ಹುಳಿಯಾರು ಪಟ್ಟಣದಲ್ಲಿ ಒಂದು ಡಿಜಿಟಲ್ ಲೈಬ್ರರಿಯನ್ನು ತೆರೆದು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಹೆಚ್.ಆರ್.ಗುರುಪ್ರಸಾದ್ ಒತ್ತಾಯಿಸಿದರು. ಎಬಿವಿಪಿ ಸದಸ್ಯರೊಂದಿಗೆ ಹುಳಿಯಾರು ಪಟ್ಟಣ ಪಂಚಾಯಿತಿಗೆ ತೆರಳಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಹುಳಿಯಾರಿನಲ್ಲಿ ಸುಮಾರು 5000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹುಳಿಯಾರು ತಾಲ್ಲೂಕ್ ಆಗುವ ನಿರೀಕ್ಷೆಯಿದ್ದರೂ ಸಹ ಹುಳಿಯಾರು ನಗರದಲ್ಲಿ ಒಂದು ಡಿಜಿಟಲ್ ಲೈಬ್ರರಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಕೆಲವು ಗ್ರಾಮಗಳಲ್ಲಿಯೇ ಈಗಾಗಲೇ ಡಿಜಿಟಲ್ ಗ್ರಂಥಾಲಯಗಳಿದ್ದರೂ ಸಹ ಪಟ್ಟಣವಾಗಿರುವ ಹುಳಿಯಾರಿನಲ್ಲಿ ಒಂದು ಸುವ್ಯವಸ್ಥಿತ ಗ್ರಂಥಾಲಯ ಇಲ್ಲದಿರುವುದು ವಿದ್ಯಾರ್ಥಿಗಳ ಕಲಿಕೆ ಸಾಮರ್ಥ್ಯವನ್ನು ಕುಸಿಯುವಂತೆ ಮಾಡಿದೆ.ಶೀಘ್ರವೇ ಹುಳಿಯಾರಿನಲ್ಲಿ ಒಂದು ಡಿಜಿಟಲ್ ಲೈಬ್ರರಿಯನ್ನು ತೆರೆದು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪರವಾಗಿ ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಎಚ್. ಆರ್ ಗುರುಪ್ರಸಾದ್ ಅವರೊಂದಿಗೆ ಎಬಿವಿಪಿ ರಾಜ್ಯ ಸಾಮಾಜಿಕ ಜಾಲತಾಣ ಪ್ರಮುಖರಾದ ದೀಪಕ್ ಕೆಂಕೆರೆ, ಕಾರ್ಯಕರ್ತರಾದ ಶಾಂತ್ ಕುಮಾರ್, ಸಿದ್...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070