ಕಾವೇರಿ ನದಿ ನೀರಿಗಾಗಿ ನಡೆದಿರುವ ಹೋರಾಟದ ಅಂಗವಾಗಿ ಕರೆಯಲಾಗಿದ್ದ ಕರ್ನಾಟಕ ಬಂದ್ ಗೆ ಹುಳಿಯಾರಿನ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಹುಳಿಯಾರು ಸಂಪೂರ್ಣವಾಗಿ ಸ್ತಬ್ಧವಾಗಿತ್ತು.
ಕರ್ನಾಟಕ ರಕ್ಷಣಾ ವೇದಿಕೆ,ರೈತ ಸಂಘ,ಬಾಪೂಜಿ ಟೈಲರ್ ಸಂಘ, ಯುತ್ ಕಾಂಗ್ರೆಸ್, ಜಯಕರ್ನಾಟಕ ಸಂಘ, ಟಿಪ್ಪು ಯುವಕರ ಸಂಘ,ಕನ್ನಡ ಸೇನೆ,ವರ್ತಕರ ಸಂಘ,ದಲಿತ ಸಹಾಯವಾಣಿ,ಕನಕದಾಸ ಹಿರಿಯ ವಿದ್ಯಾರ್ಥಿ ಸಂಘ,ಟಿಪ್ಪು ಚಾರಿಟಬಲ್ ಟ್ರಸ್ಟ್,ರೋಟರಿ ಸಂಸ್ಥೆ,ಛಾಯಾಗ್ರಾಹಕರ ಸಂಘ,ಎಬಿವಿಪಿ,ದೇವರಾಜು ಅರಸ್ಸು ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಯವರು,ಸಾರ್ವಜನಿಕರು ಪಾಲ್ಗೊಂಡು ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು.
ಇಲ್ಲಿನ ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಅಂಗವಾಗಿ ಹೆದ್ದಾರಿಗೆ ತಡೆಯೊಡ್ಡಿ ರಸ್ತೆಯಲ್ಲೇ ಟೀ ಮಾಡುವ ಮೂಲಕ ಪ್ರತಿಭಟಿಸಿದ್ದರಿಂದ ವಾಹನಗಳೂ ರಸ್ತೆಯ ಇಬ್ಬದಿಯಲ್ಲೂ ಸಾಲುಗಟ್ಟಿ ನಿಂತಿದ್ದವು
ಪಟ್ಟಣದ ಪರಿವೀಕ್ಷಣಾ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದ ವಿವಿಧ ಸಂಘ ಸಂಸ್ಥೆಯವರು ಬಿ.ಹೆಚ್.ರಸ್ತೆ ಮಾರ್ಗವಾಗಿ ಸಂಚರಿಸಿ,ರಾಂಗೋಪಾಲ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಸಭೆ ನಡೆಸಿ,ನಂತರ ಗಾಂಧೀಪೇಟೆ ಮಾರ್ಗವಾಗಿ ನಗರದ ಬಸ್ ನಿಲ್ದಾಣದಲ್ಲಿ ಸಂಚರಿಸುತ್ತಾ ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ವಿರುದ್ದ ಉರಿಯುವ ಬಿಸಿಲಿನಲ್ಲಿ ಘೋಷಣೆ ಕೂಗಿದರು.ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯದ ವಿರುದ್ದ ಕಿಡಿಕಾರಿದರು.
ಈ ಸಂಧರ್ಭದಲ್ಲಿ ಮಾತನಾಡಿದ ರೈತ ಸಂಘದ ಸತೀಶ್ ಮಾತನಾಡಿ,ಕಳೆದ ಹತ್ತು ವರ್ಷಗಳಿಂದ ಕಾವೇರಿ ವಿವಾದ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಗೆಹರಿಸಲು ದೃಡನಿರ್ಧಾರತಾಳದೆ ಮುಂದುವರೆಸಿಕೊಂಡು ಬಂದಿದ್ದೆ ಸಮಸ್ಯೆಗೆ ಕಾರಣ. ಕಳೆದ ಅ ಹತ್ತುದಿನಗಳಿಂದ ರಾಜ್ಯಾದ್ಯಂತ ನೀರುಹರಿಸದಂತೆ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ನೀರು ಹರಿಸುತ್ತಿದೆ. ಈಬಗ್ಗೆ ಎಲ್ಲಾ ಶಾಸಕರು ,ಸಂಸದರು ರಾಜಿನಾಮೆ ನೀಡಿ ಹೋರಾಟದಲ್ಲಿ ತೊಡಗಿಕೊಂಡಿದ್ದರೆ ಕಾವೇರಿ ನೀರು ನಮ್ಮಲೇ ಉಳಿಯುತ್ತಿತ್ತು ಎಂದರು.
ದೇವರಾಜು ಅರಸ್ಸು ವೇದಿಕೆಯ ಬಡಗಿ ರಾಮಣ್ಣ ಮಾತನಾಡಿ,ಕಾವೇರಿ ವಿವಾದದ ಬಗ್ಗೆ ಪೂರಕ ಮಾಹಿತಿಗಳನ್ನು ಸುಪ್ರಿಂಕೋರ್ಟಗೆ ಸಲ್ಲಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದೆ ಸಮಸ್ಯೆ ಬಿಗಡಾಯಿಸಲು ಕಾರಣ. ಈ ಬಾರಿ ರಾಜ್ಯದಲ್ಲಿ ಮಳೆ ಕಡಿಮೆ ಬಿದಿದ್ದು,ಬರಗಾಲದ ಛಾಯೆ ಆವರಿಸಿದ್ದು,ಇಲ್ಲಿನ ರೈತರೇ ಸಮಸ್ಯೆಯಲ್ಲಿದ್ದಾರೆ. ಸುಪ್ರಿಂಕೋರ್ಟ ತಮಿಳುನಾಡಿಗೆ 3ಸಾವಿರ ಕ್ಯೂಸೆಕ್ಸ್ ನೀರು ಬೀಡುತ್ತಿವಂತೆ ಹೇಳಿರುವುದನ್ನು ಖಂಡಿಸಿದ ಅವರು ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಕೂಡದು,ಇದೇ ಮುಂದುವರೆದಿದ್ದೇ ಆದರೆ ಕನ್ನಡ ಸಂಘಟನೆಗಳಿಂದ ಉಗ್ರ ಹೋರಾಟಗಳು ನಡೆಯಲಿವೆ ಎಂದರು.
ಬೆಳಿಗ್ಗೆಯಿಂದಲ್ಲೇ ಕರವೇ ಕಾರ್ಯಕರ್ತರುಗಳು ಗುಂಪಾಗಿ ತೆರಳಿ ಅಲ್ಲಲ್ಲಿ ತೆರೆದಿದ್ದ ಅಂಗಡಿಗಳನ್ನು ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದು ಕಂಡುಬಂತು.ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದ್ದು,ಯಾವುದೇ ವ್ಯಾಪಾರ ಚಟುವಟಿಕೆಗಳೂ ನಡೆಯಲಿಲ್ಲ.ಎಲ್ಲಾ ಮುಖ್ಯ ರಸ್ತೆಗಳಿಗೆ ತಡೆಯೊಡಿ ವಾಹನ ಸಂಚಾರವನ್ನು ತಡೆಯಯಲಾಗಿತ್ತು. ಇದರಿಂದಾಗಿ ನೂರಾರು ವಾಹನಗಳು ರಸ್ತೆ ಬದಿಯಲ್ಲಿ ಸಾಲಾಗಿ ನಿಂತಿದ್ದವು,ರಜೆಯೆಂದು ಮನೆ ಸೇರಿದ್ದ ಜನ ಮನರಂಜನೆಗಾಗಿ ನೋಡಲು ಟಿವಿಗಳೂ ಇಲ್ಲದಿದ್ದರು ಸಹ ಮನೆ ಬಿಟ್ಟು ಆಚೆ ಬಾರದಿರುವುದು ದೌರ್ಭಾಗ್ಯ ಎನ್ನುವಂತಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ