ಕಾವೇರಿ ನದಿ ನೀರಿಗಾಗಿ ನಡೆದಿರುವ ಹೋರಾಟದ ಅಂಗವಾಗಿ ಕರೆಯಲಾಗಿದ್ದ ಕರ್ನಾಟಕ ಬಂದ್ ಗೆ ಹುಳಿಯಾರಿನ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಹುಳಿಯಾರು ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ,ರೈತ ಸಂಘ,ಬಾಪೂಜಿ ಟೈಲರ್ ಸಂಘ, ಯುತ್ ಕಾಂಗ್ರೆಸ್, ಜಯಕರ್ನಾಟಕ ಸಂಘ, ಟಿಪ್ಪು ಯುವಕರ ಸಂಘ,ಕನ್ನಡ ಸೇನೆ,ವರ್ತಕರ ಸಂಘ,ದಲಿತ ಸಹಾಯವಾಣಿ,ಕನಕದಾಸ ಹಿರಿಯ ವಿದ್ಯಾರ್ಥಿ ಸಂಘ,ಟಿಪ್ಪು ಚಾರಿಟಬಲ್ ಟ್ರಸ್ಟ್,ರೋಟರಿ ಸಂಸ್ಥೆ,ಛಾಯಾಗ್ರಾಹಕರ ಸಂಘ,ಎಬಿವಿಪಿ,ದೇವರಾಜು ಅರಸ್ಸು ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಯವರು,ಸಾರ್ವಜನಿಕರು ಪಾಲ್ಗೊಂಡು ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು. ಇಲ್ಲಿನ ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಅಂಗವಾಗಿ ಹೆದ್ದಾರಿಗೆ ತಡೆಯೊಡ್ಡಿ ರಸ್ತೆಯಲ್ಲೇ ಟೀ ಮಾಡುವ ಮೂಲಕ ಪ್ರತಿಭಟಿಸಿದ್ದರಿಂದ ವಾಹನಗಳೂ ರಸ್ತೆಯ ಇಬ್ಬದಿಯಲ್ಲೂ ಸಾಲುಗಟ್ಟಿ ನಿಂತಿದ್ದವು ಪಟ್ಟಣದ ಪರಿವೀಕ್ಷಣಾ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದ ವಿವಿಧ ಸಂಘ ಸಂಸ್ಥೆಯವರು ಬಿ.ಹೆಚ್.ರಸ್ತೆ ಮಾರ್ಗವಾಗಿ ಸಂಚರಿಸಿ,ರಾಂಗೋಪಾಲ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಸಭೆ ನಡೆಸಿ,ನಂತರ ಗಾಂಧೀಪೇಟೆ ಮಾರ್ಗವಾಗಿ ನಗರದ ಬಸ್ ನಿಲ್ದಾಣದಲ್ಲಿ ಸಂಚರಿಸುತ್ತಾ ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ವಿರುದ್ದ ಉರಿಯುವ ಬಿಸಿಲಿನಲ್ಲಿ ಘೋಷಣೆ ಕೂಗಿದರು.ಕಾವೇರಿ ...