ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿರ್ಮಲ.ವಿ ಚಿಕ್ಕನಾಯಕನಹಳ್ಳಿಯ ನೂತನ ವೃತ್ತನಿರೀಕ್ಷಕರು

 ನಿರ್ಮಲ.ವಿ ಅವರು ಚಿಕ್ಕನಾಯಕನಹಳ್ಳಿ ಪೊಲೀಸ್ ವೃತ್ತ ನಿರೀಕ್ಷಕರಾಗಿ ವರ್ಗಾವಣೆಗೊಂಡು ಬಂದಿದ್ದಾರೆ

ಇಂದಿನ ಪಂಚಾಂಗ 30-06-21

 #ಪಂಚಾಂಗ #ಕ್ಯಾಲೆಂಡರ್ #ನಿತ್ಯಪಂಚಾಂಗ *ದಾರಿದೀಪೋಕ್ತಿ* ☘"ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಳ್ಳಲಿ ಎಂದು ಬಯಸಬಾರದು. ನಮ್ಮನ್ನು ಅರ್ಥ ಮಾಡಿಕೊಳ್ಳುವುದು, ಬಿಡುವುದು ಬೇರೆಯವರಿಗೆ ಬಿಟ್ಟ ವಿಷಯ. ಆದರೆ ಸಾಧ್ಯವಾದಷ್ಟು  ನಾವೇ ಬೇರೆಯವರನ್ನು ಅರ್ಥ ಮಾಡಿಕೊಳ್ಳಬೇಕು. ಅದು ನಮ್ಮ ಕರ್ತವ್ಯ ಮತ್ತು  ಸರಿಯಾದ ಕ್ರಮ ಕೂಡ.."!!"🌿 🙏ನಮಸ್ತೆ🍀ಶುಭೋದಯ🍃ಶುಭದಿನ ------------------ ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏 ----------------- || ಶ್ರೀ ಗುರುಭ್ಯೋ ನಮಃ || *ಇಂದಿನ ಪಂಚಾಂಗ* 30-06-2021 : ಬುಧವಾರ ಸಂವತ್ಸರ : ಪ್ಲವ ನಾಮ ಸಂವತ್ಸರ ಆಯನಂ : ಉತ್ತರಾಯಣ ಋತು : ಗ್ರೀಷ್ಮ ಮಾಸ : ಜ್ಯೇಷ್ಠ ಪಕ್ಷ :  ಕೃಷ್ಣ ಪಕ್ಷ ವಾಸರ : ಸೌಮ್ಯವಾಸರ ತಿಥಿ: ಷಷ್ಠೀ ಮ. 01:18 ವರೆಗೆ, ನಂತರ ಸಪ್ತಮೀ ನಕ್ಷತ್ರ:ಪೂರ್ವಾ ಭಾದ್ರ ಮರುದಿನ ಬೆ. 02:03 ವರೆಗೆ , ನಂತರ ಉತ್ತರಾಭಾದ್ರ ಯೋಗ: ಆಯುಷ್ಮಾನ್ ಬೆ. 11:15 ವರೆಗೆ, ನಂತರ ಸೌಭಾಗ್ಯ ಕರಣ: ವಣಿಜ ಮ. 01:18 ವರೆಗೆ  , ವಿಷ್ಟಿ ಮರುದಿನ ಬೆ. 01:34 ವರೆಗೆ,ನಂತರ ಬವ ಅಭಿಜಿತ್ ಮುಹುರ್ತ: ಯಾವುದೂ ಇಲ್ಲ ಅಮೃತಕಾಲ: ಸಂ.05:43 ಪಿ ಎಂ to ರಾ.07:23 ವರೆಗೆ ಆನಂದಾದಿ ಯೋಗ: ಪದ್ಮ ಮರುದಿನ ಬೆ. 02:03 ವರೆಗೆ , ನಂತರ ಕಾಣ ಸೂರ್ಯ ರಾಶಿ : ಮಿಥುನ ಚಂದ್ರ ರಾಶಿ : ಕುಂಭ ರಾ. 07:43 ,ನಂತರ ಮೀನ ---------------

ಲಾಕ್ಡೌನ್ ಸಮಯದಲ್ಲಿ ಪೊಲೀಸರ ವಶದಲ್ಲಿದ್ದ ವಾಹನಗಳ ಬಿಡುಗಡೆ ನಾಳೆಯಿಂದ

ಲಾಕ್ ಡೌನ್ ಸಮಯದಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ವಾಹನಗಳನ್ನು ನಾಳೆಯಿಂದ ಬಿಡುಗಡೆ ಮಾಡಲಾಗುವುದು. ವಾಹನಗಳ ಮಾಲೀಕರುಗಳು ತಮ್ಮ ಆಧಾರ್ ಕಾರ್ಡ್, ಒಂದು ಪಾಸ್ ಪೋರ್ಟ್ ಸೈಜ್ ಫೋಟೋ, ವಾಹನದ ಎಲ್ಲ ದಾಖಲಾತಿಗಳು ಮತ್ತು 20 ರೂಪಾಯಿಯ ಸ್ಟ್ಯಾಂಪ್ ಪೇಪರ್ ನೊಂದಿಗೆ ಒಬ್ಬರು ಸಾಕ್ಷಿದಾರರೊಂದಿಗೆ ಠಾಣೆಗೆ ಹಾಜರಾಗಿ 500 ರೂಗಳನ್ನು ಡೆಪಾಸಿಟ್ ಮಾಡಿ ವಾಹನವನ್ನು ಬಿಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಹುಳಿಯಾರಿನಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಹುಳಿಯಾರಿನಲ್ಲಿ ಪ್ರತಿಭಟನೆ ಹುಳಿಯಾರು ಬ್ಲಾಕ್ ಕಾಂಗ್ರೆಸ್ ಮತ್ತು ಯುವಕಾಂಗ್ರೆಸ್ ವತಿಯಿಂದ ಹುಳಿಯಾರಿನ ಕನಕ ಸರ್ಕಲ್ ಬಳಿ ಇರುವ ಭಾರತ್ ಪೆಟ್ರೋಲ್ ಬಂಕ್ ಬಳಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.                  ಪೆಟ್ರೋಲ್, ಡೀಸೆಲ್,ಗ್ಶಾಸ್ ಸಿಲಿಂಡರ್ ಮತ್ತು ದಿನ ನಿತ್ಶ ಬಳಸುವ ಅಡಿಗೆ ಸಾಮಗ್ರಿಗಳ ಬೆಲೆ ಗಗನಕ್ಕೆರಿದ್ದು ಇದರ ವಿರುದ್ದ ನರೇಂದ್ರಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಶ ಬಿಜೆಪಿ ಸರ್ಕಾರದ ನೀತಿಯ ವಿರುದ್ದ ಪ್ರತಿಭಟಿಸಲಾಯಿತು.          ಹುಳಿಯಾರು ಜಿ.ಪಂ.ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಶಕ್ಷ ವೈ.ಸಿ.ಸಿದ್ಧರಾಮಯ್ಶ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು.              ತುಮಕೂರು ಜಿಲ್ಲಾ ಯುವಕಾಂಗ್ರೆಸ್ ಅಧ್ಶಕ್ಷ ಶಶಿ ಹುಲಿಕುಂಟೆ ಮಠ್ ಮಾತನಾಡಿ ಪೆಟ್ರೋಲ್/ ಡೀಸೆಲ್ ದರವನ್ನು ಕಡಿತ ಗೊಳಿಸದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಕೇಂದ್ರ ಮತ್ತು ರಾಜ್ಶ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.                 ಈ ಸಂದರ್ಭದಲ್ಲಿ ಹುಳಿಯಾರು ಪ.ಪಂ.ಸದಸ್ಶರುಗಳಾದ ಎಸ್ ಆರ್ ಎಸ್ ದಯಾನಂದ್,ಜುಬೇರ್,ಸಿದ್ದೀಕ್,ಪಿ ಎಲ್ ಡಿ.ಬ್ಶಾಂಕ್ ನಿರ್ಧೇಶಕ ಕೆ.ಸಿ.ಶಿವಕುಮಾರ್,ರಾಜ್ಶ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್,ಹುಳಿಯಾರು ಬ್ಲಾಕ

ದಲಿತ- ಬಂಡಾಯ ಸಾಹಿತ್ಯದ ಧೀಮಂತ ಪ್ರತಿಭೆ ಸಿದ್ಧಲಿಂಗಯ್ಯನವರು

  ದಲಿತ- ಬಂಡಾಯ ಸಾಹಿತ್ಯದ ಧೀಮಂತ ಪ್ರತಿಭೆ ಸಿದ್ಧಲಿಂಗಯ್ಯನವರು ಮಿಂಚಿ ಹೋಗುವ ಮುನ್ನ ..... ನಾನು ಸತ್ತರೆ ನೀವು ಅಳುವಿರಿ ನಿಮ್ಮ ಕೂಗು ನನಗೆ ಕೇಳಿಸದು ನನ್ನ ನೋವಿಗೆ ಈಗಲೇ ಮರುಗಲಾಗದೇ... ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇ ಮನೆಯತ್ತ ಧಾವಿಸುವಿರಿ ಶ್ರದ್ದಾಂಜಲಿ ಹೇಳೋ ಬದಲು ಈವಾಗಲೇ ಸುಖ ದುಃಖ ಹಂಚಿಕೊಳ್ಳಲಾಗದೇನು... ಮಿಂಚಿ ಹೋಗುವ ಮುನ್ನ ಹಂಚಿ ಬಾಳುವ ಬದುಕು ಸಹ್ಯವಲ್ಲವೇನು...             - ಡಾ. ಸಿದ್ದಲಿಂಗಯ್ಯ ಹೀಗೊಂದು ಭಾವಪೂರ್ಣ ವಿದಾಯದ ಕವಿತೆಯನ್ನು ಬರೆದದ್ದು ಖ್ಯಾತ ದಲಿತ-ಬಂಡಾಯ ಸಾಹಿತಿ ಎಂದೇ ಪ್ರಸಿದ್ಧರಾಗಿದ್ದ ಸಿದ್ಧಲಿಂಗಯ್ಯನವರು. ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಕೊರೋನ ಸೋಂಕಿಗೆ ತುತ್ತಾಗಿ ಚೇತರಿಸಿಕೊಳ್ಳಲಾಗದೆ ಬಹು ಅಂಗಾಂಗ ವೈಫಲ್ಯದಿಂದಾಗಿ ಜೂನ್ 11, 2021 ರಂದು ಕೊನೆಯುಸಿರೆಳೆದು ನಮ್ಮನ್ನಗಲಿದ ದಲಿತ- ಬಂಡಾಯ ಸಾಹಿತ್ಯದ ಧೀಮಂತ ಪ್ರತಿಭೆ ಇವರು . ಜನನ ಮತ್ತು ವಿದ್ಯಾಭ್ಯಾಸ :- ಅವರು ಜನಿಸಿದ್ದು 1954 ರ ಫೆಬ್ರವರಿ 3 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ. ತಂದೆ ದೇವಯ್ಯ ತಾಯಿ ವೆಂಕಟಮ್ಮ. ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಇವರಿಗೆ ಮಲ್ಲೇಶ್ವರಂ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುವಾಗಲೇ ಕವಿತೆ ಬರೆಯುವ ಗೀಳು ಹತ್ತಿತ್ತು. ವಿದ್ಯಾರ್ಥಿದೆಸೆಯಲ್ಲೇ ಉತ್ತಮ ಭಾಷಣಕಾರರೂ ಆಗಿ ಗುರುತಿಸಿಕೊಂಡಿದ್ದರು. ಮುಂದೆ 19

ರಾಜ್ಯದ ಜಿಲ್ಲಾವಾರು ಹಾಗೂ ತುಮಕೂರು ಜಿಲ್ಲೆಯ ತಾಲೂಕುವಾರು ಇಂದಿನ ಕೋವಿಡ್ ಅಂಕಿಅಂಶ