ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ಯ ಸೋಮೇನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಹಿಳೆ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆಯವರು ನಡೆಸಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಶಿಶು ಮತ್ತು ಮಕ್ಕಳ ಕಲ್ಯಾಭಿವೃದ್ದಿ ಅಧಿಕಾರಿ ಅನೀಸ್ ಕೈಸರ್ ಉದ್ಘಾಟಿಸಿದರು.ಆಯುಶ್ ವೈದ್ಯೆ ಚಂದನ ,ತಾ.ಪಂ.ಸದಸ್ಯ ಆರ್.ಪಿ.ವಸಂತಯ್ಯ,ಎಸಿಡಿಪಿಓ ಪರಮೇಶ್ವರಪ್ಪ,ಗ್ರಾ.ಪಂ.ಯ ಲಕ್ಷ್ಮಿದೇವಿ,ಕಲ್ಪನಾಬಾಯಿ ,ಶಿಕ್ಷಕಿ ಸವಿತಾ,ಲಕ್ಷ್ಮಮ್ಮ ಇದ್ದಾರೆ.
ಇಂದಿನ ಆಧುನಿಕ ಜಗತ್ತಿನಲ್ಲಿ ಜನರು ಕೆಲವೊಂದು ವಸ್ತುಗಳ ಮಹತ್ವವನ್ನು ಮರೆತಿದ್ದು,ಅವುಗಳಿಂದ ಆಗುವಂತ ಉತ್ತಮ ಪ್ರಯೋಜನಗಳನ್ನು ತಿಳಿಯದೇ ಹೋಗಿದ್ದಾರೆ.ಅಲ್ಲದೆ ಹಿಂದಿನ ಅನೇಕ ಮಹಿಳೆಯರಿಗೆ ತಾಯಿತನ ಹಾಗೂ ತಾಯಿ ಎದೆಹಾಲಿನ ಅಮೂಲ್ಯತೆ ತಿಳಿದೇ ಹೋಗಿರುವ ಸನ್ನಿವೇಶದಲ್ಲಿ ಎದೆ ಹಾಲೇ ಅಮೂಲ್ಯವೆಂದು ಆಯುಶ್ ವೈದ್ಯೆ ಚಂದನ ತಿಳಿಸಿದರು.
ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ಯ ಸೋಮೇನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಹಿಳೆ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆಯವರು ನಡೆಸಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ತಾಯಿ ಎದೆಹಾಲಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ತಾಯಿಯ ಎದೆಹಾಲು ಅಮೃತಕ್ಕೆ ಸಮನಾದುದು ಎದೆಹಾಲಿನಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಬೇಕಾಗುವಂತಹ ಅನೇಕ ಅಂಶಗಳು ಇದ್ದು,ಮಗು ದಷ್ಟ-ಪುಷ್ಟವಾಗಿ ಬೆಳೆಯಲು ಸಹಕಾರಿಯಾಗಿರುತ್ತದೆ.ಪ್ರತಿಯೊಬ್ಬ ವೈದ್ಯರು ಸಹ ಎದೆಹಾಲಿನ ಮಹತ್ವವನ್ನು ಒತ್ತಿ ಹೇಳುತ್ತಾರೆ ಆದರೆ ಕೆಲ ತಾಯಂದಿರು ತಮ್ಮ ತಪ್ಪು ತಿಳುವಳಿಕೆಯಿಂದ ಮಗುವಿಗೆ ಎದೆಹಾಲು ನೀಡದಿದರೆ ತಮ್ಮ ಸೌಂದರ್ಯ ನಶಿಸಿ ಹೋಗುತ್ತದೆಂದು ನಿರ್ಲಕ್ಷ್ಯ ವಹಿಸುತ್ತಾರೆ.ಆದರೆ ತಾಯಿಯ ಹಾಲು ಅನ್ನೋದು ಅಮೃತಕ್ಕೆ ಸಮಾನವೆಂಬುದು ಅಕ್ಷರಷಹ ಸತ್ಯವಾಗಿದ್ದು ಮಗುವಿಗೆ ಸಂಪೂರ್ಣ ಪೋಷಕಾಂಶ ಲಭಿಸುತ್ತದೆ.ಮಗುವಿನ ಜನನದ ಪ್ರಥಮ ಆರು ತಿಂಗಳು ಕಡ್ಡಾಯವಾಗಿ ತಾಯಿ ಹಾಲನ್ನು ಬಿಟ್ಟು ಬೇರೇನನ್ನೂ ನೀಡಬಾರದು,ಆರು ತಿಂಗಳ ನಂತರ ಇತರ ಪೂರಕ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ನೀಡುತ್ತಾ ಎದೆಹಾಲನ್ನು ಕನಿಷ್ಠ ಎರಡು ವರ್ಷದ ವರೆಗೆ ನೀಡಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ಶಿಶು ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಅಧಿಕಾರಿ ಅನೀಸ್ ಕೈಸರ್ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯು ಆಗಸ್ಟ್ 1ರಿಂದ 7ರ ವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ (ಇಂಟರ್ ನ್ಯಾಷನಲ್ ಬ್ರೆಸ್ಟ್ ಫೀಡಿಂಗ್ ವೀಕ್) ವನ್ನು 20 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ. ವಿಶ್ವದ ಅನೇಕ ದೇಶಗಳಲ್ಲಿ ಇದನ್ನೂ ಆಚರಿಸಲಾಗುತ್ತದೆ ಎಂದರು. ಎದೆಹಾಲಿನಲ್ಲಿ ವಿಟಮಿನ್, ಪ್ರೋಟೀನ್, ಕೊಬ್ಬಿನ ಅಂಶ ಸರಿಯಾದ ಪ್ರಮಾಣದಲ್ಲಿರುತ್ತದೆ. ಎದೆಹಾಲು ಇತರ ಆಹಾರಗಳಿಗಿಂತ ಬೇಗನೆ ಜೀರ್ಣವಾಗುತ್ತದೆ. ಎದೆಹಾಲು ಸಾಕಷ್ಟು ಸಿಕ್ಕಿದ ಮಕ್ಕಳಿಗೆ ಅಸ್ತಮಾ, ಅಲರ್ಜಿ, ಸೋಂಕು, ಜ್ವರ, ಶ್ವಾಸಕೋಶದ, ಹೃದರಯದ ಕಾಯಿಲೆ ವಿರಳ ಎಂದು ತಿಳಿಸಿದರು.
ತಾ.ಪಂ.ಸದಸ್ಯ ಆರ್.ಪಿ.ವಸಂತಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಎಸಿಡಿಪಿಓ ಪರಮೇಶ್ವರಪ್ಪ,ಗ್ರಾ.ಪಂ.ಯ ಲಕ್ಷ್ಮಿದೇವಿ,ಕಲ್ಪನಾಬಾಯಿ ,ಶಿಕ್ಷಕಿ ಸವಿತಾ,ಲಕ್ಷ್ಮಮ್ಮ,ಎಸ್,ಡಿ.ಎಂ.ಸಿ.ಯ ಆರ್.ಸಿ.ಮಹೇಶ್ ಹಾಜರಿದ್ದರು.ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಮ್ಮ ನಿರೂಪಿಸಿ,ಶಿವಣ್ಣ ಸ್ವಾಗತಿಸಿ,ಪರಮೇಶ್ವರಪ್ಪ ವಂದಿಸಿದರು.
ತಾ.ಪಂ.ಸದಸ್ಯ ಆರ್.ಪಿ.ವಸಂತಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಎಸಿಡಿಪಿಓ ಪರಮೇಶ್ವರಪ್ಪ,ಗ್ರಾ.ಪಂ.ಯ ಲಕ್ಷ್ಮಿದೇವಿ,ಕಲ್ಪನಾಬಾಯಿ ,ಶಿಕ್ಷಕಿ ಸವಿತಾ,ಲಕ್ಷ್ಮಮ್ಮ,ಎಸ್,ಡಿ.ಎಂ.ಸಿ.ಯ ಆರ್.ಸಿ.ಮಹೇಶ್ ಹಾಜರಿದ್ದರು.ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಮ್ಮ ನಿರೂಪಿಸಿ,ಶಿವಣ್ಣ ಸ್ವಾಗತಿಸಿ,ಪರಮೇಶ್ವರಪ್ಪ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ