ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಸಪ್ತಾಹ - ೨೦೨೦

  ಹುಳಿಯಾರು :ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ೨ರ ಅಡಿಯಲ್ಲಿ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರಿಗೆ "ಜಾಗೃತಿ ಸಪ್ತಾಹ - ೨೦೨೦ : ಪ್ರತಿಜ್ಞಾ ವಿಧಿ"ಯನ್ನು ಬೋಧಿಸಲಾಯಿತು. ಭ್ರಷ್ಟಾಚಾರ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೆ ಬಹುಮುಖ್ಯ ಅಡೆತಡೆ ಎಂದು ನಂಬಿರುತ್ತೇನೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ ನಾಗರಿಕರು ಮತ್ತು ಖಾಸಗಿ ವಲಯದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ನಂಬಿರುತ್ತೇನೆ. ಆದ್ದರಿಂದ ನಾನು ಈ ಕೆಳಕಂಡಂತೆ ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.ನಾನು ಲಂಚವನ್ನು ಕೇಳುವುದಿಲ್ಲ, ಪಡೆಯುವುದೂ ಇಲ್ಲ, ಕೊಡುವುದೂ ಇಲ್ಲ. ಎಲ್ಲ ಕೆಲಸಗಳನ್ನು ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುತ್ತೇನೆ. ಯಾವುದೇ ಭ್ರಷ್ಟಾಚಾರದ ಪ್ರಕರಣಗಳನ್ನು ಸಂಬಂಧಪಟ್ಟ ಸಂಸ್ಥೆಗೆ ವರದಿ ಮಾಡುತ್ತೇನೆ" - ಎಂಬ ಪ್ರತಿಜ್ಞೆಯನ್ನು ಎಲ್ಲರೂ ಸ್ವೀಕರಿಸಿದರು.   ಎಸ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ.ಎಂ.ಜೆ.ಮೋಹನ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.   ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆಯವರು ಗ್ರಾಮ ಪಂಚಾಯತಿ ರಾಜಕಾರಣದ ಬಗ್ಗೆ ಮಾತನಾಡುತ್ತಾ ಭ್ರಷ್ಟಾಚಾರ ಕೆಳಹಂತದಿಂದಲೇ ನಿರ್ಮೂಲನೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.   ಈ

ಹುಳಿಯಾರು:ಬೀದಿನಾಯಿಗಳ ಹಾವಳಿ ವಿಪರೀತ

ಹುಳಿಯಾರು:ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ.ಮುಂಜಾನೆ ಹಾಗೂ ರಾತ್ರಿ ಸಮಯದಲ್ಲಂತೂ ನಾಯಿಗಳ ಕಾಟ ವಿಪರೀತವಾಗಿದ್ದು ಬೈಕ್ ಸವಾರರು ಹಾಗೂ ರಸ್ತೆ ಬದಿ ಜನ ತಿರುಗಾಡಲು ಹೆದರುವ ಪರಿಸ್ಥಿತಿ ಉಂಟಾಗಿದೆ. ಜನಸಾಮಾನ್ಯರು ಒಬ್ಬೊಬ್ಬರೇ ಓಡಾಡುವುದು ಕಷ್ಟವಾಗಿದೆ. ಪ್ರತಿ ವಾರ್ಡ್ ಗಳಲ್ಲೂ ಸಹ ನಾಯಿಗಳ ದಂಡು ಹೆಚ್ಚಾಗಿದೆ.ಬಸ್ ನಿಲ್ದಾಣದಿಂದ ಪೆಟ್ರೋಲ್ ಬಂಕ್ ವರೆಗೂ ಮಾಂಸದ ಅಂಗಡಿಗಳು, ಕೋಳಿ ಅಂಗಡಿಗಳು ಹೆಚ್ಚಿದ್ದು ಇಲ್ಲಿಯ ತ್ಯಾಜ್ಯದಿಂದಾಗಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಅಲ್ಲಿಯೇ ಸುತ್ತಾಡುವ ಇವುಗಳು ಪಕ್ಕನೇ ಅಡ್ಡಬರುವುದರಿಂದ ಹಾಗೂ ಬೈಕ್ ಗಳ ಹಿಂದೆ ಓಡಿಸಿಕೊಂಡು ಬರುವುದರಿಂದ ವಾಹನ ಸವಾರರು ಬೀಳುವ ಸಂಭವ ಹೆಚ್ಚಿದೆ.   ಹುಳಿಯಾರು ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಇಲ್ಲದಿರುವುದು ಹಾಗೂ ಕಸದ ತೊಟ್ಟಿಗಳು ಇಲ್ಲದಿರುವುದರಿಂದ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡುವ ಕಾರಣದಿಂದ ಇವುಗಳನ್ನು ಕೆದಕಲು ಬರುವ ನಾಯಿಗಳಿಂದ ಹಾವಳಿ ಹೆಚ್ಚಾಗಿದೆ.   ಪಟ್ಟಣ ಪಂಚಾಯಿತಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.ಸಂತಾನಹರಣ ಚಿಕಿತ್ಸೆ ಮಾಡುವುದರಿಂದ ಬೀದಿನಾಯಿಗಳ ಹಾವಳಿ ನಿಯಂತ್ರಿಸಬಹುದಾಗಿದೆ.ಅದೇಕೋ ಈ ಕಾರ್ಯಕ್ಕೆ ಪಟ್ಟಣ ಪಂಚಾಯಿತಿಯವರು ಮುಂದಾಗದೆ ನಿರ್ಲಕ್ಷ್ಯವಹಿಸಿದ್ದಾರೆ.ಜನ ನಾಯಿಗಳ ಕಡಿತಕೊಳಗಾಗುವ ಮುಂಚೆಯೇ ಪಟ್ಟಣ ಪಂಚಾಯಿತಿಯವರು ಇತ್ತ ಗಮನಹರಿಸಬೇಕಿದೆ. ಇದಕ್ಕೆ ಕಡಿವಾಣ ಹಾಕಲು ಪಂಚಾಯಿತಿ ಮುಖ್ಯಾಧ

ಹುಳಿಯಾರು-ಕೆಂಕೆರೆ ಕರ್ನಾಟಕ ಪಬ್ಲಿಕ್ ಶಾಲೆಗೆ(KPS) ದಾಖಲಾತಿ ಆರಂಭ

ಹುಳಿಯಾರು-ಕೆಂಕೆರೆ ಕೆಪಿಎಸ್ ಶಾಲೆಯಲ್ಲಿ *LKG ಯಿಂದ 12ನೇ ತರಗತಿಯವರೆಗೆ 2020-21ನೇ ಸಾಲಿಗೆ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು* ಪೋಷಕರು ತಮ್ಮ ಮಕ್ಕಳನ್ನು ಅಗತ್ಯ ದಾಖಲಾತಿಗಳೊಂದಿಗೆ ಶಾಲೆಗೆ ದಾಖಲಿಸಲು ಈ ಮೂಲಕ ಕೋರಲಾಗಿದೆ. LKG ತರಗತಿಗೆ ವಿಶೇಷ ದಾಖಲಾತಿ ಪ್ರಾರಂಭವಾಗಿದ್ದು ಕೆಲವೇ ಸೀಟುಗಳು ಬಾಕಿಯಿರುವುದರಿಂದ ತಮ್ಮ ಮಕ್ಕಳನ್ನು ಆದಷ್ಟು ಶೀಘ್ರವಾಗಿ ದಾಖಲಿಸಲು *ಪ್ರಾಂಶುಪಾಲರಾದ ವಿ.ಹೆಚ್.ರೇವಣ್ಣ ಕೋರಿದ್ದಾರೆ*    *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ*  9353592787 9741260402 9480407592

ಹುಳಿಯಾರಿನಲ್ಲಿ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

  ಹುಳಿಯಾರು: ಕೇಂದ್ರ ಸರ್ಕಾರ ವಿದ್ಯುತ್ ವಲಯವನ್ನು ಖಾಸಗಿಕರಣ ಮಾಡುತ್ತಿರುವುದನ್ನು ವಿರೋಧಿಸಿ ಸೋಮವಾರ ಹುಳಿಯಾರು ಪಟ್ಟಣದ ಬೆಸ್ಕಾಂ ನೌಕರರು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಪಟ್ಟಣದ ಬೆಸ್ಕಾಂ ಕಚೇರಿಯ ಮುಂದೆ ಸರ್ಕಾರದ ಖಾಸಗೀಕರಣದ ನೀತಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 2020ರ ವಿದ್ಯುತ್‌ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದು,ಇದರಿಂದ ಸಾಕಷ್ಟು ಸಮಸ್ಯೆಯಾಗಲಿದ್ದು ರೈತರು ಮತ್ತು ಬಡವರ ಮೇಲೆ ದುಷ್ಪರಿಣಾಮ ಬೀರಲಿದೆ.ಅಲ್ಲದೇ ಖಾಸಗೀಕರಣದ ನೀತಿ ಕಾರ್ಮಿಕರಿಗ ಮರಣ ಶಾಸನವಾಗಲಿದೆ.ವಿದ್ಯುತ್‌ ಇಲಾಖೆ ಲಾಭದಲ್ಲಿ ನಡೆಯುತ್ತಿದ್ದರೂ ಸಹ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವ ಕ್ರಮ ಸರಿಯಲ್ಲ.ಸರ್ಕಾರ ಕೂಡಲೇ ಈ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಲಾಯಿತು.   ಸೆಕ್ಷನ್ ಆಫೀಸರ್ ಉಮೇಶ್ ನಾಯಕ್,ಮೂರ್ತಪ್ಪ ಸೇರಿದಂತೆ 50ಕ್ಕೂ ಹೆಚ್ಚು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆ ನಂತರ ಕಪ್ಪುಪಟ್ಟಿ ಧರಿಸಿ ಕೆಲಸ ಮುಂದುವರಿಸಿದರು.