ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ಯ ಸೋಮೇನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಹಿಳೆ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆಯವರು ನಡೆಸಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಶಿಶು ಮತ್ತು ಮಕ್ಕಳ ಕಲ್ಯಾಭಿವೃದ್ದಿ ಅಧಿಕಾರಿ ಅನೀಸ್ ಕೈಸರ್ ಉದ್ಘಾಟಿಸಿದರು.ಆಯುಶ್ ವೈದ್ಯೆ ಚಂದನ ,ತಾ.ಪಂ.ಸದಸ್ಯ ಆರ್.ಪಿ.ವಸಂತಯ್ಯ,ಎಸಿಡಿಪಿಓ ಪರಮೇಶ್ವರಪ್ಪ,ಗ್ರಾ.ಪಂ.ಯ ಲಕ್ಷ್ಮಿದೇವಿ,ಕಲ್ಪನಾಬಾಯಿ ,ಶಿಕ್ಷಕಿ ಸವಿತಾ,ಲಕ್ಷ್ಮಮ್ಮ ಇದ್ದಾರೆ. ಇಂದಿನ ಆಧುನಿಕ ಜಗತ್ತಿನಲ್ಲಿ ಜನರು ಕೆಲವೊಂದು ವಸ್ತುಗಳ ಮಹತ್ವವನ್ನು ಮರೆತಿದ್ದು,ಅವುಗಳಿಂದ ಆಗುವಂತ ಉತ್ತಮ ಪ್ರಯೋಜನಗಳನ್ನು ತಿಳಿಯದೇ ಹೋಗಿದ್ದಾರೆ.ಅಲ್ಲದೆ ಹಿಂದಿನ ಅನೇಕ ಮಹಿಳೆಯರಿಗೆ ತಾಯಿತನ ಹಾಗೂ ತಾಯಿ ಎದೆಹಾಲಿನ ಅಮೂಲ್ಯತೆ ತಿಳಿದೇ ಹೋಗಿರುವ ಸನ್ನಿವೇಶದಲ್ಲಿ ಎದೆ ಹಾಲೇ ಅಮೂಲ್ಯವೆಂದು ಆಯುಶ್ ವೈದ್ಯೆ ಚಂದನ ತಿಳಿಸಿದರು. ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ಯ ಸೋಮೇನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಹಿಳೆ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆಯವರು ನಡೆಸಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ತಾಯಿ ಎದೆಹಾಲಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತಾಯಿಯ ಎದೆಹಾಲು ಅಮೃತಕ್ಕೆ ಸಮನಾದುದು ಎದೆಹಾಲಿನಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಬೇಕಾಗುವಂತಹ ಅನೇಕ ಅಂಶಗಳು ಇದ್ದು,ಮಗು ದಷ್ಟ-ಪುಷ್ಟವಾಗಿ ಬೆಳೆಯಲು ಸಹಕಾರಿಯಾಗಿರುತ್ತದೆ.ಪ್ರತಿಯೊಬ್ಬ ವೈದ್ಯರು ಸಹ ಎದೆಹಾಲಿನ ಮಹತ್ವವನ್ನು ಒತ್ತಿ ಹೇಳುತ್ತಾ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070