ಹಾಡೋದ ಕಲಿತರು ಆಡೋ ಹಳ್ಳಿ ಮಕ್ಕಳು
ಈ ಲೇಖನ ಬರೆದಿದ್ದು ನನ್ನ ಸ್ನೇಹಿತ : ಎಚ್.ಬಿ.ಕಿರಣ್ಕುಮಾರ್ ಶಾಲಾ ಮಕ್ಕಳು ಒಟ್ಟಾಗಿ ಹಾಡಿದ್ದು ಇದನ್ನು ಬರೆಯಲು ಸ್ಪೂಥರ್ಿ
ಹಳ್ಳಿ ಮಕ್ಕಳಲ್ಲಿ ಹಾಡುಗಾರಿಕೆಗೆ ಹೇಳಿ ಮಾಡಿಸಿದ ಕಂಠ ಇರುತ್ತದೆ. ಆದರೆ ಅವಶ್ಯಕ ತರಬೇತಿ, ಸೂಕ್ತ ವೇದಿಕೆಯ ಕೊರತೆಯಿಂದ ಪ್ರತಿಭೆ ಸ್ಪೋಟಗೊಂಡು ಪ್ರಖ್ಯಾತಿಯಾಗದೆ ತನ್ನಲ್ಲಿಯೇ ಹುದುಗಿ ಹೋಗುತ್ತವೆ. ಕೆಲವರು ಪಟ್ಟಣಕ್ಕೆ ತೆರಳಿ ಸಮರ್ಪಕ ತರಬೇತಿ ಪಡೆದು ಸಾಧನೆ ಮಾಡಿದವರೂ ಇದ್ದಾರೆ. ಆದರೂ ದೈವದತ್ತವಾಗಿ ಬಂದ ಕಂಠ ಮಾಧುರ್ಯವನ್ನು ಸಮರ್ಪಕವಾಗಿ ಬಳಕೆಯಾಗದೆ ಕೇವಲ 'ಬಾತ್ರೂಂ ಸಿಂಗರ್' ಆಗಿಯೆ ಕೊನೆಯವರಿಗೂ ಉಳಿಯುವವರ ಸಂಖ್ಯೆಯೇ ಹೆಚ್ಚು. ಹಳ್ಳಿಗಳಲ್ಲಿ ಪ್ರೋತ್ಸಾಹ ಹಾಗೂ ತರಬೇತಿಯ ಕೊರತೆಯಿಂದ ಅಪ್ರತಿಮ ಪ್ರತಿಭೆಗಳು ಬೆಳಕಿಗೆ ಬರುವ ಮುಂಚೆಯೆ ಕಮರಿ ಹೋಗುತ್ತಿರುವುದನ್ನು ಹುಳಿಯಾರು ಸಮೀಪದ ಬಳ್ಳೆಕಟ್ಟೆ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದಶರ್ಿ ಶ್ರೀಮತಿ ಕವಿತಾಕಿರಣ್ ಅವರು ಮನಗಂಡಿರುವಂತೆ ಕಾಣುತ್ತದೆ. ಹಾಗಾಗಿಯೇ ತಮ್ಮ ಶಾಲೆಗೆ ಸೇರಿದ ಮಕ್ಕಳು ಕೇವಲ ಪಠ್ಯದ ಅಭ್ಯಾಸಕ್ಕೆ ಮಾತ್ರ ಸೀಮಿತಗೊಳಿಸದೆ 'ಇಂಗೀಷ್ ಸ್ಪೀಕಿಂಗ್' 'ಕ್ಲೇ ವಕ್ಸ್' 'ರಂಗಗೀತೆ' 'ಪೈಂಟಿಂಗ್' ಹೀಗೆ ಹತ್ತು ಹಲವು ಪಠ್ಯೇತರ ಚಟುವಟಿಕೆಗಳ ಕಲಿಕಾ ವೇದಿಕೆ ನಿಮರ್ಿಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಮಕ್ಕಳು ವಿದ್ಯಾಥರ್ಿ ಜೀವನವನ್ನು ಅರ್ಥಪೂರ್ಣವಾಗಿ ಸರ್ವತೋಮುಖ ಬೆಳವಣಿಗೆಯೊಂದಿಗೆ ಪೂರೈಸಿ ಬಹುಮುಖ ಪ್ರತಿಭೆಗಳಾಗಿ ಹೊರಹೊಮ್ಮಲಿ ಎಂಬ ಆಶಯ, ಕಾಳಜಿ ಅಡಗಿದೆ. ಇದರ ಮುಂದುವರಿದ ಭಾಗವಾಗಿ ಸುಗಮ ಸಂಗೀತದ ಪ್ರಕಾರಗಳನ್ನು ರಾಜ್ಯದಾದ್ಯಂತ ಹರಡಿ ಜನಮಾನಸಕ್ಕೆ ಮುಟ್ಟಿಸಲು ಪಣತೊಟ್ಟು ಈಗಾಗಲೇ ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಭದ್ರಾವತಿ, ಶಿವಮೊಗ್ಗ, ಮಂಡ್ಯ, ದಾವಣಗೆರೆ, ಶೃಂಗೇರಿ, ಕನಕಪುರ ಮುಂತಾದ ಜಿಲ್ಲಾ ಕೇಂದ್ರದಲ್ಲಿನ 1800 ಕ್ಕೂ ಹೆಚ್ಚು ಮಕ್ಕಳಿಗೆ ಭಾವಗೀತೆಯ ತರಬೇತಿ ನೀಡುತ್ತಿರುವ ಬೆಂಗಳೂರಿನ ಸ್ವರಸುರಭಿ ಸಂಸ್ಥೆಯ ನುರಿತ ಹಾಡುಗಾರರನ್ನು ಇದೇ ಪ್ರಪ್ರಥಮ ಎಂಬಂತೆ ಗ್ರಾಮೀಣ ಪ್ರದೇಶಕ್ಕೆ ಕರೆಸಿ ಇಲ್ಲಿನ ಆಡೋ ಮಕ್ಕಳಿಗೆ ಹಾಡುವುದ ಕಲಿಸುವ ಸಲುವಾಗಿ ಇತ್ತೀಚೆಗಷ್ಟೆ ಭಾವಗೀತೆಗಳ ಕಲಿಕಾ ಶಿಬಿರ ಆಯೋಜಿಸುವ ಮೂಲಕ ದಿಟ್ಟ ಹೆಜ್ಜೆಹಿಟ್ಟರು. ತಮ್ಮ ಶಾಲೆಯ ಮಕ್ಕಳಲ್ಲದೆ ಅಕ್ಕ-ಪಕ್ಕದ ಊರುಗಳ ಮಕ್ಕಳಿಗೂ ಶಿಬಿರದಲ್ಲಿ ಪಾಲ್ಗೊಳ್ಳುವ ಮುಕ್ತ ಅವಕಾಶ ಕಲ್ಪಿಸಿ, ಮ್ಯೂಸಿಕ್ ಟ್ರ್ಯಾಕ್ ನೊಂದಿಗೆ ಶಿವರುದ್ರಪ್ಪನವರ 'ಜೋಕಾಲಿ ಆಡೋಣ ಬನ್ನಿರೋ' ಅಡಿಗರ 'ಹಣತೆಗಳಿವು ಹಣತೆಗಳಿವು' ಲಕ್ಷ್ಮೀನಾರಾಯಣ ಭಟ್ಟರ 'ಬಾ ಬಾ ಓ ಬೆಳಕೆ' ಹೀಗೆ ಹತ್ತಾರು ಹೆಸರಾಂತ ಕವಿವರ್ಯರ ಭಾವಗೀತೆಗಳನ್ನು ಆಕಾಶವಾಣಿ ಸಂಯೋಜಕ, ಗಾಯಕ, ಸುಗಮ ಸಂಗೀತ ಇತಿಹಾಸದಲ್ಲೇ ಪ್ರಪ್ರಥಮವಾಗಿ 100 ಭಾವಗೀತೆಗಳ ಟ್ರ್ಯಾಕ್ ಹೊರತಂದ ಹೆಗ್ಗಳಿಕೆ ವೊಂದಿರುವ ಉಪಾಸನಾ ಮೋಹನ್ ಅವರು ಇಲ್ಲಿನ 100 ಕ್ಕೂ ಹೆಚ್ಚು ಹಳ್ಳಿ ಮಕ್ಕಳಿಗೆ ಲಯಬದ್ದವಾಗಿಯೂ, ಸ್ವರಬದ್ದವಾಗಿಯೂ, ಶೃತಿಬದ್ದವಾಗಿಯೂ ಹಾಡುವುದ ಕಲಿಸಿ ಕೊಟ್ಟರು. ಬೆರಳೆಣಿಕೆ ದಿನಗಳಷ್ಟು ಈ ಕಲಿಕಾ ಯಾತ್ರೆ ನಡೆದಿದ್ದರೂ ಕೂಡ ಎಂತಹವರಿಗೂ ಆಶ್ಚರ್ಯವಾಗಬಹುದು ಮುಕ್ತಾಯ ಸಮಾರಂಭದಲ್ಲಿ ಶಿಬಿರಾಥರ್ಿಗಳೇ ಸಂಗೀತ ಸಂಜೆಯನ್ನು ಯಾವುದೇ ಲೋಪ ಹಾಗೂ ಕಳಂಕ ಬಾರದಿದ್ದ ರೀತಿ ನಡೆಸಿಕೊಟ್ಟರು. ಎಂದೂ ವೇದಿಕೆಯಲ್ಲಿ ಮಾತಾಡುವುದು, ಹಾಡುವುದು ಹಾಗಿರಲಿ ನಿಲ್ಲೂವುದಕ್ಕೂ ಹೆದರುವ ಮಕ್ಕಳು ಅಂದು ಸುಶ್ರ್ಯಾವವಾಗಿ, ಸುಲಲಿತವಾಗಿ, ನಿರ್ಭಯವಾಗಿ ಹಾಡಿ ಪೋಷಕರು, ಶಿಕ್ಷಕರು, ಸಾರ್ವಜನಿಕರನ್ನು ಬೆಕ್ಕಸ ಬೆರಗಾಗುವಂತೆ ಮಾಡಿ ಚಪ್ಪಾಳೆ, ಪ್ರಶಂಸೆಯನ್ನು ಪಡೆದುಕೊಂಡರು. ಹಾಗಂದ ಮಾತ್ರಕ್ಕೆ ಈಗಾಗಲೇ ಇವರೆಲ್ಲ ಸ್ಟಾರ್ ಸಿಂಗರ್ಸ್ ಆಗಿ ಹೊರಹೊಮ್ಮಿದರು ಎಂದರ್ಥವಲ್ಲ. ಸಿನಿಮಾ ಗೀತೆಗಳ ಕಡೆ ಆಕಷರ್ಿತರಾಗಿರುವವರನ್ನು ಸುಗಮ ಸಂಗೀತದೆಡೆ ಆಸಕ್ತಿ, ಕುತೂಹಲ ಕೆರಳಿಸುವ ಹಾಗೂ ಇರುವ ಕಂಠವನ್ನು ಟ್ಯೂನಪ್ ಮಾಡಿದಾದಲ್ಲಿ ತಾವೂ ಯಶಸ್ವಿಯಾಗಿ ಹಾಡಬಲ್ಲೆವು ಎಂಬ ಛಲ ಕುಡಿಯೊಡೆಸುವ ಕಿರು ಪ್ರಯತ್ನ ಇದಾಗಿದೆ. ಕಠಿಣ ಅಭ್ಯಾಸ, ತಜ್ಞರ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ನಿರಂತರವಾಗಿದ್ದರೆ ಸುಗಮ ಸಂಗೀತ ಕ್ಷೇತಕ್ಕ್ರೆ ಸಿ.ಅಶ್ವಥ್, ರಾಜು ಅನಂತಸ್ವಾಮಿ ಅವರ ಅಗಲಿಕೆಯಿಂದಾಗಿರುವ ನಷ್ಟವನ್ನು ಸತ್ಯವಾಗಲೂ ತುಂಬಿಕೊಡಬಲ್ಲರು. ಸಂಬಂಧಿಸಿದ ಪೋಟೊಗಳು ಸಹ ಇದೆೆ1 : ಭಾವಗೀತೆಯ ಕಲಿಕಾ ಯತ್ರೆಯ ಉದ್ಘಾಟನೆ2 :ತರಬೇತಿಯಲ್ಲಿ ತೊಡಗಿರುವ ವಿದ್ಯಾಥರ್ಿಗಳು3 : ಉಪಾಸನ ಮೋಹನ್ ತರಬೇತಿ ನೀಡುತ್ತಿರುವುದು.4 : ಮುಕ್ತಾಯ ಸಮಾರಂಭದಲ್ಲಿ ಶಿಬಿರಾಥರ್ಿಗಳು ಹಾಡುತ್ತಿರುವುದು 5 : ಸ್ವರಸುರಭಿ ಅಧ್ಯಕ್ಷ ಶ್ರೀಧರ್ ಅವರನ್ನು ಶ್ರೀಮತಿ ಕವಿತಾ ಅವರು ಸನ್ಮಾನಿಸುತ್ತಿರುವುದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ