ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಶಾಲೆಯ ಆಡಳಿತಾಧಿಕಾರಿಯಾದ ಅಮಿತ್ ಅವರು ಪರಿಸರ ದಿನದ ಬಗ್ಗೆ ಮಾತನಾಡುತ್ತಾ ಮೊದಲಿಗೆ ಭೂಮಿತಾಯಿಯನ್ನು ಸ್ಮರಿಸುತ್ತಾ ಮಾಲಿನ್ಯಕ್ಕೆ ಕಾರಣಗಳು ಮತ್ತು ಪರಿಹಾರೋಪಾಯಗಳನ್ನು ಸೂಚಿಸಿ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲು ಗಿಡಗಳನ್ನು ನೆಡುವುದರ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಒಂದು ಅರ್ಥಪೂರ್ಣ ಬದುಕನ ನಿರ್ಮಿಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು . ಮುಂದೆ ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಈಗಿನಿಂದಲೇ ಅರಿತು ಅದರಿಂದ ಆಗುವ ದುಷ್ಪರಿಣಾಮಗಳನ್ನು ಪರಿಹರಿಸುವ ಮಾರ್ಗಗಳನ್ನು ತಿಳಿದು ನಾವೆಲ್ಲರೂ ಜಾಗೃತರಾಗಿ ಮುಂದಿನ ಪೀಳಿಗೆಗೆ ಸಮೃದ್ಧ ಪರಿಸರವನ್ನು ನೀಡಬೇಕು ಎಂದು ಮಕ್ಕಳಿಗೆ ಹಿತವಚನಗಳನ್ನ ನೀಡಿ ಪರಿಸರ ಪ್ರಜ್ಞೆಯನ್ನು ಮೂಡಿಸಿದರು.
ಶಾಲೆಯ ವಿಜ್ಞಾನ ಶಿಕ್ಷಕರಾದ ಪದ್ಮಾಕರ್ ಮಾತನಾಡಿ ಇಂದಿನ ಉಷ್ಣಾಂಶ ಏರಳಿತ ಪರಿಸರ ಮಾಲಿನ್ಯದ ಹೆಚ್ಚಳದ ಬಗ್ಗೆ ತಿಳಿಸುತ್ತಾ ಪ್ರಕೃತಿಯಲ್ಲಿ ಆಗುತ್ತಿರುವ ಅವಮಾನ ವೈ ಪರಿತ್ಯ ರೋಗರುಜನೆಗಳ ಸಂಖ್ಯೆ ಹೆಚ್ಚಳದಿಂದಾಗಿ ಬದುಕಲು ದುಸ್ತರವಾಗಿದೆ ಹಾಗಾಗಿ ಮುಂದಿನ ಸುಂದರ ಬದುಕಿಗೆ ಮುನ್ನುಡಿಯನ್ನು ಬರೆಯಬೇಕಾದರೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಗಿಡಗಳನ್ನು ಬಹುಮಾನವಾಗಿ ನೀಡುವುದರ ಮೂಲಕ ಪರಿಸರ ಪ್ರಜ್ಞೆಯನ್ನು ಮೆರೆಯಲಾಯಿತು.
ಕಾರ್ಯಕ್ರಮದಲ್ಲಿ ಸುಪ್ರಿಯಾ ಪ್ರಾರ್ಥಿಸಿ ಯುಕ್ತ ಸ್ವಾಗತಿಸಿ ಇಕ್ರಾ ನಿರೂಪಿಸಿದರು.ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿಯಾದ ಶ್ರೀಮತಿ ಕವಿತಾ ಕಿರಣ್ ಕುಮಾರ್, ಪ್ರಾಂಶುಪಾಲರು ಸೇರಿದಂತೆ ಶಿಕ್ಷಕ ವೃಂದ ಮತ್ತು ಮಕ್ಕಳು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ