ಹುಳಿಯಾರು:ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ.ಮುಂಜಾನೆ ಹಾಗೂ ರಾತ್ರಿ ಸಮಯದಲ್ಲಂತೂ ನಾಯಿಗಳ ಕಾಟ ವಿಪರೀತವಾಗಿದ್ದು ಬೈಕ್ ಸವಾರರು ಹಾಗೂ ರಸ್ತೆ ಬದಿ ಜನ ತಿರುಗಾಡಲು ಹೆದರುವ ಪರಿಸ್ಥಿತಿ ಉಂಟಾಗಿದೆ. ಜನಸಾಮಾನ್ಯರು ಒಬ್ಬೊಬ್ಬರೇ ಓಡಾಡುವುದು ಕಷ್ಟವಾಗಿದೆ.
ಪ್ರತಿ ವಾರ್ಡ್ ಗಳಲ್ಲೂ ಸಹ ನಾಯಿಗಳ ದಂಡು ಹೆಚ್ಚಾಗಿದೆ.ಬಸ್ ನಿಲ್ದಾಣದಿಂದ ಪೆಟ್ರೋಲ್ ಬಂಕ್ ವರೆಗೂ ಮಾಂಸದ ಅಂಗಡಿಗಳು, ಕೋಳಿ ಅಂಗಡಿಗಳು ಹೆಚ್ಚಿದ್ದು ಇಲ್ಲಿಯ ತ್ಯಾಜ್ಯದಿಂದಾಗಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಅಲ್ಲಿಯೇ ಸುತ್ತಾಡುವ ಇವುಗಳು ಪಕ್ಕನೇ ಅಡ್ಡಬರುವುದರಿಂದ ಹಾಗೂ ಬೈಕ್ ಗಳ ಹಿಂದೆ ಓಡಿಸಿಕೊಂಡು ಬರುವುದರಿಂದ ವಾಹನ ಸವಾರರು ಬೀಳುವ ಸಂಭವ ಹೆಚ್ಚಿದೆ.
ಹುಳಿಯಾರು ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಇಲ್ಲದಿರುವುದು ಹಾಗೂ ಕಸದ ತೊಟ್ಟಿಗಳು ಇಲ್ಲದಿರುವುದರಿಂದ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡುವ ಕಾರಣದಿಂದ ಇವುಗಳನ್ನು ಕೆದಕಲು ಬರುವ ನಾಯಿಗಳಿಂದ ಹಾವಳಿ ಹೆಚ್ಚಾಗಿದೆ.
ಪಟ್ಟಣ ಪಂಚಾಯಿತಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.ಸಂತಾನಹರಣ ಚಿಕಿತ್ಸೆ ಮಾಡುವುದರಿಂದ ಬೀದಿನಾಯಿಗಳ ಹಾವಳಿ ನಿಯಂತ್ರಿಸಬಹುದಾಗಿದೆ.ಅದೇಕೋ ಈ ಕಾರ್ಯಕ್ಕೆ ಪಟ್ಟಣ ಪಂಚಾಯಿತಿಯವರು ಮುಂದಾಗದೆ ನಿರ್ಲಕ್ಷ್ಯವಹಿಸಿದ್ದಾರೆ.ಜನ ನಾಯಿಗಳ ಕಡಿತಕೊಳಗಾಗುವ ಮುಂಚೆಯೇ ಪಟ್ಟಣ ಪಂಚಾಯಿತಿಯವರು ಇತ್ತ ಗಮನಹರಿಸಬೇಕಿದೆ. ಇದಕ್ಕೆ ಕಡಿವಾಣ ಹಾಕಲು ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಮುಂದಾಗುತ್ತಾರೆಯೇ ಕಾದುನೋಡಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ