ಹುಳಿಯಾರು: ಹಳ್ಳಿ ಪ್ರತಿಭೆ ರೇಖಾ ಬಸವರಾಜುರವರಿಗೆ ಡಾಕ್ಟರೇಟ್ --------------------------------- ಹುಳಿಯಾರು ಸಮೀಪದ ಕೆಂಕೆರೆಯ ಬರದಲೆಪಾಳ್ಯದ ಬಿ.ರೇಖಾ ದೂರಸಂಪರ್ಕ ಸಾಧನದ ಕುರಿತು ನಡೆಸಿದ ಸುದೀರ್ಘ ಸಂಶೋಧನೆಗೆ ಡಾಕ್ಟರೇಟ್ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಜರುಗಿದ ಜೈನ್ ವಿಶ್ವವಿದ್ಯಾಲಯದ ೮ನೇ ಘಟಿಕೋತ್ಸವದಲ್ಲಿ ಶ್ರೀಮತಿ ರೇಖಾರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಸೆಕ್ಯೂರ್ ಸ್ಕೇಲೆಬಲ್ ಅಂಡ್ ಇಂಟರ್‌ಒಪರೇಬಲ್ ಇಂಟರ್-ಡೊಮೇನ್ ರೌಟಿಂಗ್ ಇನ್ ಹೆಟೆರೋಜಿನಸ್ ಮ್ಯಾನೆಟ್ಸ್ ಎಂಬ ಪ್ರೌಢ ಸಂಶೋಧನಾ ಪ್ರಬಂಧವನ್ನು ಡಾ. ಅಶೋಕ್‌ರವರ ಮಾರ್ಗದರ್ಶನದಲ್ಲಿ ಡಾ. ರೇಖಾ ಮಂಡಿಸಿದ್ದರು. ಇವರು ಪ್ರಸ್ತುತ ಬೆಂಗಳೂರಿನ ಎಸ್.ಜೆ.ಬಿ.ಐ.ಟಿ. ತಂತ್ರಜ್ಞಾನ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸಹ-ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರತಿಭೆ ಡಾ. ರೇಖಾ.ಬಿ ಬರದಲೇಪಾಳ್ಯದ ಬಸವರಾಜು ಮತ್ತು ಚನ್ನಬಸಮ್ಮ ದಂಪತಿಗಳ ಹಿರಿಯ ಮಗಳಾಗಿದ್ದು ಹುಟ್ಟೂರು ಕೆಂಕೆರೆಯಲ್ಲಿಯೇ ಕನ್ನಡ ಮಾಧ್ಯಮದಲ್ಲಿ ೫ ನೇ ತರಗತಿಯವರೆಗೆ ಓದಿದ್ದಾರೆ. ನಂತರ ತುಮಕೂರಿನ ನವೋದಯ ವಿದ್ಯಾಲಯದಲ್ಲಿ, ದಾವಣಗೆರೆಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್, ಬೆಂಗಳೂರಿನ ಬಿಎಮ್‌ಎಸ್‌ನಲ್ಲಿ ಎಮ್.ಟೆಕ್. ಮುಗಿಸಿದ್ದಾರೆ. ಇದೀಗ ಜೈನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಪ್ರತಿಭಾವಂತರ ಈ ಕುಟುಂಬದಲ್ಲ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070