ಬೋರನಕಣಿವೆಗೆ ಹೇಮೆ ತರುವಲ್ಲಿ ವಿಫಲವಾದರೆ ಹಸಿರು ಶಾಲು ಹಾಕುವುದಿಲ್ಲ: ಸತೀಶ್ ಶಪಥ
-------------------------------------------------------
ಹುಳಿಯಾರು: ಬೋರನಕಣಿವೆ ಜಲಾಶಯಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಕೆರೆಗಳ ಮೂಲಕ ನೈಸರ್ಗಿಕವಾಗಿ ಹೇಮಾವತಿ ನೀರನ್ನು ತರುವಲ್ಲಿ ವಿಫಲವಾದರೆ ಆ ಕ್ಷಣದಿಂದಲೇ ಹಸಿರು ಶಾಲು ಹಾಕುವುದಿಲ್ಲ ಎಂದು ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತೀಶ್ ಅವರು ಶಪಥ ಗೈದರು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಶ್ರೀ ಲಕ್ಷ್ಮೀವಿನಾಯಕ ರೈತ ಸಂಘ ಕಾಯಿ ತಿಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ರೈತ ಸಮಾವೇಶದಲ್ಲಿ ಅವರು ಮಾತನಾಡಿ ನೈಸರ್ಗಿಕವಾಗಿ ಬೋರನಕಣಿವೆಗೆ ನೀರು ಹರಿಯುವುದರಿಂದ ಅಂತರ್ಜಲ ವೃದ್ಧಿಯಾಗಿ, ಉದ್ಯೋಗ ಸೃಷ್ಠಿಯಾಗಿ ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಬಹುದಾಗಿದ್ದು ಈ ಭಾಗದ ಜನರ ಹಿತದೃಷ್ಠಿಯಿಂದ ಎಂತಹುದೇ ಪರಿಸ್ಥಿತಿ ನಿಮರ್ಾಣವಾದರೂ ಸಹ ನೀರಿನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸಾರಿದರು.
ರಾಗಿ, ಕೊಬ್ಬರಿಗೆ ಬೆಂಬಲ ಬೆಲೆಗೆ, ನ್ಯಾಫೆಡ್ ಕೇಂದ್ರಕೆ, ಟಿಸಿಗಳಿಗೆ ಹೀಗೆ ಈ ಹಿಂದೆ ಮಾಡಿದ ಅನೇಕ ಹೋರಾಟದಲ್ಲಿ ಯಶಸ್ವಿಯಾಗಿದ್ದೇವೆ. ಈಗ ರಾಜಕಾರಣಿಗಳ ದಿವ್ಯ ನಿರ್ಲಕ್ಷ್ಯದಿಂದ ನೀರಿನ ಹಾಹಾಕಾರಕ್ಕೆ ತುತ್ತಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನೀರಿನ ಕ್ರಾಂತಿ ಮಾಡುವ ಸಲುವಾಗಿ ಹೇಮೆ ಹರಿಸುವ ಹೋರಾಟಕ್ಕೆ ಧುಮುಕಲಾಗಿದೆ. 3 ತಿಂಗಳ ವಿವಿಧ ಸ್ವರೂಪದ ಹೋರಾಟದ ಪ್ರತಿಫಲ ಈಗಾಗಲೇ ಸರ್ವೆಕಾರ್ಯ ಮುಗಿದಿದ್ದು ಮತ್ತೆ ನೆನಗುದಿಗೆ ಬೀಳದಂತೆ ಸರ್ಕಾರಕ್ಕೆ ಆಗಾಗ ಚುರುಕು ಮುಟ್ಟಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ತಾವು ರೂಪಿಸುವ ಹೋರಾಟಕ್ಕೆ ತಾಲೂಕಿನ ರೈತರು ಬೆಂಬಲ ಸೂಸಿ ತಮ್ಮೊಂದಿಗೆ ನಿಂತಿದ್ದೇಯಾದರೆ ನೀರು ಹರಿಸುವುದು ಕಷ್ಠಕರವಲ್ಲ ಎಂದು ಹೇಳಿದರು.
ರಾಜಕೀಯ ಪಕ್ಷಗಳು ಬೀಡಿ ಕಟ್ಟು ಇದ್ದ ಹಾಗೆ. ಲೇಬಲ್ ಬೇರೆ ಬೇರೆಯಾದರೂ ಎಲ್ಲಾ ಬೀಡಿಗಳಿಗೂ ಬಳಸುವುದು ಒಂದೇ ತರಹದ ಸೊಪ್ಪು. ಅಂತೆಯೆ ಪಕ್ಷಗಳ ಹೆಸರು ಬೇರೆ ಬೇರೆ ಇದ್ದರೂ ಅದರಲ್ಲಿರುವ ರಾಜಕಾರಣಿಗಳು ಒಂದೇ ಗುಣ ಹೊಂದಿರುತ್ತಾರೆ. ಹಾಗಾಗಿ ರಾಜಕಾರಣಿಗಳ ಹಿಂದೆ ಸುತ್ತವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರನ್ನು ಬಿಟ್ಟು ತಮ್ಮ ತಮ್ಮ ಗ್ರಾಮಗಳ ರೈತರನ್ನು ಸಂಘಟಿಸಿ ತಮ್ಮ ಬೇಡಿಕೆ ಈಡೇರಿಸಲು ತಾವೇ ಹೋರಾಟ ರೂಪಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ದೇವರಾಜು ಅವರು ಮಾತನಾಡಿ ಚುನಾವಣೆ ಪೂರ್ವ 24 ಗಂಟೆ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೇವಲ 6 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದೆ. ಈ ವಿದ್ಯುತ್ ಕೊರತೆಯಿಂದ ಇಡೀ ರಾಜ್ಯದಲ್ಲಿ 25 ಲಕ್ಷ ಎಕರೆ ಭೂಮಿಯನ್ನು ರೈತರು ಬೀಳುಬಿಡುವಂತಾಗಿದೆ. ಇದರಿಂದ 3.75 ಲಕ್ಷ ಕ್ವಿಂಟಾಲ್ ಆಹಾರ ಉತ್ಪಾದನೆ ಕಡಿಮೆಯಾಗಿ ರೈತರಿಗೆ 3150 ಕೋಟಿ ರೂ ಆದಾಯ ನಷ್ಠವಾಗಿದೆ. ಈ ನಷ್ಠವನ್ನು ಸರ್ಕಾರ ರೈತರಿಗೆ ತುಂಬಿಕೊಡಬೇಕು ಎಂದು ವಾದಿಸಿದರು.
ಜನಪ್ರತಿನಿಧಿಗಳಿಗೆ ರೈತರ ಮೇಲೆ ಕಾಳಜಿ ಇಲ್ಲದ ಪರಿಣಾಮ ರೈತನ ಬೆಳೆಗೆ ಅವೈಜ್ಞಾನಿಕ ಬೆಲೆ. ಬಜೆಟ್ ತಾರತಮ್ಯ, ನೀರು, ವಿದ್ಯುತ್ ಪೂರೈಕೆಯಲ್ಲಿ ಕಡೆಗಣನೆ ಆಗುತ್ತಿದೆ. ಇದರಿಂದ ರೈತರು ಸಾಲದ ಸುಳಿಗೆ ಸಿಕ್ಕಿ ನಲುಗಿ ಕೆಲವರು ಆತ್ಮಹತ್ಯೆ ಹಾದಿ ತುಳಿದರೆ, ಇನ್ನೂ ಕೆಲವರು ಗುಳೆ ಹೋಗುತ್ತಿದ್ದಾರೆ. ಈ ಪರಿಸ್ಥಿತಿಯನ್ನು ರೈತರು ಸಂಘಟಿತರಾಗಿ ಹೋರಾಟ ಮಾಡಿ ಪರಿಹರಿಸಿಕೊಳ್ಳುವ ಅನಿವಾರ್ಯತೆ ಇದೆ. ಇನ್ನಾದರೂ ರೈತರು ಎಚ್ಚೆತ್ತು ಸುತ್ತ ಮುತ್ತಲ ಗ್ರಾಮಗಳ ರೈತರನ್ನು ಸಂಘಟಿಸಿ ಪ್ರಾಮಾಣಿಕ ಹೋರಾಟಕ್ಕೆ ಮುಂದಾಗಿ ತಮ್ಮ ಬದುಕಿನ ಭವಿಷ್ಯ ಕಟ್ಟಿಕೊಳ್ಳಿ ಎಂದು ತಿಳಿ ಹೇಳಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರು ಸಮಾವೇಶವನ್ನು ಉದ್ಘಾಟಿಸಿದರು. ಕಾಯಿ ತಿಮ್ಮನಹಳ್ಳಿ ರೈತ ಸಂಘದ ಗೌರವ ಅಧ್ಯಕ್ಷ ಟಿ.ಎಂ.ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದ ರಂಗಸ್ವಾಮಿ, ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ, ಕೆ.ಪಿ.ಮಲ್ಲೇಶ್, ಶಿವಶಂಕರಪ್ಪ, ಬಿ.ಎ.ಪ್ರಕಾಶಯ್ಯ, ಮಂಡ್ಯಕೆಂಪೇಗೌಡರು. ನರೇಂದ್ರ, ಬಂಡೀಮನೆ ಲೋಕೇಶ್, ಇಟ್ಟಿಗೆ ರಾಜಣ್ಣ, ಜಿ.ಜಗಧೀಶ್, ಡಾ.ಬಾಬು, ರಾಜಶೇಖರಪ್ಪ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಈ ಸುದ್ಧಿಗೆ ಸಂಬಂಧಿಸಿದ ಪೋಟೊ ವಿವರ ಹೀಗಿದೆ.
ಹುಳಿಯಾರು ಸಮೀಪದ ಕಾಯಿ ತಿಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ರೈತ ಸಮಾವೇಶದಲ್ಲಿ ರೈತ ಸಂಘದ ಕೆ.ಪಿ.ಮಲ್ಲೇಶ್ ಮಾತನಾಡಿದರು. ಕೆ.ಎಸ್.ಪುಟ್ಟಣ್ಣಯ್ಯ, ಟಿ.ಎಂ.ತಿಮ್ಮೇಗೌಡ, ಸೋಮಗುದ್ದ ರಂಗಸ್ವಾಮಿ, ಕೆಂಕೆರೆ ಸತೀಶ್, ಬಿ.ಎಸ್.ದೇವರಾಜು ಮತ್ತಿತರರು ಇದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ