ಲಂಬಾಣಿ ಸಮುದಾಯದವರು ಭಾರತದ ಎಲ್ಲೆಡೆಯಿದ್ದು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದುವ ಮೂಲಕ ಪುರಾತನ ಕಾಲದಿಂದಲೂ ತಮ್ಮ ಸಂಸ್ಕೃತಿಯನ್ನು ಇಂದಿನವರೆಗೆ ಅನುಸರಿಸಿಕೊಂಡು ಬರುತ್ತಿದ್ದು ನಮ್ಮ ಲಂಬಾಣಿ ಸಂಸ್ಕೃತಿ ಅಖಂಡ ಭಾರತದ ಸಂಸ್ಕೃತಿಯಾಗಿದೆ ಎಂದು ಮಾಯಕೊಂಡ ಶಾಸಕ ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕೆ.ಶಿವಮೂರ್ತಿ ನಾಯಕ್ ಅಭಿಮತ ವ್ಯಕ್ತಪಡಿಸಿದರು.
ಹುಳಿಯಾರಿನ ಕೋಡೀಪಾಳ್ಯದ ಕಂಕಾಳಿ ದೇವಾಲಯ ಕಂಕಾಳಿ ಮತ್ತು ಶ್ರೀ ತುಳಜಾ ಭವಾನಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಹುಳಿಯಾರು ಹೋಬಳಿ ಕೋಡಿಪಾಳ್ಯದಲ್ಲಿ ಕಂಕಾಳಿ ಪ್ರಾರಂಭೋತ್ಸವಕ್ಕೆ ಆಗಮಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕೆ.ಶಿವಮೂರ್ತಿ ನಾಯಕ್ ಮಾಧ್ಯಮದವರೊಂದಿಗೆ ಮಾತನಾಡಿದರು. |
ಲಂಬಾಣಿ(ಬಂಜಾರ) ಜನಾಂಗದವರು ಹಿಂದಿನಿಂದಲೂ ಸಹ ತಮ್ಮದೇ ಆದ ವಿಶಿಷ್ಟ ಉಡುಗೆತೊಡುಗೆ ಹಾಗೂ ಭಾಷೆಯನ್ನು ಹೊಂದಿದ್ದು ಇಂದಿಗೂ ಅದನ್ನೇ ಅನುಸರಿಸಿಕೊಂಡು ಸಾಗುತ್ತಿದ್ದಾರೆ. ನಮ್ಮ ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೋಯ್ಯುವ ಕೆಲಸವನ್ನು ಮಾಡಬೇಕಿದೆ ಎಂದರು. ಲಂಬಾಣಿ ಸಮುದಾಯದ ನಾವುಗಳು ಮೂಲ ನಿವಾಸಿಗಳೇ ಆಗಿದ್ದರೂ ಸಹ ಇಂದು ನಮ್ಮ ಹಕ್ಕುಗಳು ನಮಗೆ ದೊರೆಯದಂತಾಗಿವೆ ನಮಗೆ ಸಿಗಬೇಕಾದ ಹಕ್ಕುಗಳು ಸಮರ್ಪಕವಾಗಿ ಸಿಗದೆ ಹೋದಲ್ಲಿ ಲಂಬಾಣಿ ಸಮುದಾಯದ ಎಲ್ಲರೂ ರಾಷ್ತ್ರೀಯ ಮಾನವಹಕ್ಕು ಅಯೋಗಕ್ಕೆ ಹೋಗುವ ಮೂಲಕ ತಮಗೆ ಸಿಗಬೇಕಾದ ಹಕ್ಕುಬಾಧ್ಯತೆಯನ್ನು ಪಡೆಯುತ್ತೇವೆ ಎಂದರು. ನಾವು ಮಾತನಾಡುವ ಲಂಬಾಣಿ ಭಾಷೆಗೆ ಲಿಪಿ ಇಲ್ಲದರೂ ಈ ಭಾಷೆ ಇತರ ಭಾಷೆಗಳಷ್ಟೆ ಪುರಾತನವಾದದ್ದು ಅದಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವ ಕೆಲಸ ಸರ್ಕಾರದಿಂದ ಆಗಬೇಕಿದೆ ಎಂದರು.
ಪ್ರಸ್ತುತದಲ್ಲಿ ರಾಜ್ಯರಾಜ್ಯಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡುತ್ತಿದ್ದು ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರು ಕೇಂದ್ರದ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಅವರೊಂದಿಗೆ ಚರ್ಚಿಸಿ ಈ ಬಿಕ್ಕಟ್ಟನ್ನು ಪರಿಸಹಿಸಬೇಕಿದೆಎಂದರು.
ಪ್ರವಾಸೋದ್ಯಮ ಸ್ಥಳವಾಗಲಿ : ಇಲ್ಲಿ ನಿರ್ಮಾಣವಾಗಿರುವಂತ ಅದ್ಭುತ ದೇವಾಲಯ ಹಾಗೂ ಅನಂತಪದ್ಮನಾಭ ಮೂರ್ತಿ ಅತ್ಯಂತ ವಿಶಿಷ್ಟವಾಗಿದ್ದು, ಈ ಧಾರ್ಮಿಕ ಕ್ಷೇತ್ರವನ್ನು ಸರ್ಕಾರದವರು ಗುರುತಿಸಿ ಕರ್ನಾಟಕದ ಪ್ರವಾಸೋದ್ಯಮ ಪಟ್ಟಿಯಲ್ಲಿ ಸೇರಿಸಬೇಕಿದೆ ಎಂದರು. ಐತಿಹಾಸಿಕ ಜೋಡಣೆಯಾಗಿ ಈ ಕ್ಷೇತ್ರ ತಲೆಯೆತ್ತಿದ್ದು , ಆಚಾರ ವಿಚಾರದ ಜೊತೆಗೆ ಮುಂದಿನ ದಿನಗಳಲ್ಲಿ ತಾಂತ್ರಿಕ, ವೃತ್ತಿಪರ ಶಿಕ್ಷಣ ನೀಡುವ ಸ್ಥಳವಾಗಿ ಬೆಳೆಯಲಿ ಎಂದರು. ಇಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಚಟುವಟಿಕೆಗಳು ರಾಷ್ಟ್ರವ್ಯಾಪಿ ಹರಡಲಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ಜಿ.ರಘುನಾಥ್,ಜಯರಾಂನಾಯಕ್,ಗ್ರಾಪಂ ಉಪಾಧ್ಯಕ್ಷ ಗಣೇಶ್ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ