ಯದಲ್ಲಿ ವೀರ, ಶೃಂಗಾರ, ಕರುಣ, ಹಾಸ್ಯ ಮುಂತಾದ ರಸಗಳನ್ನು ಅಂತೆಯೇ ಭಕ್ತಿಯಂತಹ ಭಾವನೆಗಳನ್ನು ನಿರೂಪಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾನೆ. ಈ ಕವಿಯ ಪ್ರತಿಭೆಯು ಅವನು ಬಳಸುವ ಉಪಮೆಗಳಲ್ಲಿ ಹಾಗೂ ಸಂಗೀತಕ್ಕೆ ಸಮೀಪವೆನ್ನುವಷ್ಟು ಮಧುರವಾದ ಭಾಷೆಯ ಬಳಕೆಯಲ್ಲಿ ನಿರ್ದಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಅವನನ್ನು ‘ಉಪಮಾಲೋಲ’, ‘ನಾದಲೋಲ’ ಎಂದೇ ಕರೆಯಲಾಗಿದೆ.
ಕನ್ನಡದ ಶ್ರೇಷ್ಠ ವಿಮರ್ಶಕರಾದ ಕುವೆಂಪು, ಬೇಂದ್ರೆ, ಮಾಸ್ತಿ, ಕುರ್ತಕೋಟಿ, ಚಿ.ಎನ್. ರಾಮಚಂದ್ರನ್ ಅವರು ಲಕ್ಷ್ಮೀಶನ ಬಗ್ಗೆ ವಿವರವಾದ ಮತ್ತು ಒಳನೋಟಗಳಿಂದ ಕೂಡಿದ ವಿಮರ್ಶೆಯನ್ನು ಮಾಡಿದ್ದಾರೆ.

( http://www.classicalkannada.org/DataBase/KANNADA%20UNICODE%20HTML/Literature%20Kannada%20HTML/JAIMINI%20BHARATA.htm )

ವಿದ್ಯುನ್ಮಾನ ಲಿಂಕಿನಲ್ಲಿ ಮೇಲಿನ ಎಲ್ಲ ಮಾಹಿತಿ ಲಭ್ಯ.
------------------------------------------------------------------------------------------------
ಜೈಮಿನಿ ಭಾರತ
Wikipedia ಇಂದ
ಲಕ್ಷ್ಮೀಶನ ಕೃತಿಯಾದ ಜೈಮಿನಿ ಭಾರತದಲ್ಲಿ ಮಹಾಭಾರತದ ಕಥೆಯನ್ನು ಹೇಳಿದರೂ ಇದರಲ್ಲಿ ವೀರ ರಸ ಪ್ರಧಾನವಾಗಿ ಪ್ರತಿಪಾದಿತವಾದರೂ ಮಿತವಾಗಿ ಭಕ್ತಿ ಮತ್ತು ಶೃಂಗಾರ ವರ್ಣನೆಗಳನ್ನೂ ಒಳಗೊಂಡಿದೆ. ಜೈಮಿನಿ ಭಾರತವು ಒಂದು ಕಥೆ ಎನ್ನುವುದಕ್ಕಿಂತ ಕಥಾಸಂಗ್ರಹವೆನ್ನಲು ಯೋಗ್ಯವಾಗಿದೆ. ಕಾವ್ಯದಲ್ಲಿ ಪಾಂಡವರ ಕಥೆ ಆನುಷಂಗಿಕವಾಗಿದ್ದು ಕೃಷ್ಣಚರಿತೆಯ ಪ್ರಕಾಶಕ್ಕೆ ಹೆಚ್ಚಿನ ಮಹತ್ವ ನೀಡಿರುವುದರಿಂದ ಇದನ್ನು ಕೃಷ್ಣಭಕ್ತರ ಕಥಾಗುಚ್ಛವಾಗಿ ನಿರೂಪಿಸಿದ್ದಾನೆ. ಲಕ್ಷೀಶನ "ಸಂಸ್ಕೃತ ಜೈಮಿನಿಭಾರತ"ದಲ್ಲಿ ಕಥೆಯ ಏಕತೆಗಿಂತ ಭಾಗವತ ದೃಷ್ಟಿಯ ಏಕತೆ ಇದರ ವಿಶೇಷವೆನ್ನಬಹುದು. ಈ ಜೈಮಿನಿಭಾರತವನ್ನು ಮೊದಲ ೧೦ ಪರ್ವಗಳನ್ನು ಕುಮಾರವ್ಯಾಸ ಕನ್ನಡಕ್ಕೆ ತಂದರೆ ಉಳಿದನ್ನು ತಿಮ್ಮಣಕವಿಯು ಕನ್ನಡದಲ್ಲಿ ಜೈಮಿನಿಭಾರತವನ್ನು ಮೂಡಿಸಿದ್ದಾರೆ
-------------------------------------------------------------------------------------------------
JAIMINI BHARATA

ಜೈಮಿನಿ ಭಾರತ (Jaimini Bharata)
jaimini BArata
The Epic Bharata by Jaimini (Sanskrit Original)
Lakshmesha (lakSmIsha)
16th century (1550 A.D.)
Devanuru (dEvanUru) in Chikkamagalur district. (Surapura in Gulbarga district??)
Brahmana
None
Karnata Kavichutavana Chaitra 2. Upamaa Lola
Poetry
Vardhaka Shatpadi
Palm Leaf and Paper manuscripts
1848 (Stone Etching) 1875, Edited with Commentary Stone etching.
Venkata Rango Katti (1875, Stone etched edition.), Holakal Srinivasa Pandita (1875, Printed Edition)
Krishnaraja Mudrakshra Shaale, Mysore.
1. ‘Teeka Jaimini Bharatavu’ Edited with commentary and summary by B.M.Siddalinga Shastry, 1897, published by vanivilasa Book Depot, Bangalore 2. ‘Jaimini Bharata’ edited with commentary and summary by Dakshinamurthy Shastry in three volumes, 1888, Rajarajeshvari Mudrakshara Shaale, Bangalore 3. ‘Karnataka Jaimini Bharatavu’, edited by P.R.Karibasava Shastry, 1912, 4. Edited by Doddabele Narayana Shastry with word by word meaning and summary , 1912, T.N.Krshnaiah Shetty, Bangalore. 5. Edited by B.Bheemasena Rao, 1939, published by T.N.Krishnaaih Shetty, Bangalore 6. ‘Jaimini Bharata Sangraha’, Abridged version edited by De. Javaregowda, 1959, published by Vayaskara Shikshana Samiti, Mysore 7. B.S. Sannaiah and Rame Gowda, 1993, Mysore University, Mysore. (Many editions which have published this epic in parts and a few abridged versions are not mentioned here.)
Jaimini Bharata was one of the most popular classics in Kannada during the nineteenth and the former half of the twentieth century. It was recited in many villages with the help of Gamaka tradition and mnay episodes in the work were perennial favorites even for dramatisation. Jaimini Bharata is a re creation of the Sanskrit work written by the sage Jaimini. This is not a verbatim translation by any strech of imagination and Lakshmeesha has made use of the poetic freddom to omit dry passages and include quite a few dimensions of his own. It contains 34 chapters constituiting 1936 poems in Vardhaka shatpadi. This work focuses on the story of Mahaharata after the ascension of Dharmaraya to the throne in the aftermath of the great war of Mahabharata. Actually Lakshmeesha has srived successfully to re establish the greatness of Krishna and to cut down arrogant warriors such as Arjuna to human size. Dharamaraya’s decision to perform the ‘Ashvamaedha Yaga’ and its consequences are delineated in great detail. Arujuna confronts many heroes who are more valiant than Arjuna but have absolute respect for Krishna. Sudhanava, Youvanashva, Hamsadhvaja, Chandrhasa and a host of others bring Arjuna to the brink of defeat. However he is saved by the grace of Krishna and learns the lesson of his life. Hence, Jaimini Bharata is essentially a product of the bhakti movement where Valour becomes secondary.However the popularity of ‘Jaimini Bhrata’ is an out come of the consummate skills shown by the poet in the handling of his themes. Jaimini Bharata is essentially a bunch of independent stories linked by Arjuna’s moorings across the country escorting the sacrificial horse. But it is more of a leisurely stroll rather than a hectic adventure. Lakshmeesha knows the art of narration and has a command over language. He has an eye for the bounties of nature and is veryconversant with human emotions. The episode on ‘Seetha Parityaga’ from Ramayana is heart rending and has an under current of feminism at least in the context of proper interpretation. His sense of humour is brought out in the episode of Chandi and Uddhalaka. The story of Chandrahasa is another favorite with Kannada readers. The poets finds sufficient space for veera,shrungara and bhakti and delineates all these ‘rasa’s very competently. The art of the poets is particualarly incandescent in his use of simelies and his abilty to create melody that is almost akin to music. He is called ‘upamalola’. Some of the best minds in Kannada such as Kuvempu, Bendre, Masti, Kurtakoti and C.N.ramachandran have writen extensively and insightfully on this work.
References: 1. ‘Kavi Lakshmeesha’, 1933, Kannada Sangha, Chikkamagalur.
2. ‘Lakshmeesha’, 1955, (2nd Print) N.Anantarangachar, Prasaranga, Mysore University, Mysore.
3. ‘Kavi Lakshmeeshana Kavyalankara Vaihava’, R.N.Malagi, 1960
4. ‘Kavyavihara’, Kuvempu, Mysore
5. ‘Sahityada Virat Svaropa’, D.R.Bendre, 1975, Samaja Pustakalaya, Dharawada.
6. Lakshmeeshana Jaimini Bharata-ondu Adhyayana, Vamana D. Bendre, 1979, Geetha Book House, Mysore.
-------------------------------------------------------------------------------------------------
ಲಕ್ಷ್ಮೀಶ ಕವಿಯ ಜೈಮಿನಿ ಭಾರತದ ಹೆಸರಿನಲ್ಲೊಂದು ಬ್ಲಾಗ್ ಇದೆ.ಕೆಳಗಿನ ವಿದ್ಯುನ್ಮಾನ ಲಿಂಕಿನಲ್ಲಿ ಮಾಹಿತಿ ವೀಕ್ಷಿಸಬಹುದು.
-------------------------------------------------------------------------------------------------

ಕಾಮೆಂಟ್‌ಗಳು

  1. kannada dalli eshtondu gnana bhandaravide endu gotthe iralilla !!. jeevana videe bare dudumeyalli kaledu eaga galistigintha kalakondadde jaasti antha anisuthe ?. Engish vyamohakke olagagi kannada marethu eaga tabbaliya baduku anisutthe. 1 % kooda thilidukollalilla antha besaravagide. odagara sankye ilimukha aagi pustakalagaloo siguthilla.

    ಪ್ರತ್ಯುತ್ತರಅಳಿಸಿ
  2. We are also motivated to know more about Jaimini Bharata. Please let us know where these books are available.

    ಪ್ರತ್ಯುತ್ತರಅಳಿಸಿ
  3. We are forming a group to study on Jaimini Bharata. Anybody interested can join us.
    A resident of Devanur

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.