ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನಕ್ಕೆ ಪಾದಯಾತ್ರೆ ಸಂಕಲ್ಪ

                  ದಾರಿಯೂದ್ದಕ್ಕೂ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಪದಗಳನ್ನು ತಾಳ ಹಾಕಿ ಹಾಡುತ್ತಾ,ಕೊರಳಿಗೆ ಕೆಂಪು ವಸ್ತ್ರ ಧರಿಸಿ ಎಡೆಯೂರು ಸಿದ್ಧಲಿಂಗೇಶ್ವರನ ಪೋಟೋ ಹಿಡಿದು,ಯಾವುದೇ ಜಾತಿಭೇದವಿಲ್ಲದೆ,ವೃದ್ದರು,ವಯಸ್ಕರು ಎನ್ನದೆ ಉತ್ತರ ಕರ್ನಾಟಕದ ಹಲವು ಪ್ರದೇಶಗಳ 500ರಕ್ಕೂ ಹೆಚ್ಚು ಪಾದಯಾತ್ರಿಗಳು ಲೋಕಕಲ್ಯಾಣಕ್ಕಾಗಿ ಪಾದಯಾತ್ರೆ ಮೂಲಕ ಶ್ರಮದಾನ ಮಾಡುವ ಸದುದ್ದೇಶದ ಸಂಕಲ್ಪ ಹೊಂದಿ ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನಕ್ಕಾಗಿ ಸತತ 37ನೇ ವರ್ಷದ ಪಾದಯಾತ್ರೆ ನಡೆಸುತ್ತಿದ್ದಾರೆ.                       ಡಂಬಳ-ಗದಗದ ಡಾ|| ಸಿದ್ದಲಿಂಗ ಮಹಾಸ್ವಾಮಿಗಳು,ಹರಿಹರ-ಶಲವಡಿ ವಿರಕ್ತಮಠದ ಗುರುಶಾಂತ ಮಹಾಸ್ವಮಿಜೀಯವರ ಆರೀರ್ವಾದದೊಂದಿಗೆ ನವಲಗುಂದದ ಶಲವಡಿ,ದಾಟನಾಳದಿಂದ ನವಂಬರ್ 28 ರಂದು ಪ್ರಾರಂಭವಾದ ಪಾದಯಾತ್ರೆ ಡಿಸೆಂಬರ್ 13ರಂದು ತುಮಕೂರು ಜಿಲ್ಲೆಯ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿಯ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದಲ್ಲಿ ಭಾಗವಹಿಸುವುದರ ಮೂಲಕ ಕೊನೆಗೊಳ್ಳಲಿದ್ದು,ಸುಮಾರು 500 ಕಿ.ಮೀ ದೂರದ್ದಾಗಿದೆ. ಶಲವಡಿಯ ಶ್ರಿಶೈಲಪ್ಪ ದಿವಂಗತ ಶಿರೋಳ ಅವರ ನೇತೃತ್ವದಲ್ಲಿ ಎಂಟತ್ತು ಮಂದಿಯಿದ್ದ ಪ್ರಾರಂಗೊಂಡ ಪಾದಯಾತ್ರೆ ಇಂದು 500 ರಕ್ಕೂ ಹೆಚ್ಚು ಪಾದಯಾತ್ರಿಗಳನೊಂದಿ ಎಡೆಯೂರಿನ ಸಿದ್ಧಲಿಂಗಸ್ವಾಮಿ ಕ್ಷೇತ್ರದ ಕಾರ್ತಿಕ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಅವಿಸ್ಮರಣೀಯ. ಗದಗದ ತೋಂಟಾದಾರ್ಯ ಮಠಕ್ಕೂ ತುಮಕೂರ