ಹುಳಿಯಾರು :ಭೂವಂಚಿತ ಬಗರ್ ಹುಕುಂ ಸಾಗುವಳಿದಾರರು ಜಮೀನು ಪಡೆಯಲು ಅವಧಿ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಚಂದ್ರಪ್ಪ ಬಣ ಸ್ವಾಗತಿಸಿದೆ .
ರೈತ ವಿರೋಧಿ ಕಾಯ್ದೆಯನ್ನು ವಾಪಸ್ಸು ಪಡೆಯುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಮನವಿ ಸಲ್ಲಿಸಲು ಹುಳಿಯಾರಿನ ನಾಡಕಚೇರಿಗೆ ತೆರಳಿದ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ ಸರ್ಕಾರ ಹಲವಾರು ಬಾರಿ ಬಗರ್ ಹುಕುಂ ಸಾಗುವಳಿ ಭೂಮಂಜೂರಾತಿ ಭರವಸೆ ನೀಡಿ ಹಲವಾರು ಬಾರಿ ಅರ್ಜಿ ಆಹ್ವಾನಿಸುತ್ತಿದೆ. ಅರ್ಜಿ ಸ್ವೀಕರಿಸಲು ಮುಂದಾಗುವ ಸರ್ಕಾರ ನಂತರ ಮಂಜೂರಾತಿ ಮಾಡದೆ ಮುಂದುವರಿಸುತ್ತಲೇ ಬಂದಿದೆ. ಸರ್ಕಾರ ಈಗಲಾದರೂ ರಾಜ್ಯಾದ್ಯಂತ ಇರುವ ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ಪರಿಹಾರ ತರಬೇಕಿದೆ ಎಂದರು.
ಸಾಗುವಳಿ ಚೀಟಿ ನೀಡಲು ಭೂಮಂಜೂರಾತಿ ಸಮಿತಿಗಳ ಸಭೆ ನಡೆಸಿ ಗ್ರಹಚಾರಕ್ಕೆ ಎಡೆಮಾಡದೆ ನಿಜವಾದ ಸಾಗುವಳಿದಾರರಿಗೆ ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸೋಮಜ್ಜನ ಪಾಳ್ಯದ ಬೀರಪ್ಪ,ಕರಿಯಣ್ಣ ,ಸಿದ್ದರಾಮಯ್ಯ, ರೇವಣ್ಣ, ಹೇಮಾವತಿ ,ಶಿವಮ್ಮ, ಹನುಮಂತಯ್ಯ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ