ಪಂಚಾಯ್ತಿಯಲ್ಲಿ ಆಪರೇಟರ್ ಹುದ್ದೆ ನೀಡದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ ---------------------------------------- ಕಳೆದ ಮೂರು ವರ್ಷಗಳಿಂದಲೂ ಉದ್ಯೋಗಕ್ಕಾಗಿ ಅಲೆದ ಲಕ್ಷ್ಮೀಯ ಗೋಳಾಟ -------------------------------------- ಜಿಲ್ಲಾ ಉಸ್ತುವಾರಿ ಸಚಿವರ ಆದೇಶಕ್ಕೂ ಕಿಮ್ಮತ್ತು ನೀಡದ ಅಧಿಕಾರಿಗಳು ---------------------------------------- ಹುಳಿಯಾರು: ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಕಳೆದ ಮೂರು ವರ್ಷದ ಹಿಂದೆ ನಾನು ನಿರ್ವಹಿಸಿದ್ದು ನನ್ನನ್ನು ವಿನಾಕಾರಣ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು ಆ ಹುದ್ದೆಯನ್ನು ನನಗೆ ನೀಡಲೇಬೇಕು.ಇಲ್ಲದಿದ್ದಲ್ಲಿ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಲಕ್ಷ್ಮೀ ಎಂಬಾಕೆ ತನ್ನ ಅಳಲು ತೋಡಿಕೊಂಡು ಎಲ್ಲರೆದುರಿಗೂ ಕಣ್ಣೀರಿಟ್ಟ ಪ್ರಸಂಗ ಇಂದಿನ ಗ್ರಾಮಸಭೆಯಲ್ಲಿ ಜರುಗಿತು. ಹುಳಿಯಾರು ಪಂಚಾಯ್ತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಉದ್ಯೊಗಕ್ಕಾಗಿ ಒತ್ತಾಯಿಸಿದ ಲಕ್ಷ್ಮೀ. ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಬಂದಿರುವ ಒಂದು ಕೋಟಿರೂ ಹಣದ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಕರೆಯಲಾಗಿದ್ದ ಗ್ರಾಮಸಭೆಯಲ್ಲಿ ತನ್ನ ತಾಯಿಯೊಂದಿಗೆ ಆಗಮಿಸಿದ್ದ ಈಕೆ ಜಿಲ್ಲಾ ಪಂಚಾಯಿತಿ ಸದಸ್ಯ,ತಾಲೂಕು ಪಂಚಾಯಿತಿ ಸದಸ್...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070