ಗುಹಾ ಪ್ರವೇಶ ದಾರಿ ಮೂಲಕ ಭಕ್ತರ ಶ್ರೀ ಸ್ವಾಮಿಯವರ ದರ್ಶನ ಹೋಗುತ್ತಿರುವುದು.
ಹುಳಿಯಾರಿನ ಶ್ರೀ ಬನಶಂಕರಮ್ಮ ಅವರಿಗೆ ವೈಕುಂಠ ಏಕಾದಶಿ ಅಂಗವಾಗಿ ವೈಕುಂಠ ನಾರಾಯಣನ ಅಲಂಕಾರ ಮಾಡಿರುವುದು.

ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರಕಾರೋತ್ಸವ
ಹುಳಿಯಾರಿನ ಶ್ರೀ ರಂಗನಾಥ ಸ್ವಾಮಿ ಗುಡಿಯಲ್ಲಿ ಶ್ರೀ ಸ್ವಾಮಿಗೆ ಬಗೆಬಗೆಯ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿರುವುದು.
1 ; ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕೋದಂಡರಾಮನ ಸನ್ನಿದಾನದಲ್ಲಿ ಅನಂತಶಯನ ರಂಗನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿರುವುದು.

ಹುಳಿಯಾರಿನಲ್ಲಿ ನಡೆದ ಸಂಭ್ರಮದ ವೈಕುಂಠ ಏಕಾದಶಿ ಬಗ್ಗೆ ವಿಶೇಷ ವರದಿ
---------------------------
ಇದನ್ನು ಬರೆದಿದ್ದು:ಕಿರಣ್ ಕುಮಾರ್ ಹೆಚ್.ಬಿ ಹಾಗೆಯೆ ಇದಕ್ಕೆ ಸಂಭಂದಿಸಿದ ವಿಶೇಷ ಛಾಯಚಿತ್ರಗಳನ್ನು ತೆಗೆದಿದ್ದು ಸ್ಟುಡಿಯೊ ದುರ್ಗರಾಜು ಮತ್ತು ಅಂಬಿಕಾ ಸುಧಿ.ವೆಬ್ ಗೆ ಹಾಕಿದ್ದು ನಾನು.
ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನ, ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಬನಶಂಕರಿ ದೇವಸ್ಥಾನಗಳಲ್ಲಿ ದೇವಾಲಯವನ್ನು ಬಣ್ಣಬಣ್ಣದ, ಬಗೆ ಬಗೆಯ ಹೂಗಳಿಂದ ಹಾಗೂ ತಳಿರು ತೋರಣದಿಂದ ಶೃಂಗರಿಸಿ, ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸುವ ಮೂಲಕ ವೈಕುಂಠ ಏಕಾದಶಿಯನ್ನು ಅಪಾರ ಭಕ್ತ ಸಮೂಹದೊಂದಿಗೆ ಸಂಭಮದಿಂದ ಆಚರಿಸಲಾಯಿತು.
ಗ್ರಾಮದ ಪೇಟೆ ಬೀದಿಯಲ್ಲಿರುವ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕೋದಂಡರಾಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತಲ್ಲದೆ ಶ್ರೀ ಸ್ವಾಮಿಯವರ ಸನ್ನಿದಿಯಲ್ಲಿ ಅನಂತಶಯನ ರಂಗನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಗುಹಾ ಪ್ರವೇಶ ದಾರಿ ಮೂಲಕ ಭಕ್ತರ ದರ್ಶನ ವ್ಯವಸ್ಥೆ ಮಾಡಿದಿದುದು ವಿಭೀನ್ನ ಹಾಗೂ ವಿಶೇಷತೆಯಿಂದ ಕೂಡಿತ್ತಲ್ಲದೆ ಭಕ್ತರ ಮೆಚ್ಚುಗೆಗೆ ಪಾತ್ರವಾಗಿತ್ತು.
ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಎಂ.ಎಸ್.ಆರ್. ನಟರಾಜ್ ಅವರ ಸೇವಾರ್ಥದಲ್ಲಿ ಅಂದು ನಡೆದ ಪೂಜಾ ಕಾರ್ಯಕ್ರಮದಲ್ಲಿ ಅರ್ಚಕ ಹರೀಶ್ ಅವರ ನೇತೃತ್ವದಲ್ಲಿ ಮುಖ್ಯ ವಿಗ್ರಹ ಹಾಗೂ ಉತ್ಸವ ಮೂರ್ತಿಗೆ ವಿವಿಧ ಆಭರಣ ಹಾಗೂ ಪುಷ್ಪರಾಶಿಯೊಂದಿಗೆ ಅಲಂಕೃತಗೊಳಿಸಿ ಪ್ರಕಾರೋತ್ಸವ, ಅಷ್ಟಾವದಾನ ಸೇವೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮುಂತಾದ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಇತಿಹಾಸ ಪ್ರಸಿದ್ಧ ಶ್ರೀ ಅನಂತಶಯನ ರಂಗನಾಥ ಸ್ವಾಮಿ ಗುಡಿಯಲ್ಲಿ ಶ್ರೀ ಸ್ವಾಮಿಗೆ ಅರ್ಚಕ ಗುಂಡಣ್ಣ ಅವರ ನೇತೃತ್ವದಲ್ಲಿ ಎಣ್ಣೇ ಮಜ್ಜನ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಿ ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತಲ್ಲದೆ ಬಸ್ಟಾಂಡ್ ಹೋಟಲ್ ಗೋಪಾಲ್ , ಚಿರುಮುರಿ ರಘು, ವೆಂಕಟೇಶ್ ಮಾಸ್ಟರ್ ಅವರ ನೇತೃತ್ವದಲ್ಲಿ ವಿವಿಧ ಭಜನಾ ಮಂಡಳಿ ಹಾಗೂ ಅಯ್ಯಪ್ಪ ಭಕ್ತರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಯಿತು.
ದೇವಾಂಗ ಸಮುದಾಯದ ಕುಲ ದೇವತೆ ಶ್ರೀ ಬನಶಂಕರಮ್ಮ ದೇವಾಲಯದಲ್ಲಿ ಅರ್ಚಕ ಶ್ರೀಧರ್ ಅವರ ನೇತೃತ್ವದಲ್ಲಿ ನಾಗಭೂಷಣ್, ಈಶ್ವರ್, ರಾಮರಾವ್ , ಕಮಲಮ್ಮ, ಜೋತಿ ಅವರ ಸೇವಾರ್ಥ ಮುಕ್ಕೋಟಿ ದ್ವಾದಶಿ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಗಿತ್ತಲ್ಲದೆ ಶ್ರೀ ಅಮ್ಮನವರಿಗೆ ವೈಕುಂಠ ನಾರಾಯಣನ ಅಲಂಕಾರ ಮಾಡಿ ಭಕ್ತಾಧಿಗಳ ದರ್ಶನ ಭಾಗ್ಯ ಕಲ್ಪಿಸಿದುದು ವಿಶೇಷವಾಗಿತ್ತು.
ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುವ ಪ್ರತೀತಿ ಇರುವ ಹಿನ್ನೆಲೆಯಲ್ಲಿ ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿ ಶ್ರೀ ಸ್ವಾಮಿಯವರ ದರ್ಶನ ಪಡೆದರೆ ಪುಣ್ಯ ಲಭಿಸುವುದು ಎನ್ನುವ ನಂಬಿಕೆ ಇರುವ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ತೆರಳಿ ದರ್ಶನ ಪಡೆದು ಪುನೀತರಾದರು.
ಈ ಸುದ್ಧಿಗೆ ಸಂಬಂಧಿಸಿದ ಪೋಟೊವನ್ನು ಮೇಲ್ಭಾಗದಲ್ಲಿ ಪ್ರಕಟಿಸಲಾಗಿದೆ.ದಯಮಾಡಿ ಗಮನಿಸುವುದು.
1 ; ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕೋದಂಡರಾಮನ ಸನ್ನಿದಾನದಲ್ಲಿ ಅನಂತಶಯನ ರಂಗನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿರುವುದು.
2 ; ಹುಳಿಯಾರಿನ ಶ್ರೀ ರಂಗನಾಥ ಸ್ವಾಮಿ ಗುಡಿಯಲ್ಲಿ ಶ್ರೀ ಸ್ವಾಮಿಗೆ ಬಗೆಬಗೆಯ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿರುವುದು.
3; ಹುಳಿಯಾರಿನ ಶ್ರೀ ಬನಶಂಕರಮ್ಮ ಅವರಿಗೆ ವೈಕುಂಠ ಏಕಾದಶಿ ಅಂಗವಾಗಿ ವೈಕುಂಠ ನಾರಾಯಣನ ಅಲಂಕಾರ ಮಾಡಿರುವುದು.
4 ; ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಪ್ರಕಾರೋತ್ಸವ ಮಾಡಲಾಯಿತು.
5 ; ಗುಹಾ ಪ್ರವೇಶ ದಾರಿ ಮೂಲಕ ಭಕ್ತರ ಶ್ರೀ ಸ್ವಾಮಿಯವರ ದರ್ಶನ ಹೋಗುತ್ತಿರುವುದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ