ಹುಳಿಯಾರು:ಭಾರತದ ಉಕ್ಕಿನ ಮನುಷ್ಯ ಮತ್ತು ರಾಷ್ಟ್ರದ ಅಖಂಡತೆಯ ಪ್ರವರ್ತಕ ಸರದಾರ್ ವಲ್ಲಭಭಾಯಿ ಪಟೇಲ್ ಅವರ ನೂರಾ ನಲವತ್ತೆರಡನೇ ಜನ್ಮ ದಿನೋತ್ಸವದ ಪ್ರಯುಕ್ತ ಹುಳಿಯಾರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏಕತೆಗಾಗಿ ಓಟವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಕಾಲೇಜು ಆವರಣದಿಂದ ಪ್ರಾರಂಭವಾದ ಏಕತಾ ಓಟ ಹುಳಿಯಾರು ಪಟ್ಟಣ ತಲುಪಿ ರಾಮಾಹಾಲ್ ಮುಂಭಾಗದಿಂದ ಬಸ್ ನಿಲ್ದಾಣ ತಲುಪಿ ಮುಕ್ತಾಯಗೊಂಡಿತು.ಸುಮಾರು ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓಟದಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನಾ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಜನತಾ ಪಕ್ಷದ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಬಸವರಾಜು ಏಕತೆಗಾಗಿ ಓಟದಲ್ಲಿ ಪಾಲ್ಗೊಳ್ಳುವ ಮೂಲಕ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸೋಣ ಮತ್ತು ದೇಶಾದ್ಯಂತ ಸಾಮರಸ್ಯ ಭಾತೃತ್ವ ಭಾವನೆಯನ್ನು ಪಸರಿಸೋಣ ಎಂದು ಕರೆನೀಡಿದರು.ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲಾ ಜನರನ್ನು, ಹಳ್ಳಿ ಹಳ್ಳಿಗಳನ್ನು, ದೇಶವನ್ನು ಒಗ್ಗೂಡಿಸುವುದೇ ಈ ಓಟದ ಉದ್ದೇಶವಾಗಿದ್ದು ಈ ಓಟವು ಎಲ್ಲಾ ಭಾರತೀಯರ ಕನಸನ್ನು, ಬಯಕೆಯನ್ನು ಈಡೇರಿಸುವ ಪ್ರಯತ್ನವಾಗಿದೆ ಎಂದರು.
ಹುಳಿಯಾರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಏಕತೆಗಾಗಿ ಓಟದ ಸಮಾರಂಭದಲ್ಲಿ ಡಾ.ಬಸವರಾಜು ಮಾತನಾಡಿದರು. |
ಚೀನಿ ಉತ್ಪನ್ನ ಮಾರಾಟದಿಂದ ಭಾರತ ದೇಶದ ಮಾರುಕಟ್ಟೆಗೆ ಹೊಡೆತ ಬಿದ್ದಿದೆ.ದೇಶ ಆರ್ಥಿಕವಾಗಿ ಮುಂಬರಬೇಕಾದರೆ ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವದೇಶಿ ವಸ್ತುಗಳನ್ನೇ ಉಪಯೋಗಿಸಿ ಎಂದ ಅವರು ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸೋಣ.ಆ ಮೂಲಕ ಭಾರತದ ಆರ್ಥಿಕತೆಗೆ ಕಾಣಿಕೆ ನೀಡೋಣ ಎಂದರು.ವಿವಿಧ ದೇಶಗಳ ನಡುವೆ ನಡೆದಿರುವ ಮುಕ್ತ ನೀತಿಯ ಒಪ್ಪಂದದ ಪ್ರಕಾರ ಚೀನಿ ಉತ್ಪನ್ನಗಳನ್ನು ಸರ್ಕಾರ ನಿಷೇದಿಸುವುದು ಸಾಧ್ಯವಿಲ್ಲ. ಆದರೆ ಈ ಕೆಲಸವನ್ನು ನಾವು ಮಾಡಲು ಸಾಧ್ಯವಿದ್ದು ಚೀನಾ ಉತ್ಪನ್ನಗಳ ಬಳಕೆ ಬಹಿಷ್ಕರಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರಸನ್ನಕುಮಾರ್ ರಾಷ್ಟ್ರಕ್ಕಾಗಿ ಬದುಕಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸಿಕೊಳ್ಳುವ ಮೂಲಕ ಅವರ ಹಾದಿಯಲ್ಲಿ ನಡೆಯುವುದರ ಮೂಲಕ ಅವರ ಭವ್ಯ ಭಾರತದ ಕನಸನ್ನು ಈಡೇರಿಸೋಣ ಎಂದರು.
ಈ ಸಮಾರಂಭದಲ್ಲಿ ಎಬಿವಿಪಿ ಸಂಚಾಲಕ ನರೇಂದ್ರ ಬಾಬು , ಉಪನ್ಯಾಸಕರಾದ ಶಿವರುದ್ರಯ್ಯ ,ಶಶಿಭೂಷಣ್,ನಟರಾಜು,ಆರ್ ಎಸ್ ಎಸ್ ಪ್ರಕಾಶ್ ಚೌದ್ರಿ,ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಪ್ರಸನ್ನ ಕುಮಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ