ಮಂಕುತಿಮ್ಮನ ಕಗ್ಗದಲ್ಲಿನ ಅರ್ಥಗರ್ಭಿತವಾಗಿರುವ ನಾಲ್ಕು ಸಾಲುಗಳು
ಹಳೆಬೇರು - ಹೊಸತಳಿರು
ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ
ಹಳದೆಂದು ನೀನದನು ಕಳೆಯುವೆಯ, ಮರುಳೆ ?
ತಳಹದಿಯದಲ್ಲೆ ನಮ್ಮೆಲ್ಲ ಹೊಸ ತಿಳಿವಿಂಗೆ ?
ಹಳೆ ಬೇರು ಹೊಸ ತಳಿರು - ಮಂಕುತಿಮ್ಮ
ಸಾರಂಶ: ಒಂದು ಕಾಲದ ಅರಿವು ಯುಗಯುಗಕ್ಕೂ ಬೆಳಕಾಗಿತ್ತು. ನೀನು ಅದನ್ನು ಹಳೆಯದೆಂದು ಹಳಿಯುವುದು ಮೊರ್ಖತನವಾದೀತು. ತಳಪಾಯವೇ ಮುಂದಿನ ಬೆಳೆವಣೆಗೆಗೆ ಸಹಕಾರಿಯಲ್ಲವೆ. ಹಳೆಯ ಮರದ ಬೇರಿದ್ದರಲ್ಲವೆ ಹೊಸಚಿಗುರು ಮೊಡುವುದು.
ಸಂಪದ ಬ್ಲಾಗ್ ನೋಡುತ್ತಿದ್ದಾಗ ಅದರಲ್ಲಿ ಕಂಡು ಬಂದಿದ್ದನ್ನು ಎಲ್ಲರು ಓದಲಿ ಎಂದು ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆನೆ.ಮಂಕುತಿಮ್ಮನ ಕಗ್ಗದ ಈ ಸಾಲುಗಳು ಅರ್ಥಪೂರ್ಣವಾಗಿದೆ ತಾನೆ?.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ