ಹುಳಿಯಾರಿನಲ್ಲಿ ಫೆ 10 ರಂದು ಉಚಿತ ಕೃತಕ ಕಾಲು ವಿತರಣೆ
------------------------------------
ಹುಳಿಯಾರು: ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೇವಾ ವಿಭಾಗವು, ಬೆಂಗಳೂರಿನ ಅಂಗಕಾರುಣ್ಯ ಕೇಂದ್ರ, ತುಮಕೂರಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಅಂಗವಿಕಲ ಪುನರ್ವಸತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 10 ರ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಉಚಿತ ಜೈಪುರ್ ಕೃತಕ ಕಾಲು ಹಾಗೂ ಪೋಲಿಯೋ ಪೀಡಿತ ಮಕ್ಕಳಿಗೆ ಉಚಿತ ಕ್ಯಾಲಿಪರ್ ವಿತರಣಾ ಶಿಬಿರ ಏರ್ಪಡಿಸಿದೆ.
ಕಳೆದ ಡಿಸೆಂಬರ್ ಮಾಹೆಯಲ್ಲಿ ಈ ಸಂಬಂಧ ಅಪಘಾತದಲ್ಲಿ, ಶಸ್ತಚಿಕಿತ್ಸೆಯಲ್ಲಿ ಮೊಣಕಾಲಿನಿಂದ ಕೆಳಭಾಗದ ಕಾಲನ್ನು ಕಳೆದುಕೊಂಡವರಿಗೆ ಸೂಕ್ತವಾದ ಕೃತಕ ಕಾಲು ರಚಿಸುವ ಹಾಗೂ ಪೋಲಿಯೋ ಪೀಡಿತರಾಗಿ ನರದೌರ್ಬಲ್ಯದಿಂದ ನಡೆಯಲಾಗದವರಿಗೆ ಕ್ಯಾಲಿಪಸರ್್ ಇದ್ದಪಡಿಸುವ ಸಲುವಾಗಿ ಶಿಬಿರ ಏರ್ಪಡಿಸಿ ಫಲಾನುಭವಿಗಳ ಅಳತೆಗಳನ್ನು ಪಡೆಯಲಾಗಿತ್ತು. ಅಂದಿನ ಶಿಬಿರದಲ್ಲಿ ಭಾಗವಹಿಸಿ ಅಳತೆ ನೀಡಿದ 60 ತಕ್ಕೂ ಹೆಚ್ಚು ಮಂದಿಗೆ ಈ ಶಿಬಿರದಲ್ಲಿ ಉಚಿತವಾಗಿ ಕೃತಕ ಕಾಲು, ಕ್ಯಾಲಿಪರ್ ವಿತರಿಸಲಾಗುವುದು.
ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ಶಿಬಿರದ ಸಂಚಾಲಕ ಎಂ.ಆರ್.ಗೋಪಾಲ್ (9449511936) ಅಥವಾ ಥಿಯಸಾಫಿಕಲ್ ಕಾರ್ಯದರ್ಶಿ ಎಚ್.ಬಿ.ಗೋಪಾಲ್ (9945707021) ಇವರನ್ನು ದೂರವಾಣಿ ಮಾಲಕ ಸಂಪಕರ್ಿಸಿ ಶಿಬಿರಕ್ಕೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ