ವಿಷಯಕ್ಕೆ ಹೋಗಿ

ಉಪಾಸನ ಮೋಹನ್ ಹಾಡು ಹೇಳಿಕೊಟ್ಟಿದ್ದು

ಹಾಡೋದ ಕಲಿತರು ಆಡೋ ಹಳ್ಳಿ ಮಕ್ಕಳು
ಈ ಲೇಖನ ಬರೆದಿದ್ದು ನನ್ನ ಸ್ನೇಹಿತ : ಎಚ್.ಬಿ. ಕಿರಣ್ ಕುಮಾರ್ .ಶಾಲಾ ಮಕ್ಕಳು ಒಟ್ಟಾಗಿ ಹಾಡಿದ್ದು ಇದನ್ನು ಬರೆಯಲು ಸ್ಪೂರ್ಥಿಯಂತೆ.

ಹಳ್ಳಿ ಮಕ್ಕಳಲ್ಲಿ ಹಾಡುಗಾರಿಕೆಗೆ ಹೇಳಿ ಮಾಡಿಸಿದ ಕಂಠ ಇರುತ್ತದೆ. ಆದರೆ ಅವಶ್ಯಕ ತರಬೇತಿ, ಸೂಕ್ತ ವೇದಿಕೆಯ ಕೊರತೆಯಿಂದ ಪ್ರತಿಭೆ ಸ್ಪೋಟಗೊಂಡು ಪ್ರಖ್ಯಾತಿಯಾಗದೆ ತನ್ನಲ್ಲಿಯೇ ಹುದುಗಿ ಹೋಗುತ್ತವೆ. ಕೆಲವರು ಪಟ್ಟಣಕ್ಕೆ ತೆರಳಿ ಸಮರ್ಪಕ ತರಬೇತಿ ಪಡೆದು ಸಾಧನೆ ಮಾಡಿದವರೂ ಇದ್ದಾರೆ. ಆದರೂ ದೈವದತ್ತವಾಗಿ ಬಂದ ಕಂಠ ಮಾಧುರ್ಯವನ್ನು ಸಮರ್ಪಕವಾಗಿ ಬಳಕೆಯಾಗದೆ ಕೇವಲ 'ಬಾತ್ರೂಂ ಸಿಂಗರ್' ಆಗಿಯೆ ಕೊನೆಯವರಿಗೂ ಉಳಿಯುವವರ ಸಂಖ್ಯೆಯೇ ಹೆಚ್ಚು.

ಹಳ್ಳಿಗಳಲ್ಲಿ ಪ್ರೋತ್ಸಾಹ ಹಾಗೂ ತರಬೇತಿಯ ಕೊರತೆಯಿಂದ ಅಪ್ರತಿಮ ಪ್ರತಿಭೆಗಳು ಬೆಳಕಿಗೆ ಬರುವ ಮುಂಚೆಯೆ ಕಮರಿ ಹೋಗುತ್ತಿರುವುದನ್ನು ಹುಳಿಯಾರು ಸಮೀಪದ ಬಳ್ಳೆಕಟ್ಟೆ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಶ್ರೀಮತಿ ಕವಿತಾಕಿರಣ್ ಅವರು ಮನಗಂಡಿರುವಂತೆ ಕಾಣುತ್ತದೆ. ಹಾಗಾಗಿಯೇ ತಮ್ಮ ಶಾಲೆಗೆ ಸೇರಿದ ಮಕ್ಕಳು ಕೇವಲ ಪಠ್ಯದ ಅಭ್ಯಾಸಕ್ಕೆ ಮಾತ್ರ ಸೀಮಿತಗೊಳಿಸದೆ 'ಇಂಗೀಷ್ ಸ್ಪೀಕಿಂಗ್' 'ಕ್ಲೇ ವಕ್ಸ್' 'ರಂಗಗೀತೆ' 'ಪೈಂಟಿಂಗ್' ಹೀಗೆ ಹತ್ತು ಹಲವು ಪಠ್ಯೇತರ ಚಟುವಟಿಕೆಗಳ ಕಲಿಕಾ ವೇದಿಕೆ ನಿರ್ಮಿಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಮಕ್ಕಳು ವಿದ್ಯಾರ್ಥಿ ಜೀವನವನ್ನು ಅರ್ಥಪೂರ್ಣವಾಗಿ ಸರ್ವತೋಮುಖ ಬೆಳವಣಿಗೆಯೊಂದಿಗೆ ಪೂರೈಸಿ ಬಹುಮುಖ ಪ್ರತಿಭೆಗಳಾಗಿ ಹೊರಹೊಮ್ಮಲಿ ಎಂಬ ಆಶಯ, ಕಾಳಜಿ ಅಡಗಿದೆ.

ಇದರ ಮುಂದುವರಿದ ಭಾಗವಾಗಿ ಸುಗಮ ಸಂಗೀತದ ಪ್ರಕಾರಗಳನ್ನು ರಾಜ್ಯದಾದ್ಯಂತ ಹರಡಿ ಜನಮಾನಸಕ್ಕೆ ಮುಟ್ಟಿಸಲು ಪಣತೊಟ್ಟು ಈಗಾಗಲೇ ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಭದ್ರಾವತಿ, ಶಿವಮೊಗ್ಗ, ಮಂಡ್ಯ, ದಾವಣಗೆರೆ, ಶೃಂಗೇರಿ, ಕನಕಪುರ ಮುಂತಾದ ಜಿಲ್ಲಾ ಕೇಂದ್ರದಲ್ಲಿನ 1800 ಕ್ಕೂ ಹೆಚ್ಚು ಮಕ್ಕಳಿಗೆ ಭಾವಗೀತೆಯ ತರಬೇತಿ ನೀಡುತ್ತಿರುವ ಬೆಂಗಳೂರಿನ ಸ್ವರಸುರಭಿ ಸಂಸ್ಥೆಯ ನುರಿತ ಹಾಡುಗಾರರನ್ನು ಇದೇ ಪ್ರಪ್ರಥಮ ಎಂಬಂತೆ ಗ್ರಾಮೀಣ ಪ್ರದೇಶಕ್ಕೆ ಕರೆಸಿ ಇಲ್ಲಿನ ಆಡೋ ಮಕ್ಕಳಿಗೆ ಹಾಡುವುದ ಕಲಿಸುವ ಸಲುವಾಗಿ ಇತ್ತೀಚೆಗಷ್ಟೆ ಭಾವಗೀತೆಗಳ ಕಲಿಕಾ ಶಿಬಿರ ಆಯೋಜಿಸುವ ಮೂಲಕ ದಿಟ್ಟ ಹೆಜ್ಜೆಹಿಟ್ಟರು.

ತಮ್ಮ ಶಾಲೆಯ ಮಕ್ಕಳಲ್ಲದೆ ಅಕ್ಕ-ಪಕ್ಕದ ಊರುಗಳ ಮಕ್ಕಳಿಗೂ ಶಿಬಿರದಲ್ಲಿ ಪಾಲ್ಗೊಳ್ಳುವ ಮುಕ್ತ ಅವಕಾಶ ಕಲ್ಪಿಸಿ, ಮ್ಯೂಸಿಕ್ ಟ್ರ್ಯಾಕ್ ನೊಂದಿಗೆ ಶಿವರುದ್ರಪ್ಪನವರ 'ಜೋಕಾಲಿ ಆಡೋಣ ಬನ್ನಿರೋ' ಅಡಿಗರ 'ಹಣತೆಗಳಿವು ಹಣತೆಗಳಿವು' ಲಕ್ಷ್ಮೀನಾರಾಯಣ ಭಟ್ಟರ 'ಬಾ ಬಾ ಓ ಬೆಳಕೆ' ಹೀಗೆ ಹತ್ತಾರು ಹೆಸರಾಂತ ಕವಿವರ್ಯರ ಭಾವಗೀತೆಗಳನ್ನು ಆಕಾಶವಾಣಿ ಸಂಯೋಜಕ, ಗಾಯಕ, ಸುಗಮ ಸಂಗೀತ ಇತಿಹಾಸದಲ್ಲೇ ಪ್ರಪ್ರಥಮವಾಗಿ 100 ಭಾವಗೀತೆಗಳ ಟ್ರ್ಯಾಕ್ ಹೊರತಂದ ಹೆಗ್ಗಳಿಕೆ ವೊಂದಿರುವ ಉಪಾಸನಾ ಮೋಹನ್ ಅವರು ಇಲ್ಲಿನ 100 ಕ್ಕೂ ಹೆಚ್ಚು ಹಳ್ಳಿ ಮಕ್ಕಳಿಗೆ ಲಯಬದ್ದವಾಗಿಯೂ, ಸ್ವರಬದ್ದವಾಗಿಯೂ, ಶೃತಿಬದ್ದವಾಗಿಯೂ ಹಾಡುವುದ ಕಲಿಸಿ ಕೊಟ್ಟರು.

ಬೆರಳೆಣಿಕೆ ದಿನಗಳಷ್ಟು ಈ ಕಲಿಕಾ ಯಾತ್ರೆ ನಡೆದಿದ್ದರೂ ಕೂಡ ಎಂತಹವರಿಗೂ ಆಶ್ಚರ್ಯವಾಗಬಹುದು ಮುಕ್ತಾಯ ಸಮಾರಂಭದಲ್ಲಿ ಶಿಬಿರಾರ್ಥಿಗಳೇ ಸಂಗೀತ ಸಂಜೆಯನ್ನು ಯಾವುದೇ ಲೋಪ ಹಾಗೂ ಕಳಂಕ ಬಾರದಿದ್ದ ರೀತಿ ನಡೆಸಿಕೊಟ್ಟರು. ಎಂದೂ ವೇದಿಕೆಯಲ್ಲಿ ಮಾತಾಡುವುದು, ಹಾಡುವುದು ಹಾಗಿರಲಿ ನಿಲ್ಲೂವುದಕ್ಕೂ ಹೆದರುವ ಮಕ್ಕಳು ಅಂದು ಸುಶ್ರ್ಯಾವವಾಗಿ, ಸುಲಲಿತವಾಗಿ, ನಿರ್ಭಯವಾಗಿ ಹಾಡಿ ಪೋಷಕರು, ಶಿಕ್ಷಕರು, ಸಾರ್ವಜನಿಕರನ್ನು ಬೆಕ್ಕಸ ಬೆರಗಾಗುವಂತೆ ಮಾಡಿ ಚಪ್ಪಾಳೆ, ಪ್ರಶಂಸೆಯನ್ನು ಪಡೆದುಕೊಂಡರು.

ಹಾಗಂದ ಮಾತ್ರಕ್ಕೆ ಈಗಾಗಲೇ ಇವರೆಲ್ಲ ಸ್ಟಾರ್ ಸಿಂಗರ್ಸ್ ಆಗಿ ಹೊರಹೊಮ್ಮಿದರು ಎಂದರ್ಥವಲ್ಲ. ಸಿನಿಮಾ ಗೀತೆಗಳ ಕಡೆ ಆಕರ್ಷಿತರದವರನ್ನು ಸುಗಮ ಸಂಗೀತದೆಡೆ ಆಸಕ್ತಿ, ಕುತೂಹಲ ಕೆರಳಿಸುವ ಹಾಗೂ ಇರುವ ಕಂಠವನ್ನು ಟ್ಯೂನಪ್ ಮಾಡಿದಾದಲ್ಲಿ ತಾವೂ ಯಶಸ್ವಿಯಾಗಿ ಹಾಡಬಲ್ಲೆವು ಎಂಬ ಛಲ ಕುಡಿಯೊಡೆಸುವ ಕಿರು ಪ್ರಯತ್ನ ಇದಾಗಿದೆ. ಕಠಿಣ ಅಭ್ಯಾಸ, ತಜ್ಞರ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ನಿರಂತರವಾಗಿದ್ದರೆ ಸುಗಮ ಸಂಗೀತ ಕ್ಷೇತಕ್ಕ್ರೆ ಸಿ.ಅಶ್ವಥ್, ರಾಜು ಅನಂತಸ್ವಾಮಿ ಅವರ ಅಗಲಿಕೆಯಿಂದಾಗಿರುವ ನಷ್ಟವನ್ನು ಸತ್ಯವಾಗಲೂ ತುಂಬಿಕೊಡಬಲ್ಲರು.

ಸಮಾರಂಭದ ಫೋಟೊ ಕೂಡ ಇಲ್ಲಿದೆ

1 : ಭಾವಗೀತೆಯ ಕಲಿಕಾ ಯತ್ರೆಯ ಉದ್ಘಾಟನೆ

2 :ತರಬೇತಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು

3 : ಉಪಾಸನ ಮೋಹನ್ ತರಬೇತಿ ನೀಡುತ್ತಿರುವುದು.

4 : ಮುಕ್ತಾಯ ಸಮಾರಂಭದಲ್ಲಿ ಶಿಬಿರಾರ್ಥಿಗಳು ಹಾಡುತ್ತಿರುವುದು

5 : ಸ್ವರಸುರಭಿ ಅಧ್ಯಕ್ಷ ಶ್ರೀಧರ್ ಅವರನ್ನು ಶ್ರೀಮತಿ ಕವಿತಾ ಅವರು ಸನ್ಮಾನಿಸುತ್ತಿರುವುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...