ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ನಡೆಯಲಿರುವ 285 ನೇ ಸೇವಾಲಾಲ್ ಜಯಂತಿಯನ್ನು ಯಶಸ್ವಿಗೊಳಿಸಲು ಕರೆ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ನಡೆಯಲಿರುವ 285 ನೇ ಸೇವಾಲಾಲ್ ಜಯಂತಿಯನ್ನು ಯಶಸ್ವಿಗೊಳಿಸಲು ಕರೆ                      ಸದ್ಗುರು ಸೇವಾಲಾಲ್ ಜಯಂತಿ ಆಚರಣೆಯ ಪೂರ್ವಸಿದ್ಧತೆಗಾಗಿ ಶ್ರೀ ಸೇವಾಲಾಲ್ ಮರಿಯಮ್ಮ ದೇವಿ ತಾಂಡಾಭಿವೃದ್ಧಿ ಟ್ರಸ್ಟ್ ವತಿಯಿಂದ ಭಾನುವಾರ  ಶಿರಾ-ಹುಳಿಯಾರು ರಸ್ತೆಯಲ್ಲಿರುವ ಶ್ರೀ ಠೋಕ್ರಿಬನ್ಕಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಜರುಗಿತು. ಮುಖಂಡರಾದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಘುನಾಥ್ ಮಾತನಾಡಿ ಜಯಂತಿ ರೂಪೂರೇಷೆಗಳನ್ನು ಸಿದ್ದಪಡಿಸಿ, ಎಲ್ಲರೂ ತಪ್ಪದೇ ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸುವಂತೆ ಕರೆ ನೀಡಿದರು.              ಸಭೆಯಲ್ಲಿ ಸಮಗ್ರ ತಾಲ್ಲೂಕಿನ ಸಮಗ್ರ ಗೋರ್ ಬಂಧುಗಳು ಭಾಗವಹಿಸಿ ಚರ್ಚೆ ನಡೆಸಿದರು.             ಇದೇ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ  ಶ್ರೀ ಸಂತ ಸೇವಾಲಾಲ್ ಜಯಂತ್ಯೋತ್ಸವ ಸಮಿತಿಯನ್ನು ರಚನೆ ಮಾಡಲಾಯಿತು ಹಾಗೂ ಆಯಾ ತಾಂಡಾದ ನಾಯಕ್, ಡಾವೋ ಕಾರಬಾರಿ ಸೇರಿ ತಾಲ್ಲೂಕಿನ ಪ್ರತಿ ತಾಂಡಾಕ್ಕೆ ನಾಲ್ಕು ಜನ ಮುಖಂಡರನ್ನು ಆಯ್ಕೆ ಮಾಡಲಾಯಿತು.                   ಈ ಬಾರಿ ಎಲ್ಲರೂ ಕೈಜೋಡಿಸುವ ಮೂಲಕ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ನಡೆಯಲಿರುವ 285 ನೇ ಸೇವಾಲಾಲ್ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಲಾಯಿತು.                   ತಾಲ್ಲೂಕಿನ ಎಲ್ಲ ತಾಂಡದ ನಾಯಕ್, ಡಾವೋ ಕಾರಬಾರಿ ಸ

ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು- ಇಕೆವೈಸಿ ಮಾಡಿಸಲು ಅನುಕೂಲ ಕಲ್ಪಿಸಲು ಮನವಿ

ಹುಳಿಯಾರು : ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆಯ ಪಂಚ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಎರಡು ಸಾವಿರ ರೂಪಾಯಿ ಸಹಾಯಧನ ಪಡೆಯಲು ಚಿಕ್ಕನಾಯಕನಹಳ್ಳಿ ತಾಲೂಕು, ಹುಳಿಯಾರು ಪಟ್ಟಣ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಲು ಮತ್ತು ಇಕೆವೈಸಿ ಮಾಡಲು ಲಾಗಿನ್ ಕೊಡದೆ ಜನರಲ್ಲಿ ಗೊಂದಲ ಮತ್ತು ತೊಂದರೆ ಉಂಟಾಗುತ್ತಿದೆ.                     ಹುಳಿಯಾರು ಪಟ್ಟಣ ಪಂಚಾಯತಿ ಆಗಿದ್ದರೂ ಸಹ ಹುಳಿಯಾರು ನಗರದಲ್ಲಿ ಯಾವುದೇ ಗ್ರಾಮ ಒನ್ ,ಬಾಪೂಜಿ ಸೇವಾ ಕೇಂದ್ರ ,ಸೇವಾ ಸಿಂಧೂರ ,ಕರ್ನಾಟಕ ಒನ್, ಸರ್ಕಾರದ ಕಂಪ್ಯೂಟರ್ ಸೆಂಟರ್ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.ಈ ಮನವಿಯನ್ನು ಪರಿಗಣಿಸಿ ಹುಳಿಯಾರ್ ಪಟ್ಟಣ ಪಂಚಾಯಿತಿಲಿ ಲಾಗಿನ್ ನೀಡಿ ಅರ್ಜಿ ಹಾಕಲು ಮತ್ತು ಇಕೆವೈಸಿ ಮಾಡಲು ಅನುಕೂಲ ಮಾಡಿಕೊಡಬೇಕಾಗಿ ಜಿಲ್ಲಾಧಿಕಾರಿಗಳಲ್ಲಿ ವಿನಂತಿ.