ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಕ್ಸಿನೇಷನ್ ಆಂದೋಲನ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕ-1 ಮತ್ತು ಘಟಕ-2 ಹಾಗೂ ಯುವ ರೆಡ್ ಕ್ರಾಸ್ ಹಾಗೂ ರೆಡ್ ರಿಬ್ಬನ್ ಘಟಕದ ವತಿಯಿಂದ ಕೋವಿಡ್-19 ವ್ಯಾಕ್ಸಿನೇಷನ್ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ   ಎಲ್ಲ  ವಿದ್ಯಾರ್ಥಿಗಳು ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನೇಷನ್ ಪಡೆಯಬೇಕು. ಕಾಲೇಜಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಮತ್ತು ಸುರಕ್ಷಾ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ರೇಣುಕಾಪ್ರಸಾದ್,ಜ್ಯೋತಿ ಕಲಾ ಮತ್ತು ಆಶಾ ಕಾರ್ಯಕರ್ತೆಯಾದ ಗಾಯಿತ್ರಮ್ಮ ಅವರು ವ್ಯಾಕ್ಸಿನೇಷನ್‌ ನಡೆಸಿಕೊಟ್ಟರು. ಒಟ್ಟು 69 ವಿದ್ಯಾರ್ಥಿಗಳು ವ್ಯಾಕ್ಸಿನೇಷನ್‌ ಪಡೆದರು. ಈ ಸಂದರ್ಭದಲ್ಲಿ ಕೋವಿಡ್ ನೋಡಲ್ ಅಧಿಕಾರಿಗಳಾದ ಪ್ರೊ.ಆರ್.ಶಿವಯ್ಯ,ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ.ಮೋಹನ್ ಕುಮಾರ್ ಎಂ.ಜೆ ಮತ್ತು ಪ್ರೊ. ಖಲೀಲ್ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಹಾಜರಿದ್ದರು.

ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ಭಾರತ ಸಂವಿಧಾನ ದಿನಾಚಾರಣೆ

ಹುಳಿಯಾರು ವಿದ್ಯಾವಾರಿಧಿ ಶಾಲೆಯ ಸುವರ್ಣಮುಖಿ ಕ್ಯಾಂಪಸ್‌ನಲ್ಲಿ  ಹಾಗೂ ಚಿಕ್ಕನಾಯಕನಹಳ್ಳಿಯ ವಿದ್ಯಾವಾರಿಧಿ ಶಾಲೆಯಲ್ಲಿ ಭಾರತ ಸಂವಿಧಾನ ದಿನಾಚಾರಣೆ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಕವಿತಾ ಕಿರಣ್ ಕುಮಾರ್ ಮಾತನಾಡಿ ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಜತೆಗೆ ಅವರ ಸಾಧನೆಯ ಜಾಗೃತಿ ಮೂಡಿಸುವುದು ಮತ್ತು ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು ಈ ದಿನದ ವಿಶೇಷತೆ ಎಂದರು. ಸಂಸ್ಥೆಯ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಜೈವಿಕ ಇಂಧನ ನಿಗಮ ಮಂಡಳಿ ಅಧ್ಯಕ್ಷರೂ ಆಗಿರುವ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ  ಭಾರತ ಸಂವಿಧಾನ ಜನರನ್ನು ಸಶಕ್ತಗೊಳಿಸುವುದರ ಜತೆಗೆ ಸರ್ವರಿಗೂ ಸಮಾನತೆ ಒದಗಿಸಿದೆ.ಮೂಲಭೂತ ಹಕ್ಕುಗಳನ್ನು ನೀಡಿದೆ.ಕರ್ತವ್ಯಗಳನ್ನು ನೀಡಿದೆ. ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ.ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯರಾದ ದಿಲೀಪ್ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಸತೀಶ್ ನಾಯ್ಕ್ ಮತ್ತು ಇತರ ಶಿಕ್ಷಕ ವೃಂದದವರು ಹಾಜರಿದ್ದರು.

ಹುಳಿಯಾರಿನ ಶ್ರೀ ಅಮರನಾರಾಯಣ ಟ್ರಸ್ಟ್‌ವತಿಯಿಂದ ಅಭಿನಂದನಾ ಸಮಾರಂಭ

ಹುಳಿಯಾರಿನ ಶ್ರೀ ಅಮರನಾರಾಯಣ ಟ್ರಸ್ಟ್ ಹಾಗೂ ಬಲಿಜ ಜನಾಂಗದ ವತಿಯಿಂದ ಹುಳಿಯಾರಿನ ಯೋಗಿನಾರಾಯಣ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಎಂ.ಕಿರಣ್ ಕುಮಾರ್ ಹಾಗೂ ಕೌನ್ಸಿಲರ್‌ಗಳಾಗಿ ಆಯ್ಕೆಯಾಗಿರುವ ಹೆಚ್.ಎನ್.ಹೇಮಂತ್, ಶ್ರೀಮತಿ ಪ್ರೀತಿ ರಾಘವೇಂದ್ರ, ಶ್ರೀಮತಿ ಸಂಧ್ಯಾ ಕಿರಣ್ ಕುಮಾರ್ ಹಾಗೂ ತಿಮ್ಲಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ತಿಮ್ಮಯ್ಯನವರನ್ನು ಸನ್ಮಾನಿಸಲಾಯಿತು

ಚಿಕ್ಕನಾಯಕನಹಳ್ಳಿಯ ಹಾಲುಗೊಣದಲ್ಲಿ ಶ್ರವಣ ನ್ಯೂನ್ಯತೆಯ ಬಗ್ಗೆ ಜಾಗೃತಿ ಶಿಬಿರ/ದಿನಸಿ ಕಿಟ್ ವಿತರಣೆ

ಚಿಕ್ಕನಾಯಕನಹಳ್ಳಿ ತಾಲೂಕಿನ ಹಾಲುಗೊಣದ ಶ್ರೀ ಸಿದ್ದರಾಮೇಶ್ವರ ಶ್ರವಣದೋಷ ಮಕ್ಕಳ ವಸತಿ ಶಾಲೆ ಹಾಗೂ ಬೆಂಗಳೂರಿನ ಧೃವತಾರೆ ಚಾರಿಟಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಿದ್ದರಾಮೇಶ್ವರ ವಸತಿ ಶಾಲೆಯಲ್ಲಿ ಶ್ರವಣ ನ್ಯೂನ್ಯತೆಯ ಬಗ್ಗೆ ಜಾಗೃತಿ ಶಿಬಿರ- ಪೋಷಕರ ಸಭೆ ಹಾಗೂ ಅಗತ್ಯ ದಿನಸಿ ಕಿಟ್‌ಗಳ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು . ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರಯ್ಯನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಣೆಬೆನ್ನೂರು ಸೇವಾ ಅಂಧರ ಸಂಸ್ಥೆಯ ಶಿವಕುಮಾರ್, ನಿರ್ದೇಶಕರುಗಳಾದ ಶ್ರೀಮತಿ ಚಂದ್ರಮ್ಮ, ಬಸವರಾಜು ಅದಲಗೆರೆ, ಧ್ರುವತಾರೆ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷರಾದ ಸೋಮಶೇಖರ್, ಉಪಾಧ್ಯಕ್ಷರಾದ ಚಿಕ್ಕನಾಯಕನಹಳ್ಳಿಯ ಕೋದಂಡರಾಮಯ್ಯ ಕಾರ್ಯದರ್ಶಿಯಾದ ಬೆಂಗಳೂರಿನ ಬೆಟ್ಟೇಗೌಡರು, ನಿರ್ದೇಶಕರುಗಳಾದ ಹರೀಶ್ ರಾವ್ ,ಬಸವರಾಜು, ವಿಶೇಷ ಅತಿಥಿಗಳಾಗಿ ತಿಮ್ಮನಹಳ್ಳಿ ಸುಬ್ರಹ್ಮಣ್ಯ,ಚಿಕ್ಕನಾಯಕನಹಳ್ಳಿ ಪುರಸಭೆ ಕೌನ್ಸಿಲರ್ ಶ್ರೀಮತಿ ಲಕ್ಷ್ಮಿ ಪಾಂಡು, ಶ್ರೀಮತಿ ನಾಗರತ್ನ ಜಯರಾಮ್, ವಿಶಾಲ ನಾಯಕ್, ಸಿದ್ದರಾಮೇಶ್ವರ ಅಂಧರ ಸಂಸ್ಥೆಯ ಸಿಬ್ಬಂದಿಗಳಾದ ನಾಗೇಶ್ ,ಸಂಜುಶ್ರೀ,ಪ್ರೇರಣಾಶ್ರೀ ಸೇರಿದಂತೆ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೂ ಆಹಾರದ ಕಿಟ್ ವಿತರಣೆ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಲಾಯಿತು.ಧೃವತಾರೆ ಚಾರಿಟ

ಹುಳಿಯಾರು:ಮಳೆಗೆ ಕುಸಿದ ಗೋಡೆ- ಪಕ್ಕದ ಮನೆ ಮೇಲ್ಛಾವಣಿ ಹಾನಿ

ಶುಕ್ರವಾರ ಸಂಜೆ ಬಂದ ಮಳೆಗೆ ಹುಳಿಯಾರಿನ ಗಾಂಧಿ ಪೇಟೆಯ ಸೈಯದ್ ಅಹಮದ್ ಅವರ ಶಿಥಿಲಗೊಂಡಿದ್ದ  ಗೋಡೌನ್ ಗೋಡೆ ಕುಸಿದು ಬಿದ್ದಿದ್ದು ಪರಿಣಾಮ ಪಕ್ಕದ ಮನೆಯ ಚಿರುಮುರಿ ಶ್ರೀನಿವಾಸ್ ಅವರ ಅಡುಗೆಮನೆ ಹಾಗೂ ಶೌಚಾಲಯದ ಮೇಲ್ಚಾವಣಿಗೆ ಹಾನಿಯಾಗಿದೆ. ಅಡುಗೆಮನೆಯ ಮೇಲ್ಚಾವಣಿ ತುಂಡಾಗಿ ಇಟ್ಟಿಗೆ ಹಾಗೂ ಗೋಡೆಯ ತುಂಡುಗಳು ಅಡುಗೆಮನೆ ತುಂಬೆಲ್ಲ ಬಿದ್ದಿದೆ. ಗೋಡೆ ಕುಸಿದು ಬಿದ್ದ ಸಮಯದಲ್ಲಿ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮಿ ಅವರು ಅಡುಗೆಮನೆಯಲ್ಲೇ ಅಡುಗೆ ತಯಾರಿಯಲ್ಲಿದ್ದು ಕ್ಷಣಾರ್ಧದಲ್ಲಿ ಅಪಾಯದಿಂದ ಪಾರಾಗಿದ್ದಾರೆ.  ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಪಟ್ಟಣ ಪಂಚಾಯಿತಿ ಸದಸ್ಯೆ ಶೃತಿ ಮೊದಲಾದವರು ಭೇಟಿ ನೀಡಿದ್ದರು.

ಹುಳಿಯಾರು: ಹಾಲ್ ಮಾರ್ಕ್ ಕಡ್ಡಾಯ ವಿರೋಧಿಸಿ ಇಂದು ಎಲ್ಲಾ ಬಂಗಾರದ ಅಂಗಡಿಗಳು ಬಂದ್

ಹುಳಿಯಾರು :ಕೇಂದ್ರ ಸರ್ಕಾರವು ಒಡವೆಗಳ ಮೇಲೆ ಹಾಲ್ ಮಾರ್ಕ್ ಮತ್ತು ಎಚ್‌ಯುಐಡಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಹುಳಿಯಾರು ಪಟ್ಟಣದ ಚಿನ್ನಾಭರಣಗಳ ಅಂಗಡಿ ಮಾಲೀಕರುಗಳು ಇಂದು ತಮ್ಮ ಚಿನ್ನ-ಬೆಳ್ಳಿ ಅಂಗಡಿಗಳನ್ನು ಇಡೀ ದಿನ ಬಂದ್ ಮಾಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟಿಸಿದರು. ಈ ಬಗ್ಗೆ ಮಾತನಾಡಿದ ಹುಳಿಯಾರು ಚಿನ್ನ-ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಹೆಚ್.ಆರ್.ಶಂಕರ್ ಕೇಂದ್ರ ಸರ್ಕಾರ ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕ್ ಮತ್ತು ಎಚ್‌ಯುಐಡಿಯನ್ನು ಕಡ್ಡಾಯಗೊಳಿಸಿರುವುದರಿಂದ ಪ್ರತಿಯೊಬ್ಬ ಚಿನ್ನಬೆಳ್ಳಿ ವರ್ತಕರಿಗೆ ತೊಂದರೆಯಾಗಲಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಾಲ್ಮಾರ್ಕ್ ಯುನಿಕ್ ಐಡಿಯಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ತಾಂತ್ರಿಕ ಸಮಸ್ಯೆಗಳಿರುವುದರಿಂದ ಕೇಂದ್ರ ಸರ್ಕಾರ ತನ್ನ ಈ ನಿರ್ಧಾರವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಜಿಲ್ಲಾ ಸಂಘಟನೆಯ ಬಂದ್ ಗೆ ಬೆಂಬಲಿಸಿ ಹುಳಿಯಾರು ಪಟ್ಟಣದಲ್ಲಿರುವ ಎಲ್ಲಾ 42 ಆಭರಣ ಮಳಿಗೆಗಳನ್ನು ಇಂದು ಬಂದ್ ಮಾಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟಿಸಲಾಗಿದೆ . ಇಂದು ದೇಶಾದ್ಯಂತ ಸಾಧಾರಣ ಮಳಿಗೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟಿಸಲಾಗಿದ್ದು ಸರ್ಕಾರ ತನ್ನ ನಿಯಮವನ್ನು ಜಾರಿ ಮಾಡದಂತೆ ಆಗ್ರಹಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಿವಿಧ ಉಪ ಸ್ಥಾವರದಿಂದ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಸರಬರಾಜಾಗುವ ಪೂರಕಗಳ ಈ ವಾರದ ವೇಳಾಪಟ್ಟಿ‌....

ಚಿಕ್ಕನಾಯಕನಹಳ್ಳಿ - ಹುಳಿಯಾರು ಸೇರಿದಂತೆ ತಾಲ್ಲೂಕಿನ ವಿವಿಧ ಉಪ ಸ್ಥಾವರದಿಂದ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಸರಬರಾಜಾಗುವ ಪೂರಕಗಳ ಈ ವಾರದ ವೇಳಾಪಟ್ಟಿ‌....

ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಆಧಾರ್ ನೋಂದಣಿ ಕೇಂದ್ರಕ್ಕೆ ಚಾಲನೆ

ಜಿಲ್ಲೆಯ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಹುಳಿಯಾರು ಪಟ್ಟಣದಲ್ಲಿ ಆಧಾರ್ ಗುರುತಿನ ಚೀಟಿಗೆ ಆಗುತ್ತಿದ್ದ ನೂಕುನುಗ್ಗಲಿನ ಸಮಸ್ಯೆ ಬಗ್ಗೆ ಮಾಧ್ಯಮದ ವರದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಯವರು ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಹೆಚ್ಚುವರಿಯಾಗಿ ಆಧಾರ್ ನೋಂದಣಿ ಕೇಂದ್ರ ತೆರೆಯುವುದರ ಮೂಲಕ ಮೂಲಕ ಸಮಸ್ಯೆಗೆ ಪರಿಹಾರಕ್ಕೆ ಮುಂದಾಗಿದ್ದಾರೆ. ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಆಧಾರ್ ನೋಂದಣಿ ಕೇಂದ್ರಕ್ಕೆ ಚಾಲನೆ ನೀಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ ಆಧಾರ್ ಕಾರ್ಡ್‌ನಲ್ಲಿನ ಕೆಲ ಬದಲಾವಣೆ ಹಾಗೂ ತಿದ್ದುಪಡಿಗಳಿಗೆ ಇಲ್ಲಿ ಅವಕಾಶ ಮಾಡಲಾಗಿದ್ದು ಪ್ರತಿನಿತ್ಯ 50 ಆಧಾರ್ ನೋಂದಣಿಗೆ ಟೋಕನ್ ವ್ಯವಸ್ಥೆ ಮೂಲಕ ಅವಕಾಶ ಕಲ್ಪಿಸಲಾಗಿದೆ . ನಿತ್ಯವೂ ಬೆಳಗ್ಗೆ 10 ಗಂಟೆಯಿಂದ 10:30ರವರೆಗೆ 50 ಮಂದಿಗೆ ಪಂಚಾಯಿತಿ ಸಿಬ್ಬಂದಿಯಿಂದ ಟೋಕನ್ ವಿತರಿಸಲಾಗುವುದು. ಪಂಚಾಯಿತಿಯಲ್ಲಿ ಪ್ರಾರಂಭಿಸಲಾಗಿರುವ ಕೇಂದ್ರದಲ್ಲಿ ಆಧಾರ್ ನೋಂದಣಿ, ಮೊಬೈಲ್ ನಂಬರ್ ತಿದ್ದುಪಡಿ, ಹೆಸರುತಿದ್ದುಪಡಿ, ವಿಳಾಸ ತಿದ್ದುಪಡಿ, ಬಯೋಮೆಟ್ರಿಕ್ ಅಪ್ಡೇಟ್ ಮಾಡಲಾಗುವುದಿದ್ದು ಸಾರ್ವಜನಿಕರು ಯಾವುದೇ ನೂಕುನುಗ್ಗಲಿಗೆ ಅವಕಾಶ ನೀಡದೆ ಈ ಕೇಂದ್ರದ ಪ್ರಯೋಜನ ಪಡೆಯುವಂತೆ ಕೋರಿದ್ದಾರೆ.

*ಛೂ ಮಂತ್ರಯ್ಯನ ಕಥೆಗಳು* ಪುಸ್ತಕ ಬಿಡುಗಡೆ ಸಮಾರಂಭ

ಬಹುರೂಪಿ ಪ್ರಕಾಶನ, ಬೆಂಗಳೂರು ಹಾಗೂ ಹುಳಿಯಾರಿನ ಬಿ.ಎಂ.ಎಸ್ ಸರ್ಕಾರಿ ಪದವಿ ಕಾಲೇಜು ಇವರ ಸಹಯೋಗದಲ್ಲಿ ಕವಿ-ಲೇಖಕ-ಚಿಂತಕರಾದ ಕೃಷ್ಣಮೂರ್ತಿ ಬಿಳಿಗೆರೆ ಅವರ *ಛೂ ಮಂತ್ರಯ್ಯನ ಕಥೆಗಳು* ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 11ರ ಬುಧವಾರ ಬೆಳಗ್ಗೆ 11:30ಕ್ಕೆ ಹುಳಿಯಾರಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಕೃಷಿ ಚಿಂತಕರು, ಕವಿಗಳು ಆದ ಶಿವನಂಜಯ್ಯ ಬಾಳೇಕಾಯಿ , ಕನ್ನಡಪ್ರಭ ಪುರವಣಿ ಸಂಪಾದಕರಾದ ಜೋಗಿ , ತುಮಕೂರಿನ ಜಿಲ್ಲಾಪಂಚಾಯಿತಿ ಸಿಇಒ ಡಾ.ಕೆ.ವಿದ್ಯಾಕುಮಾರಿ , ಅನ್ವೇಷಣೆ ಸಂಪಾದಕರಾದ ಆರ್.ಜಿ.ಹಳ್ಳಿ ನಾಗರಾಜ್, ಅಧ್ಯಾಪಕ ಬೆಳಗುಲಿ ಶಶಿಭೂಷಣ್ ,ಬಹುರೂಪಿ ಪ್ರಕಾಶನದ ಜಿ.ಎನ್.ಮೋಹನ್ ಪಾಲ್ಗೊಳ್ಳಲಿದ್ದಾರೆ.

ರಾಜ್ಯದ ಜಿಲ್ಲಾವಾರು ಹಾಗೂ ತುಮಕೂರು ಜಿಲ್ಲೆಯ ತಾಲೂಕುವಾರು ಇಂದಿನ(ದಿನಾಂಕ 09-08-21)ಕೋವಿಡ್ ಅಂಕಿ-ಅಂಶ...

ರಾಜ್ಯದ ಜಿಲ್ಲಾವಾರು ಹಾಗೂ ತುಮಕೂರು ಜಿಲ್ಲೆಯ ತಾಲೂಕುವಾರು ಇಂದಿನ(ದಿನಾಂಕ 09-08-21 )ಕೋವಿಡ್ ಅಂಕಿ-ಅಂಶ ಹೀಗಿದೆ