ಹುಳಿಯಾರು ವಿದ್ಯಾವಾರಿಧಿ ವಿದ್ಯಾರ್ಥಿಗಳೊಂದಿಗೆ ಕೃಷಿ ಸಚಿವರ ಸಂವಾದ
-------------------------------------------
ಕೃಷಿ ಸಚಿವ ರವೀಂದ್ರನಾಥ್ ಅವರು ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕೃಷಿ ವಿಚಾರವಾಗಿ ಸಂವಾದ ನಡೆಸಿದರು.
ಮೆಡಿಸಿನ್ ಸೌತೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವ, ಬಿಟಿ ಬದನೆಗಳ ದುಷ್ಪರಿಣಾಮಗಳ ಹಾಗೂ ನಿಷೇಧದ ಬಗ್ಗೆ ಗಂಭೀರ ಚರ್ಚೆಗಳು ನಡೆಯಿತು. ರೈತರ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ, ರಾಸಾಯನಿಕ ಗೊಬ್ಬರಗಳ ಸಾಧಕ ಬಾದಕಗಳ ಚಚರ್ೆಯೂ ಸಹ ಜರುಗಿತು, ಹೈವೆಯಲ್ಲಿ ಶೋ ಪ್ಲಾಂಟ್ಗಳ ಬದಲು ಹಣ್ಣಿನ ಸಸಿಗಳನ್ನು ನೆಡುವ, ಗ್ಲೋನಲ್ ವಾರ್ಮಿಂಗ್ ತಡೆಗಟ್ಟಲು ಕೃಷಿ ಚಟುವಟಿಕೆ ಹೆಚ್ಚಿಸುವ, ಜನಸಂಖ್ಯೆಗೆ ಅನುಗುಣವಾಗಿ ಬೆಳೆಗಾರರ ಸಂಖ್ಯೆಯನ್ನು ಹೆಚ್ಚಿಸಲು ಪ್ರೋತ್ಸಾಹ ಯೋಜನೆಗಳ ಜಾರಿಗೆ ತರುವ ಸಲಹೆಗಲು ಈ ಸಂವಾದದಲ್ಲಿ ಕೇಳಿ ಬಂದು.
ಸಂವಾದದ ತರುವಾಯ ಕೃಷಿ ಸಚಿವ ರವೀಂದ್ರನಾಥ್ ಅವರು ಮಾತನಾಡಿ ಮಕ್ಕಳು ಶಾಲೆಗೆ ಚಕ್ಕರ್ ಹೊಡೆದಿದಕ್ಕೆ ಕೊಡುವ ಸಮಜಾಯಿಸಿಯಿಂದ ಸುಳ್ಳು ಹೇಳುವ ಪ್ರಕ್ರಿಯೆ ಆರಂಭವಾಗುತ್ತದೆ. ಇದನ್ನು ಆದಷ್ಟು ತಡೆಗಟ್ಟಬೇಕು.ಎಕ್ಸ್ಪೋರ್ಟ್ ಆಗುವ ದಿನಸಿಗಳಲ್ಲಿ ಕಳಪೆ ಹಾಗೂ ತರಾವರಿ ದಿನಸಿಗಳನ್ನು ಮಿಕ್ಸ್ ಮಾಡುತ್ತಿದ್ದು ಹೊರರಾಜ್ಯದಲ್ಲಿ ಇವು ತಿರಸ್ಕೃತವಾಗುವ ಮೂಲಕ ರಾಜ್ಯದ ಜನರ ನಂಬಿಕೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಹಾಗಾಗಿ ಪ್ರಾಮಾಣಿಕ ವ್ಯಾಪಾರಕ್ಕೆ ಮುಂದಾಗಬೇಕು. ರೈತರು ದುಡಿಮೆಗೆ ತಕ್ಕದಾದ ಸಾಲ ಮಾಡಬೇಕು, ಉಪಕಸುಬು ಹಾಗೂ ಪರ್ಯಾಯ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ವಿದ್ಯಾವಾರಿದಿ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಕವಿತಾಕಿರಣ್, ಮುಖ್ಯ ಶಿಕ್ಷಕ ಬಿ.ಸಿ.ಗಿರೀಶ್, ತಿಮ್ಲಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣಮೂರ್ತಿ, ದಸೂಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ಬಿ.ರವಿಕುಮಾರ್, ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಕೆಂಕೆರೆ ನವೀನ್, ಬಿಜೆಪಿ ಮುಖಂಡ ಬುಲ್ಲೇನಹಳ್ಳಿ ಶಿವಪ್ರಕಾಶ್, ಬರಗೂರು ಬಸವರಾಜ್, ಕೆಂಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಪುಷ್ಪಾ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ