ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲಂಬಾಣಿ ಸಂಸ್ಕೃತಿ ಅಖಂಡ ಭಾರತೀಯ ಸಂಸ್ಕೃತಿಯಾಗಿದೆ :

ಲಂಬಾಣಿ ಸಮುದಾಯದವರು ಭಾರತದ ಎಲ್ಲೆಡೆಯಿದ್ದು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದುವ ಮೂಲಕ ಪುರಾತನ ಕಾಲದಿಂದಲೂ ತಮ್ಮ ಸಂಸ್ಕೃತಿಯನ್ನು ಇಂದಿನವರೆಗೆ ಅನುಸರಿಸಿಕೊಂಡು ಬರುತ್ತಿದ್ದು ನಮ್ಮ ಲಂಬಾಣಿ ಸಂಸ್ಕೃತಿ ಅಖಂಡ ಭಾರತದ ಸಂಸ್ಕೃತಿಯಾಗಿದೆ ಎಂದು ಮಾಯಕೊಂಡ ಶಾಸಕ ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕೆ.ಶಿವಮೂರ್ತಿ ನಾಯಕ್ ಅಭಿಮತ ವ್ಯಕ್ತಪಡಿಸಿದರು.           ಹುಳಿಯಾರಿನ ಕೋಡೀಪಾಳ್ಯದ ಕಂಕಾಳಿ ದೇವಾಲಯ ಕಂಕಾಳಿ ಮತ್ತು ಶ್ರೀ ತುಳಜಾ ಭವಾನಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಹುಳಿಯಾರು ಹೋಬಳಿ ಕೋಡಿಪಾಳ್ಯದಲ್ಲಿ ಕಂಕಾಳಿ ಪ್ರಾರಂಭೋತ್ಸವಕ್ಕೆ ಆಗಮಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕೆ.ಶಿವಮೂರ್ತಿ ನಾಯಕ್ ಮಾಧ್ಯಮದವರೊಂದಿಗೆ ಮಾತನಾಡಿದರು.        ಲಂಬಾಣಿ(ಬಂಜಾರ) ಜನಾಂಗದವರು ಹಿಂದಿನಿಂದಲೂ ಸಹ ತಮ್ಮದೇ ಆದ ವಿಶಿಷ್ಟ ಉಡುಗೆತೊಡುಗೆ ಹಾಗೂ ಭಾಷೆಯನ್ನು ಹೊಂದಿದ್ದು ಇಂದಿಗೂ ಅದನ್ನೇ ಅನುಸರಿಸಿಕೊಂಡು ಸಾಗುತ್ತಿದ್ದಾರೆ. ನಮ್ಮ ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೋಯ್ಯುವ ಕೆಲಸವನ್ನು ಮಾಡಬೇಕಿದೆ ಎಂದರು. ಲಂಬಾಣಿ ಸಮುದಾಯದ ನಾವುಗಳು ಮೂಲ ನಿವಾಸಿಗಳೇ ಆಗಿದ್ದರೂ ಸಹ ಇಂದು ನಮ್ಮ ಹಕ್ಕುಗಳು ನಮಗೆ ದೊರೆಯದಂತಾಗಿವೆ ನಮಗೆ ಸಿಗಬೇಕಾದ ಹಕ್ಕುಗಳು ಸಮರ್ಪಕವಾಗಿ ಸಿಗ