ಎಲ್ಲಿದ್ದಾರೆ ಅವರೆಲ್ಲ....? ನಲ್ಲೂರು ಸಿಡಿಮಿಡಿ
ಗದಗ, 19- ಎಲ್ಲಿದ್ದಾರೆ ಅವರೆಲ್ಲ....? ಮೆರವಣಿಗೆ ಸಮಿತಿ ಸಮೀಪದಲ್ಲಿಯೇ ಇಲ್ಲ.... ಮೆರವಣಿಗೆ ಸಮಿತಿ ವೇಳೆ ಮೀರುತ್ತಲಿದೆ. ಛೆ.... ಛೇ.... ಎಂದು ಅಸಮಾಧಾನ ವ್ಯಕ್ತಪಡಿಸಿ ಸಿಡಿಮಿಡಿಗೊಂಡವರು ರಾಜ್ಯಾಧ್ಯಕ್ಷ ನಲ್ಲೂರು ಪ್ರಸಾದ.
ಶುಕ್ರವಾರ ಬೆಳಗ್ಗೆ ಸರಿಯಾಗಿ 10:00 ಗಂಟೆಗೆ ಆರಂಭವಾಗಬೇಕಿದ್ದ ಸರ್ವಾಧ್ಯಕ್ಷರ ಕುಂಭ ಮೇಳದ ಮೆರವಣಿಗೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಒಂದೂವರೆ ಗಂಟೆ ವಿಳಂಬವಾಗಿದ್ದಕ್ಕೆ ಸಿಡಿಮಿಡಿಗೊಂಡಿದ್ದು ಹೀಗೆ..
ತೋಂಟದಾರ್ಯ ಶಾಲಾ ಆವರಣದಿಂದ ಸಮ್ಮೇಳನದ ಅತ್ತಿಮಬ್ಬೆ ವೇದಿಕೆವರೆಗೆ ಸಾಗಬೇಕಾಗಿದ್ದ ಮೆರವಣಿಗೆ 10:30 ಗಂಟೆ ಮೀರಿದ್ದರೂ ಚಾಲನೆ ಸಿಕ್ಕಿರಲಿಲ್ಲ.
ಮೆರವಣಿಗೆಯಲ್ಲಿ ಸರ್ವಾಧ್ಯಕ್ಷ ಡಾ. ಗೀತಾ ನಾಗಭೂಷಣ ಅವರನ್ನು ಕರೆದುಕೊಂಡು ಹೋಗಬೇಕಿದ್ದ ತೆರೆದ ಜೀಪಿಗಾಗಿ ಶಾಸಕರು, ಗದಗ ಜಿಲ್ಲಾ ಕಸಾಪ ಅಧ್ಯಕ್ಷರಿಬ್ಬರೇ ಅಲ್ಲಿ ತಡಕಾಡುತ್ತಿದ್ದರು.
ಶಾಸಕ ಬಿದರೂರು ಅತ್ತಿಂದಿತ್ತ ಶತಪಥ ಹಾಕುತ್ತಿದ್ದು, ಓಡಾಟ ನಡೆಸಿದ್ದರೆ ಹೊರೆ ಹೆಚ್ಚಾಯಿತು ಎಂಬ ಛಾಯೆಯಲ್ಲಿ ಜಿಲ್ಲಾಧ್ಯಕ್ಷ ಎ. ಬಿ. ಪಾಟೀಲರು ವಯೋಮಾನದ ಅಡ್ಡಿಯಿಂದಾಗಿ ಏಕಾಂಗಿಯಾಗಿ ಓಡಾಟದಲ್ಲಿದ್ದರು.
ನಲ್ಲೂರು ಗುಡುಗಿದರೂ, ಅಸಮಾಧಾನ ವ್ಯಕ್ತಪಡಿಸಿದರೂ, ತಮ್ಮ ಕೇಂದ್ರ ಸಮಿತಿಯಿಂದ ಕರೆ ಕಳುಹಿಸಿದರೂ ಶಾಸಕರು ಸಂಪರ್ಕಕ್ಕೆ ತಕ್ಷಣವೇ ದೊರೆಯದಿದ್ದುದಕ್ಕಾಗಿ ತಾವೇ ಆವರಣದ ಮುಖ್ಯದ್ವಾರದ ಬಳಿ ಬಂದು ನಿಂತುಕೊಂಡಿದ್ದರು. ಮರವಣಿಗೆ ಸಮಿತಿಯವರು ಎಲ್ಲಿದ್ದಾರೆ..? ಎಂದು ನಲ್ಲೂರು ಅಲ್ಲಿದ್ದವರನ್ನು ತರಾಟೆಗೂ ತಂದುಕೊಂಡರು.
ಶಾಸಕರು ಸಿಪಿಐ ರುದ್ರೇಶ ಉಜ್ಜನಕೊಪ್ಪ ಅವರನ್ನು ಕಂಡು ಕೂಡಲೇ ಪೊಲೀಸ್ ಜೀಪನ್ನು ವ್ಯವಸ್ಥೆ ಮಾಡಿಕೊಡುವಂತೆ ಕೇಳಿದರು.
ಆಪತ್ತಿನಲ್ಲಿ ಬಂತು ಪೊಲೀಸ್ ಜೀಪು
ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದಾಗಿ ಮೆರವಣಿಗೆ ರದ್ದುಪಡಿಸಿದ್ದರಿಂದ ಕೊನೆಯ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಸಮ್ಮೇಳನದ ಆರಂಭಕ್ಕೆ ತೀವ್ರ ಗಡಿಬಿಡಿಗೆ ಕಾರಣವಾಗಿತ್ತು. ಈ ಕಾರಣಕ್ಕಾಗಿಯೇ ಮೆರವಣಿಗೆಯಲ್ಲಿ ನಡೆದುಕೊಂಡು ಹೋಗಬೇಕಿದ್ದ ಸರ್ವಾಧ್ಯಕ್ಷರಿಗೆ ಮಂಡಿ ನೋವಿನಿಂದಾಗಿ ಜೀಪು ತರುವ ನಿರ್ಧಾರ ಮಾಡಲಾಗಿತ್ತು. ಆ ವೇಳೆಗಾಗಲೇ ಮುಂಚೆಯೇ ತಯಾರಿಯಲ್ಲಿ ಇರಬೇಕಾಗಿದ್ದ ಕುಂಭಗಳು ತೆಂಗಿನ ಕಾಯಿಗಳು ಆಗ ಕಾರಿನಲ್ಲಿ ತರಲಾಯಿತು.
ಕಾರು ಬಂತು. ಹೂವಿನಿಂದ ಅಲಂಕಾರ ಮಾಡಲಾಯಿತು. ಸಾಗರದ ಮಹಿಳಾ ಮೈತ್ರಿ ಡೊಳ್ಳಿನ ಮಂಡಳದವರು ಬಂದು ಡೊಳ್ಳು ಸಪ್ಪಳ ಮಾಡಿ ಹಬ್ಬದ ವಾತಾವರಣವನ್ನು ನಿರ್ಮಿಸಿದರು.ಆಡಂಬರದ ಮೆರವಣಿಗೆ ಬೇಡವೆಂದಿದ್ದೆ. ಕನ್ನಡ ತಾಯಿಯ ನುಡಿ ಹಬ್ಬ ಸರಿಯಾದ ವೇಳೆಗೆ ಚಾಲನೆಗೊಳ್ಳಬೇಕು. ದೂರದಿಂದ ಬಂದಿರುವ ಸಾಹಿತ್ಯಾಸಕ್ತರನ್ನು ಬಿಸಿಲಲ್ಲಿ ಕಾಯಿಸಬಾರದು. ನಂತರ ತರಾತುರಿಯಲ್ಲಿ ಕಾರ್ಯಕ್ರಮ ಆಗಬಾರದು ಎಂದು ಕಳಕಳಿಯನ್ನು ವ್ಯಕ್ತಪಡಿಸುತ್ತಲೇ ಹಣೆಯ ಮೇಲೆ ಮುತ್ತಿನಂತೆ ಸಾಲುಗಟ್ಟಿದ್ದ ಬೆವರು ಹನಿಗಳನ್ನು ಒರೆಸಿಕೊಳ್ಳುತ್ತಲೇ ಮೆರವಣಿಗೆಯೊಂದಿಗೆ ನಲ್ಲೂರು ಪ್ರಸಾದ ಎಲ್ಲರೊಂದಿಗೆ ಒಂದಾದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ