ಹುಳಿಯಾರಿನ ಶ್ರೀಕನಕ ಪತ್ತಿನ ಸಹಕಾರ ಸಂಘದ 2011-12 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯ ಉದ್ಘಾಟನೆಯಲ್ಲಿ ಸಂಘದ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ, ನಿರ್ದೇಶಕರಾದ ಕೆಚ್. ಆಶೋಕ್, ಎನ್.ಬಿ.ಗವಿರಂಗಯ್ಯ,ಎಸ್.ಜಿ.ಶಿವಣ್ಣ,ಶಿವಮ್ಮ,ಜಯಣ್ಣ ಇದ್ದಾರೆ.
ಹೋಬಳಿಯ ಶ್ರೀಕನಕ ಪತ್ತಿನ ಸಹಕಾರ ಸಂಘದ 2011-12 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆ ಭಾನುವಾರ ಸಂಘದ ಕಛೇರಿ ಆವರಣದಲ್ಲಿ ಸಂಘದ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಸಂಘದ ನಿರ್ದೇಶಕ ಹೆಚ್. ಆಶೋಕ್ ಮಾತನಾಡಿ,ಇಂದು ಕನಕಪತ್ತಿನ ಸಹಕಾರ ಸಂಘ ಒಂದು ಉತ್ತಮ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಕಾರಣ ಸಂಘದ ಸರ್ವ ಸದಸ್ಯರು.ಈ ಸಂಘ ಸುಮಾರು 600 ಸದಸ್ಯರನ್ನೊಳಗೊಂಡಿದೆ..ಆದರೆ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಕೆಲವೇ ಮಂದಿ ಹಾಜರಿರುವುದು ನಮ್ಮ ಸಂಘದಲ್ಲಿ ಒಗ್ಗಟಿಲ್ಲವೇನೂ ಅನಿಸುತ್ತದೆ. ಸಭೆಯಲ್ಲಿ ನಡೆಯುವಂತಹ ಕಾರ್ಯಗಳ ಬಗ್ಗೆ ಹಾಗೂ ತೆಗೆದು ಕೊಳ್ಳುವ ತೀರ್ಮಾನ ಸರಿಯೋ,ತಪ್ಪೋ ಎಂಬುದನ್ನು ತಿಳಿದು,ಸಲಹೆಗಳನ್ನು ನೀಡಲು ಸದಸ್ಯರುಗಳು ಮುಂದೆ ಬರಬೇಕಿದೆ ಅದಕ್ಕಾಗಿ ದಿನನಿತ್ಯ ಸಂಘದ ಕಛೇರಿಗೆ ಬರದೇ ಹೋದರು ಸಹ ಇಂತಹ ಸಭೆಗಳಿಗೆ ಬಂದು ಕಾರ್ಯಕಾರಿ ಮಂಡಳಿಯ ಆಡಳಿತದ ಏರಿಳಿತಗಳ ಬಗ್ಗೆ ಕೇಳುವಂತಾಗಿ ಎಂದರು.
ಸಂಘದ ಅಧ್ಯಕ್ಷರಾದ ವೈ.ಸಿ.ಸಿದ್ದರಾಮಯ್ಯನವರು ಬೈಲಾತಿದ್ದುಪಡಿಗೆ ಅನುಮೋದನೆ ನೀಡಿ,ಸಂಘ ಸ್ಥಾಪನೆಯಾಗಿ ಎರಡು ವರ್ಷ ಕಳೆದು ಮೂರನೇವರ್ಷದಲ್ಲಿ ಸಾಗುತ್ತಿದ್ದು,ಸುಮಾರು ಎರಡರಿಂದ ಮೂರು ಕೋಟಿ ವ್ಯವಹಾರವನ್ನು ಮಾಡಿದ್ದು,ಉತ್ತಮ ಲಾಭಾಂಶಾವನ್ನು ಹೊಂದಿದೆ.ಈ ಬಾರಿ ಸದಸ್ಯರಿಗೆ ಅನುಕೂಲವಾಗುವಂತೆ ಕೆಲ ಬಡ್ಡಿ ದರಗಳನ್ನು ಕಡಿತ ಮಾಡಲಾಗಿದೆ ಎಂದರು.ಸದಸ್ಯರು ಕೇಳುವಂತೆ ಸಂಘಕ್ಕೆ ಬಂದ ಲಾಭಾಂಶವನ್ನು ಹಂಚಿಕೆ ಮಾಡುವ ಬದಲು ನಮ್ಮದೇ ಆದ ಒಂದು ನೀವೇಶನವನ್ನು ಖರೀದಿಸಲು ವಿನಿಯೋಗಿಸೋಣ,ಇಲ್ಲ ತಮಗೆ ಡಿವಿಡೆಂಟ್ ಬೇಕೆ ಬೇಕು ಎಂದಾದರೆ ಕಾರ್ಯಕಾರಿ ಮಂಡಳಿ ಸಭೆ ಸೇರಿ ಈ ಬಗ್ಗೆ ತಿರ್ಮಾನ ಕೈಗೊಳುವುದಾಗಿ ತಿಳಿಸಿದರು. ಕನಕ ಪತ್ತಿನ ಸಹಕಾರ ಸಂಘದಲ್ಲಿ ಎಲ್ಲಾ ಸಮುದಾಯದವರು ಇದ್ದಾರೆ.ಮುಂದಿನ ದಿನಗಳಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದುವ ಮೂಲಕ ಸಂಘ ಬೆಳೆಯಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ನಿರ್ದೇಶಕರಾದ ಎನ್.ಬಿ.ಗವಿರಂಗಯ್ಯ,ಎಸ್.ಜಿ.ಶಿವಣ್ಣ,ಶಿವಮ್ಮ, ಜಿ.ವಿ.ಮಂಜುನಾಥ್, ಜಯಣ್ಣ ಹಾಗೂ ಗ್ರಾ.ಪಂ.ಸದಸ್ಯರಾದ ರಂಗನಾಥ್,ಆಶೋಕ್ ಬಾಬು,ಶಿವಣ್ಣ ಉಪಸ್ಥಿತರಿದ್ದು,ಅಂಜನ ಪ್ರಾರ್ಥಿಸಿ,ರಮೇಶ್ ಸ್ವಾಗತಿಸಿ,ಶಿಕ್ಷಕ ಕೃಷ್ಣಮೂರ್ತಿ ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ