ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನಕಪತ್ತಿನ ಸಹಕಾರದಲ್ಲಿ ಮೂರು ಕೋಟಿ ವ್ಯವಹಾರ,ಉತ್ತಮ ಲಾಭಾಂಶ

ಹುಳಿಯಾರಿನ ಶ್ರೀಕನಕ ಪತ್ತಿನ ಸಹಕಾರ ಸಂಘದ 2011-12 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯ ಉದ್ಘಾಟನೆಯಲ್ಲಿ ಸಂಘದ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ, ನಿರ್ದೇಶಕರಾದ ಕೆಚ್. ಆಶೋಕ್, ಎನ್.ಬಿ.ಗವಿರಂಗಯ್ಯ,ಎಸ್.ಜಿ.ಶಿವಣ್ಣ,ಶಿವಮ್ಮ,ಜಯಣ್ಣ ಇದ್ದಾರೆ. ಹೋಬಳಿಯ ಶ್ರೀಕನಕ ಪತ್ತಿನ ಸಹಕಾರ ಸಂಘದ 2011-12 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆ ಭಾನುವಾರ ಸಂಘದ ಕಛೇರಿ ಆವರಣದಲ್ಲಿ ಸಂಘದ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ಸಂಘದ ನಿರ್ದೇಶಕ ಹೆಚ್. ಆಶೋಕ್ ಮಾತನಾಡಿ,ಇಂದು ಕನಕಪತ್ತಿನ ಸಹಕಾರ ಸಂಘ ಒಂದು ಉತ್ತಮ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಕಾರಣ ಸಂಘದ ಸರ್ವ ಸದಸ್ಯರು.ಈ ಸಂಘ ಸುಮಾರು 600 ಸದಸ್ಯರನ್ನೊಳಗೊಂಡಿದೆ..ಆದರೆ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಕೆಲವೇ ಮಂದಿ ಹಾಜರಿರುವುದು ನಮ್ಮ ಸಂಘದಲ್ಲಿ ಒಗ್ಗಟಿಲ್ಲವೇನೂ ಅನಿಸುತ್ತದೆ. ಸಭೆಯಲ್ಲಿ ನಡೆಯುವಂತಹ ಕಾರ್ಯಗಳ ಬಗ್ಗೆ ಹಾಗೂ ತೆಗೆದು ಕೊಳ್ಳುವ ತೀರ್ಮಾನ ಸರಿಯೋ,ತಪ್ಪೋ ಎಂಬುದನ್ನು ತಿಳಿದು,ಸಲಹೆಗಳನ್ನು ನೀಡಲು ಸದಸ್ಯರುಗಳು ಮುಂದೆ ಬರಬೇಕಿದೆ ಅದಕ್ಕಾಗಿ ದಿನನಿತ್ಯ ಸಂಘದ ಕಛೇರಿಗೆ ಬರದೇ ಹೋದರು ಸಹ ಇಂತಹ ಸಭೆಗಳಿಗೆ ಬಂದು ಕಾರ್ಯಕಾರಿ ಮಂಡಳಿಯ ಆಡಳಿತದ ಏರಿಳಿತಗಳ ಬಗ್ಗೆ ಕೇಳುವಂತಾಗಿ ಎಂದರು. ಸಂಘದ ಅಧ್ಯಕ್ಷರಾದ ವೈ.ಸಿ.ಸಿದ್ದರಾಮಯ್ಯನವರು ಬೈಲಾತಿದ್ದುಪಡಿಗೆ ಅನುಮೋದನೆ ನೀಡಿ,ಸಂಘ ಸ್ಥಾಪನೆಯಾಗಿ ಎರಡು ವ

ಇಂದು(ತಾ.26) ಸ್ವಯಂಪ್ರೇರಿತ ರಕ್ತದಾನ ಶಿಬಿರ

ಹೋಬಳಿಯ ರೋಟರಿ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸಮೃದ್ಧ ಜೀವನ್ ಫೌಂಡೇಶನ್ ಸಂಸ್ಥೆಯವರು ಪಟ್ಟಣದ ರೋಟರಿ ಬಾಲಭವನದಲ್ಲಿ ಇಂದು(ತಾ.26)ಬುಧವಾರ ಬೆಳಿಗ್ಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಶಿಬಿರವು ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ನಡೆಯಲಿದ್ದು ಎಲ್ಲಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವದ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಿ.ಸತೀಶ್(9141586563),ಕೆ.ಶಾಂತಪ್ಪ(9844864396),ಈ.ರವೀಶ್(9448533976),ಕೆ.ಎಸ್.ರಮೇಶ್(9740201822) ಅವರನ್ನು ಸಂಪರ್ಕಿಸಲು ಕೋರಲಾಗಿದೆ.