ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು- ಇಕೆವೈಸಿ ಮಾಡಿಸಲು ಅನುಕೂಲ ಕಲ್ಪಿಸಲು ಮನವಿ
ಹುಳಿಯಾರು: ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆಯ ಪಂಚ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಎರಡು ಸಾವಿರ ರೂಪಾಯಿ ಸಹಾಯಧನ ಪಡೆಯಲು ಚಿಕ್ಕನಾಯಕನಹಳ್ಳಿ ತಾಲೂಕು, ಹುಳಿಯಾರು ಪಟ್ಟಣ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಲು ಮತ್ತು ಇಕೆವೈಸಿ ಮಾಡಲು ಲಾಗಿನ್ ಕೊಡದೆ ಜನರಲ್ಲಿ ಗೊಂದಲ ಮತ್ತು ತೊಂದರೆ ಉಂಟಾಗುತ್ತಿದೆ.
ಹುಳಿಯಾರು ಪಟ್ಟಣ ಪಂಚಾಯತಿ ಆಗಿದ್ದರೂ ಸಹ ಹುಳಿಯಾರು ನಗರದಲ್ಲಿ ಯಾವುದೇ ಗ್ರಾಮ ಒನ್ ,ಬಾಪೂಜಿ ಸೇವಾ ಕೇಂದ್ರ ,ಸೇವಾ ಸಿಂಧೂರ ,ಕರ್ನಾಟಕ ಒನ್, ಸರ್ಕಾರದ ಕಂಪ್ಯೂಟರ್ ಸೆಂಟರ್ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.ಈ ಮನವಿಯನ್ನು ಪರಿಗಣಿಸಿ ಹುಳಿಯಾರ್ ಪಟ್ಟಣ ಪಂಚಾಯಿತಿಲಿ ಲಾಗಿನ್ ನೀಡಿ ಅರ್ಜಿ ಹಾಕಲು ಮತ್ತು ಇಕೆವೈಸಿ ಮಾಡಲು ಅನುಕೂಲ ಮಾಡಿಕೊಡಬೇಕಾಗಿ ಜಿಲ್ಲಾಧಿಕಾರಿಗಳಲ್ಲಿ ವಿನಂತಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ