ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸೋ.ಮು.ಭಾಸ್ಕರಾಚಾರ್ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಂ.ಎಸ್.ರವಿಕುಮಾರ್ ನಿವೃತ್ತ ಉಪನ್ಯಾಸಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಪಂಡಿತ್ ತ.ಶಿ.ಬಸವಮೂರ್ತಿ ಅವರ ನಿವಾಸಕ್ಕೆ ಸೋಮವಾರ ಭೇಟಿಯಿತ್ತು ತಾಲ್ಲೂಕಿನಲ್ಲಿ ನಡೆಸಲು ಉದ್ದೇಶಿಸಿರುವ ಕಸಾಪ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿದರು.ತಾಲ್ಲೂಕು ಕಾರ್ಯಕಾರಿ ಸಮಿತಿಯಲ್ಲಿ ಅವರನ್ನು ಗೌರವಾಧ್ಯಕ್ಷರಾಗಿ ಮುಂದುವರಿಯುವಂತೆ ಹಾಗೂ ಕಸಾಪದ ಎಲ್ಲಾ ಚಟುವಟಿಕೆಗಳಲ್ಲು ಪಾಲ್ಗೊಳ್ಳುವಂತೆ ಕೋರಿದರು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾಗಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವಮೂರ್ತಿ ಅವರನ್ನು ಸಕಾರಣವಿಲ್ಲದೆ ಏಕಾಏಕಿ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆದ ಬಗ್ಗೆ ಹಾಗೂ ಜಿಲ್ಲಾಧ್ಯಕ್ಷರು ಈ ಪ್ರಕರಣದಲ್ಲಿ ಮೌನದಿಂದಿದ್ದ ಬಗ್ಗೆ ಜಿಲ್ಲಾಧ್ಯಕ್ಷರಾದ ಸೋ.ಮು.ಭಾಸ್ಕರಾಚಾರ್ ರೊಂದಿಗೆ ಮಾತಿನ ಚಕಮಕಿ ನಡೆಯಿತು.
ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಹೆಚ್.ಕೆ. ರಾಮಯ್ಯ,ಕನ್ನಡ ಸಾಹಿತ್ಯ ಪರಿಷತ್ ನ ತಾಲ್ಲೂಕು ಸಂಚಾಲಕರಾದ ಶಬ್ಬಿರ್,ಮಂಜುರಾಜ್ ಅರಸ್,ತಾಲ್ಲುಕು ಕರವೇ ಅಧ್ಯಕ್ಷ ಸಿ.ಟಿ.ಗುರುಮುರ್ತಿ,ಹುಳಿಯಾರು ಕರವೇ ಅಧ್ಯಕ್ಷ ಶ್ರೀನಿವಾಸ್,ಚನ್ನಬಸವಯ್ಯ,ಕುಮಾರ್,ದಿವಾಕರ್,ನವೀನ್ ಹಾಗೂ ಇತರರಿದ್ದರು.ಜಿಲ್ಲಾಧ್ಯಕ್ಷರಾದ ಸೋ.ಮು.ಭಾಸ್ಕರಾಚಾರ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯವರು ಕಾರ್ಯಕರ್ತರಿಂದ ಅಭಿನಂದಿಸಲಾಯಿತು.
ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಕೆ ಘಟಕದವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸೋ.ಮು.ಭಾಸ್ಕರಾಚಾರ್ ಅವರಿಗೆ ಪುಷ್ಪಮಾಲಿಕೆ ಹಾಕಿ ಅಭಿನಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ