ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾಳೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ 2022-23 ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆ

ಹುಳಿಯಾರು ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ನಾಳೆ ದಿನಾಂಕ 24/05/2022 ರ ಮಂಗಳವಾರ ಮ. 3:00 ಗಂಟೆಗೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಹೆಚ್.ಎನ್.ಕಿರಣ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಪ.ಪಂನ ಕೌನ್ಸಿಲ್ ಸಭಾಂಗಣದಲ್ಲಿ 2022-23 ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಸದರಿ ಸಭೆಗೆ ಪಟ್ಟಣ ಪಂಚಾಯತಿಯ ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರುಗಳು ಹಾಗೂ ನಾಮನಿರ್ದೇಶಿತ ಸದಸ್ಯರುಗಳು ಹಾಗೂ ಸಮಸ್ತ ನಾಗರಿಕರು ತಪ್ಪದೇ ಆಗಮಿಸಿ ಹುಳಿಯಾರ್ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಭೂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ಪರಿಹಾರ ತರಬೇಕಿದೆ:ಚಂದ್ರಪ್ಪ

ಹುಳಿಯಾರು :ಭೂವಂಚಿತ ಬಗರ್ ಹುಕುಂ ಸಾಗುವಳಿದಾರರು ಜಮೀನು ಪಡೆಯಲು ಅವಧಿ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಚಂದ್ರಪ್ಪ ಬಣ ಸ್ವಾಗತಿಸಿದೆ . ರೈತ ವಿರೋಧಿ ಕಾಯ್ದೆಯನ್ನು ವಾಪಸ್ಸು ಪಡೆಯುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಮನವಿ ಸಲ್ಲಿಸಲು ಹುಳಿಯಾರಿನ ನಾಡಕಚೇರಿಗೆ ತೆರಳಿದ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ ಸರ್ಕಾರ ಹಲವಾರು ಬಾರಿ ಬಗರ್ ಹುಕುಂ ಸಾಗುವಳಿ ಭೂಮಂಜೂರಾತಿ ಭರವಸೆ ನೀಡಿ ಹಲವಾರು ಬಾರಿ ಅರ್ಜಿ ಆಹ್ವಾನಿಸುತ್ತಿದೆ. ಅರ್ಜಿ ಸ್ವೀಕರಿಸಲು ಮುಂದಾಗುವ ಸರ್ಕಾರ ನಂತರ ಮಂಜೂರಾತಿ ಮಾಡದೆ ಮುಂದುವರಿಸುತ್ತಲೇ ಬಂದಿದೆ. ಸರ್ಕಾರ ಈಗಲಾದರೂ ರಾಜ್ಯಾದ್ಯಂತ ಇರುವ ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ಪರಿಹಾರ ತರಬೇಕಿದೆ ಎಂದರು.  ಸಾಗುವಳಿ ಚೀಟಿ ನೀಡಲು ಭೂಮಂಜೂರಾತಿ ಸಮಿತಿಗಳ ಸಭೆ ನಡೆಸಿ ಗ್ರಹಚಾರಕ್ಕೆ ಎಡೆಮಾಡದೆ ನಿಜವಾದ ಸಾಗುವಳಿದಾರರಿಗೆ ಮುಂದಾಗಬೇಕಿದೆ ಎಂದರು.  ಈ ಸಂದರ್ಭದಲ್ಲಿ ಸೋಮಜ್ಜನ ಪಾಳ್ಯದ ಬೀರಪ್ಪ,ಕರಿಯಣ್ಣ ,ಸಿದ್ದರಾಮಯ್ಯ, ರೇವಣ್ಣ, ಹೇಮಾವತಿ ,ಶಿವಮ್ಮ, ಹನುಮಂತಯ್ಯ ಮೊದಲಾದವರಿದ್ದರು.

ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ನರೇಗ ಯೋಜನೆ ಮಹತ್ವದ ಪಾತ್ರವಹಿಸುತ್ತದೆ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ತಮ್ಮಡಿಹಳ್ಳಿ ದೇವರಾಜ್ ಶ್ಲಾಘಿಸಿದರು                  ಯಳನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳೆಕಲ್ ಗೊಲ್ಲರಹಟ್ಟಿ ಕಟ್ಟೆಯಲ್ಲಿ ನಡೆದ ರೋಜ್ಗಾರ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಗ್ರ ಅಭಿವೃದ್ಧಿ ಕಾಮಗಾರಿ ಕೂಲಿ ಉದ್ಯೋಗದ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.                                             ಅಕುಶಲ ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ನೀಡಿ, ಬಡಜನರ ಬದುಕನ್ನು ಹಸನಾಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದ ಅವರು ಗ್ರಾಮೀಣ ಪ್ರದೇಶದಲ್ಲಿ ಬಡಜನರನ್ನು ತೊಡಗಿಸಿಕೊಂಡು ಕೃಷಿ ಕಾರ್ಮಿಕರಿಗೆ ಕೂಲಿ ನೀಡುವ ಉದ್ಯೋಗ, ಆಹಾರಭದ್ರತೆ, ದೀರ್ಘಕಾಲ ಬಾಳಿಕೆ ಬರುವಂತಹ ಸ್ವತ್ತುಗಳ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ಕೈಗೊಂಡು,ಕೂಲಿ ಕಾರ್ಮಿಕರಿಗೆ 309 ರೂಪಾಯಿ ಹಣ ನೀಡುವ ಮುಖಾಂತರ

ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಹೊನ್ನಶೆಟ್ಟಿಹಳ್ಳಿಯಲ್ಲಿ ಕಿಸಾನ್ ಕ್ರೆಡಿಟ್ ಆಂದೋಲನ ಕಾರ್ಯಕ್ರಮ.

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ  ಹಂದನಕೆರೆ ಹೋಬಳಿಯ ಹೊನ್ನಶೆಟ್ಟಿಹಳ್ಳಿಯಲ್ಲಿ ನಬಾರ್ಡ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್‌ವತಿಯಿಂದ ಜಂಟಿಯಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು ಮತ್ತಿಘಟ್ಟ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ನೀರಜ್ ಕುಮಾರ್ ಮಾತನಾಡಿ ನಮ್ಮ ಬ್ಯಾಂಕಿನಲ್ಲಿ ಈಗಾಗಲೇ ಸಾವಿರಾರು  ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ವಿತರಿಸಿದ್ದು ಅನೇಕ ರೈತರು ಇದರ ಪ್ರಯೋಜನ ಪಡೆದಿದ್ದಾರೆ.ಹಾಗಾಗಿ ಉಳಿದ ರೈತರು ಕೂಡ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆಯಬೇಕೆಂದು ಕರೆ ನೀಡಿದರು.  ಚಿಕ್ಕನಾಯಕನಹಳ್ಳಿಯ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಲಹೆಗಾರರಾದ  ಆರ್. ಎಂ. ಕುಮಾರಸ್ವಾಮಿಯವರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವುದರಿಂದ ಸಿಗುವ ಅನುಕೂಲತೆಗಳು ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಪಡೆದಲ್ಲಿ ಬಡ್ಡಿ ರಿಯಾಯಿತಿ, ಅಪಘಾತ ವಿಮೆಸೌಲಭ್ಯ, ಓ ಡಿ, ಫಸಲ್ ಭೀಮಾ ಯೋಜನೆ ಮುಂತಾದ ಅನುಕೂಲಗಳಿವೆ ಎಂದರು.  ಅಲ್ಲದೇ ಪ್ರಧಾನಮಂತ್ರಿ ಸುರಕ್ಷಾ ಭಿಮಾ ಹಾಗೂ ಜೀವನ ಜ್ಯೋತಿ ಭೀಮಾ ಯೋಜನೆಯ ಬಗ್ಗೆ ಸಹ ಮಾಹಿತಿ ನೀಡಿದರು.ಎಟಿಎಂ ಪಡೆದರು ಕೂಡ 2ಲಕ್ಷ ಅಪಘಾತ ವಿಮೆ ದೊರೆಯುತ್ತದೆ ಎಂದು ತಿಳಿಸಿದರು.   ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತಿಘಟ್ಟ ಶಾಖೆಯ ಸುದರ್ಶನ್ ಬಿ.ಸಿ. ಹಾಗೂ ರಾಘವೇಂದ್ರಾಚಾರ್ ಕಾಯಕ್ರಮದಲ್ಲಿ ಉಪಸ್ಥಿತರ