ಹುಳಿಯಾರು ಪಟ್ಟಣದ ಶಂಕರಪುರದ ಕೆಇಬಿ ಮುಂಭಾಗದ ದುರ್ಗಾ ಕಾಂಡಿಮೆಂಟ್ಸ್ ಪಕ್ಕದಲ್ಲಿ ನೂತನವಾಗಿ ಆರಂಭವಾದ ತುಮಕೂರು ಹಾಲು ಒಕ್ಕೂಟದ ನಂದಿನಿ ಮಿಲ್ಕ್ ಪಾರ್ಲರ್‌ಗೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಹಳೆಮನೆ ಶಿವನಂಜಪ್ಪ ಶುಕ್ರವಾರ ಚಾಲನೆ ನೀಡಿದರು. ನಂದಿನಿ ಮಳಿಗೆ ಉದ್ಘಾಟಿಸಿ ಮಾತನಾಡಿದ ಹಳೆ ಮನೆ ಶಿವನಂಜಪ್ಪ ನಂದಿನಿ ಬ್ರಾಂಡ್ ಮೂಲಕ ಆಧುನಿಕ ತಂತ್ರಜ್ಞಾನ ಬಳಸಿ ಸಂಸ್ಕರಿಸಿದ ಹಾಲು, ಮೊಸರು,ಪೇಡ, ಮೈಸೂರು ಪಾಕ್ ,ಬರ್ಫಿ ,ಸುವಾಸಿತ ಹಾಲು, ಐಸ್ ಕ್ರೀಮ್ ಹಾಲಿನ ಪುಡಿ ಮತ್ತು ಹಾಲಿನ ಹಲವಾರು ಉತ್ಪನ್ನಗಳು ಉತ್ಕೃಷ್ಟ ದರ್ಜೆಯಲ್ಲಿ ತಯಾರಾಗುತ್ತಿದ್ದು, ನಂದಿನಿಯ ಎಲ್ಲಾ ಉತ್ಪನ್ನಗಳು ಈ ಮಳಿಗೆಯಲ್ಲಿ ಸದಾಕಾಲ ದೊರೆಯಲಿದೆ ಎಂದರು. ನಂದಿನಿ ಬ್ರಾಂಡಿನಡಿ ತುಪ್ಪದ ಮೈಸೂರ್ ಪಾಕ್,ಪೇಡ,ಬೇಸನ್ ಲಾಡು,ಚಾಕೊಲೇಟ್ ಬರ್ಫಿ,ಕೊಕೊನೆಟ್ ಬರ್ಫಿ,ಕುಂದಾ,ಬಾದಾಮ್ ಹಲ್ವಾ,ಡ್ರೈ ಫ್ರೂಟ್ಸ್ ಬರ್ಫಿ ಸೇರಿದಂತೆ ಹಲವಾರು ಬಗೆಯ ಸಿಹಿ ತಿನಿಸುಗಳು,ಕಾರ ತಿನಿಸುಗಳು, ಐಸ್ ಕ್ರೀಮ್ ಸೇರಿದಂತೆ ಎಲ್ಲಾ ತರಹದ ನಂದಿನಿ ಉತ್ಪನ್ನಗಳು ಇಲ್ಲಿ ದೊರೆಯಲಿದೆ. ಸಾರ್ವಜನಿಕರು ನಂದಿನಿ ಹಾಲಿನ ಉತ್ಪನ್ನಗಳನ್ನು ಬಳಸುವುದರ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಬಲಪಡಿಸುವಂತೆ ಕೋರಿದರು. ಈ ವೇಳೆ ತುಮಕೂರು ಹಾಲು ಒಕ್ಕೂಟದ ಮಾರುಕಟ್ಟೆ ವಿಸ್ತರಣಾಧಿಕಾರಿಗಳು, ರೂಟ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070