ವಿಷಯಕ್ಕೆ ಹೋಗಿ

ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನಕ್ಕೆ ಪಾದಯಾತ್ರೆ ಸಂಕಲ್ಪ

                  ದಾರಿಯೂದ್ದಕ್ಕೂ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಪದಗಳನ್ನು ತಾಳ ಹಾಕಿ ಹಾಡುತ್ತಾ,ಕೊರಳಿಗೆ ಕೆಂಪು ವಸ್ತ್ರ ಧರಿಸಿ ಎಡೆಯೂರು ಸಿದ್ಧಲಿಂಗೇಶ್ವರನ ಪೋಟೋ ಹಿಡಿದು,ಯಾವುದೇ ಜಾತಿಭೇದವಿಲ್ಲದೆ,ವೃದ್ದರು,ವಯಸ್ಕರು ಎನ್ನದೆ ಉತ್ತರ ಕರ್ನಾಟಕದ ಹಲವು ಪ್ರದೇಶಗಳ 500ರಕ್ಕೂ ಹೆಚ್ಚು ಪಾದಯಾತ್ರಿಗಳು ಲೋಕಕಲ್ಯಾಣಕ್ಕಾಗಿ ಪಾದಯಾತ್ರೆ ಮೂಲಕ ಶ್ರಮದಾನ ಮಾಡುವ ಸದುದ್ದೇಶದ ಸಂಕಲ್ಪ ಹೊಂದಿ ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನಕ್ಕಾಗಿ ಸತತ 37ನೇ ವರ್ಷದ ಪಾದಯಾತ್ರೆ ನಡೆಸುತ್ತಿದ್ದಾರೆ.
                      ಡಂಬಳ-ಗದಗದ ಡಾ|| ಸಿದ್ದಲಿಂಗ ಮಹಾಸ್ವಾಮಿಗಳು,ಹರಿಹರ-ಶಲವಡಿ ವಿರಕ್ತಮಠದ ಗುರುಶಾಂತ ಮಹಾಸ್ವಮಿಜೀಯವರ ಆರೀರ್ವಾದದೊಂದಿಗೆ ನವಲಗುಂದದ ಶಲವಡಿ,ದಾಟನಾಳದಿಂದ ನವಂಬರ್ 28 ರಂದು ಪ್ರಾರಂಭವಾದ ಪಾದಯಾತ್ರೆ ಡಿಸೆಂಬರ್ 13ರಂದು ತುಮಕೂರು ಜಿಲ್ಲೆಯ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿಯ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದಲ್ಲಿ ಭಾಗವಹಿಸುವುದರ ಮೂಲಕ ಕೊನೆಗೊಳ್ಳಲಿದ್ದು,ಸುಮಾರು 500 ಕಿ.ಮೀ ದೂರದ್ದಾಗಿದೆ. ಶಲವಡಿಯ ಶ್ರಿಶೈಲಪ್ಪ ದಿವಂಗತ ಶಿರೋಳ ಅವರ ನೇತೃತ್ವದಲ್ಲಿ ಎಂಟತ್ತು ಮಂದಿಯಿದ್ದ ಪ್ರಾರಂಗೊಂಡ ಪಾದಯಾತ್ರೆ ಇಂದು 500 ರಕ್ಕೂ ಹೆಚ್ಚು ಪಾದಯಾತ್ರಿಗಳನೊಂದಿ ಎಡೆಯೂರಿನ ಸಿದ್ಧಲಿಂಗಸ್ವಾಮಿ ಕ್ಷೇತ್ರದ ಕಾರ್ತಿಕ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಅವಿಸ್ಮರಣೀಯ.
ಗದಗದ ತೋಂಟಾದಾರ್ಯ ಮಠಕ್ಕೂ ತುಮಕೂರು ಜಿಲ್ಲೆಯ ಎಡೆಯೂರಿಗೂ ಅವಿನಾಭಾವ ಸಂಬಂಧ. ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ ಗದಗಿನಲ್ಲಿದ್ದು ಅಲ್ಲಿಂದ ಎಡೆಯೂರಿನ ಸಿದ್ಧಲಿಂಗಸ್ವಾಮಿ ಕ್ಷೇತ್ರದ ಕಾರ್ತಿಕ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಶರಣ ಸಮೂಹದೊಂದಿಗೆ ಪಾದಯಾತ್ರೆ ಮೂಲಕ ಆಗಮಿಸುವುದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯ.
ಬಸವಾದಿ ಶರಣರ ತರುವಾಯ 15-16 ನೇ ಶತಮಾನದಲ್ಲಿ ಬರುವ ಶರಣ ಪರಂಪರೆಯ ಯಡಿಯೂರಿನ ಸಿದ್ದಲಿಂಗ ಶಿವಯೋಗಿಗಳು ಸಂಚಾರಿಗಳಾಗಿ ದೇಶವ ನ್ನೆಲ್ಲ ಸುತ್ತಿ ಶರಣ ಸಂಸ್ಕೃತಿಯನ್ನು ಪ್ರಚುರಪಡಿಸಿ ಸಾಮಾಜಿಕ-ಧಾರ್ಮಿಕ ಜಾಗೃತಿ ಉಂಟು ಮಾಡಿದರು. ಯಡಿಯೂರಿನಲ್ಲಿ ನಿರ್ವಿಕಲ್ಪ ಸಮಾಧಿಗೊಂಡಿರುವ ಸಿದ್ದಲಿಂಗೇಶ್ವರರು ಈಗಲೂ ಅಲ್ಲಿ ಚೇತನ ಸ್ವರೂಪಿಗಳಾಗಿದ್ದಾರೆಂಬ ನಂಬಿಕೆಯೆ ಈ ಕ್ಷೇತ್ರದ ಪ್ರಭಾವ ಹೆಚ್ಚಲು ಕಾರಣ ಎನ್ನಲಾಗಿದೆ.ಶಲವಡಿಯ ಪೂಜ್ಯರಾದ ಶ್ರಿಶೈಲಪ್ಪ ಶಿರೂಳ ಅವರು ಯಡಿಯೂರು ಕ್ಷೇತ್ರಕ್ಕೆ ಪಾದಯಾತ್ರೆ ಪರಂಪರೆಗೆ ಚಾಲನೆ ನೀಡಿದವರಾಗಿದ್ದು ಇಂತಹ ಸುಕ್ಷೇತ್ರಕ್ಕೆ ಕಳೆದ 37 ವರ್ಷಗಳಿಂದಲೂ ನಿರಂತರವಾಗಿ ಪಾದ ಯಾತ್ರೆ ನಡೆಸುತ್ತಿರುವ ಭಕ್ತಪಡೆಯ ಕಾರ್ಯ ಅಭಿ ನಂದನೀಯ.
ಪಾದಯಾತ್ರೆಯ ಯಾತ್ರಿಗಳು ನಿತ್ಯ 35 ರಿಂದ 40 ಕಿ.ಮೀ. ಕ್ರಮಿಸಿ,ನಂತರ ಮೊದಲೇ ನಿಗದಿಯಾದ ಸ್ಥಳಗಳಲ್ಲಿ,ದೇವಾಲಯಗಳಲ್ಲಿ ಭಕ್ತಾಧಿಗಳು ಸಿದ್ದಗೊಳಿಸಿದ ಪ್ರಸಾದವನ್ನು ಅಂಗೀಕರಿಸಿ, ವಿಶ್ರಮಿಸಿಕೊಂಡು, ಸಂಜೆ ಭಜನೆಯನ್ನು ನಡೆಸಿ, ಮರುದಿನ ಮುಂಜಾನೆ ತಮ್ಮ ಪಾದಯಾತ್ರೆಯನ್ನು ಮುಂದುವರೆಸುತ್ತಾರೆ.
ಪಾದಯಾತ್ರೆಗೆ ಯಾರನ್ನು ಬನ್ನಿ ಎಂದು ಒತ್ತಾಯಿಸುವುದಿಲ್ಲ,ಅವರವರೆ ತಮ್ಮ ಸ್ವಯಿಚ್ಚೆಯಿಂದ ಎಡೆಯೂರು ಸಿದ್ಧಲಿಂಗನ ಮೇಲಿನ ಭಕ್ತಿಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ, ಹಿಂದೂ,ಮುಸ್ಲಿಂ,ಕ್ರೈಸ್ತ ಎಂಬ ಯಾವುದೇ ಜಾತಿಭೇದವಿಲ್ಲದೆ,ಹಿರಿಯರು,ಕಿರಿಯರು ಎನ್ನದ್ದೆ ಎಲ್ಲರೂ ಒಟ್ಟಾಗಿ ಸೇರಿದ್ದೇವೆ.ಯಾತ್ರಿಕರಲ್ಲಿ ಕೈಕಾಲು ನೋವು,ಸಕ್ಕರೆ ಕಾಯಿಲೆ,ಬಿ.ಪಿ ಹೊಂದಿದ್ದವರಿದ್ದು ಎಲ್ಲಾ ರೀತಿಯ ಸ್ವಾಮಿಯ ಪ್ರಸಾದವನ್ನು ಸೇವಿಸಿದರು ಸಹ ಅವರಿಗೆ ಯಾವುದೇ ತೊಂದರೆಗಳಾಗಿಲ್ಲ,ಕಾರಣ ಪಾದಯಾತ್ರೆಯಿಂದ ದೇಹದಲ್ಲಿನ ಕಲ್ಮಶದ ಅಂಶವೆಲ್ಲ ನೀಗಿ ದೇಹ ಹಗುರಾಗುತ್ತದೆ.ಅಲ್ಲದೆ ಸಿದ್ಧಲಿಂಗೇಶ್ವರ ಸ್ವಾಮಿಯ ಕೃಪಾಶೀರ್ವಾದ ನಮ್ಮ ಮೇಲಿದೆ ಎಂದು ಸತತ 37ವರ್ಷದ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಹಾಗೂ ಪಾದಯಾತ್ರೆ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಗಡಾರ್ ಅವರು ತಮ್ಮ ಅನುಭವವನ್ನು ಹಂಚಿಕೊಂಳ್ಳುತ್ತಾರೆ.
                  ಪಾದಯಾತ್ರೆ ಮಾರ್ಗ: ನವಲಗುಂದ ಶಲವಡಿಯಿಂದ ಪ್ರಾರಂಭಗೊಂಡ ಪಾದಯಾತ್ರೆಯಲ್ಲಿ ದಾಟನಾಳ,ಶಾನವಾಡ,ಪಡೇಸೂರ,ಖನ್ನೂರ,ನಾಯ್ಕನೂರ,ಯಾವಗಲ್ಲ,ಕೋತಬಾಳ ಬೆಳವಣಕಿ, ಇಂಗಳಹಳ್ಳಿ,ಹೆಬ್ಬಾಳ, ನಿರಲಗಿ,ಬನ್ನಿಕೊಫ್ಫ,ಇಬ್ರಾಹಿಮಪೂರ,ಅಳಗವಾಡಿ,ಅಕ್ಕಿಗುಂದ,ಬಟ್ಟೂರ,ಗದಗ,ಬಾವನೂರ,ಬಾಗಲಕೋಟೆ,ಅರಕೇರಿ,ನೆಲವಡಿ,ಕಂಗವಳ್ಳಿ,ಹಾಗಲಕೇರಿ,ಮೇವುಂಡಿ ಸ್ಥಳಗಳ ಯಾತ್ರಿಕರು ಸೇರಿದ್ದು ಹೊಸದುರ್ಗದ ಕೆಲ್ಲೋಡಿನ ಮಾರ್ಗವಾಗಿ ಹುಳಿಯಾರಿಗೆ ಶನಿವಾರ ಸಂಜೆ ಆಗಮಿಸಿ ಶ್ರೀವೀರಭದ್ರಸ್ವಾಮಿ ದೇವಸ್ಥಾನದಲ್ಲಿ ತಂಗಿದ್ದು,ನಂತರ ಹಟ್ನ,ಕೆ.ಬಿ.ಕ್ರಾಸ್,ತುರುವೇಕೆರೆಯ ಜಡಿಯಾ ಮಾರ್ಗವಾಗಿ ಎಡೆಯೂರನ್ನು ತಲುಪಲಿದ್ದಾರೆ.
ಹುಳಿಯಾರಿನ ಶ್ರೀವೀರಭದ್ರಸ್ವಾಮಿ ದೇವಸ್ಥಾನಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ಆಗಮಿಸಿದ ಉತ್ತರ ಕರ್ನಾಟಕ ಭಾಗದ ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನ ಪಾದಯಾತ್ರೆಗಳನ್ನು ದೇವಸ್ಥಾನದ ಕಮಿಟಿಯವರು ಹಾಗೂ ಭಕ್ತರು ಅವರನ್ನು ಸ್ವಾಗತಿಸಿ,ಊಟದ ವ್ಯವಸ್ಥೆ ಮಾಡಿ ಉಪಚರಿಸಿದರು.ಬ್ಯಾಂಕ್ ಮರುಳಯ್ಯ ಹಾಗೂ ಅವರ ಧರ್ಮಪತ್ನಿ,ಜಲ್ಲಿಗೌಡರ ರುದ್ರಯ್ಯ,ವೇದಮೂರ್ತಿ ಮಲ್ಲಿಕಯ್ಯ,ಬಸವರಾಜು,ಗದ್ದಿಗಪ್ಪ ಸೇರಿದಂತೆ ಇತರರರು ಪಾದಯಾತ್ರಿಕರನ್ನು ಸತ್ಕರಿಸಿದರು.
             ಹುಳಿಯಾರಿನ ಶ್ರೀವೀರಭದ್ರಸ್ವಾಮಿ ದೇವಸ್ಥಾನಕ್ಕೆ ಶನಿವಾರ ಸಂಜೆ ಆಗಮಿಸಿದ್ದ ಉತ್ತರ ಕರ್ನಾಟಕ ಭಾಗದ ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನ ಪಾದಯಾತ್ರೆಗಳು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.