ಚಿಕ್ಕನಾಯಕನಹಳ್ಳಿ ತಾಲೂಕಿನ ಹಾಲುಗೊಣದ ಶ್ರೀ ಸಿದ್ದರಾಮೇಶ್ವರ ಶ್ರವಣದೋಷ ಮಕ್ಕಳ ವಸತಿ ಶಾಲೆ ಹಾಗೂ ಬೆಂಗಳೂರಿನ ಧೃವತಾರೆ ಚಾರಿಟಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಿದ್ದರಾಮೇಶ್ವರ ವಸತಿ ಶಾಲೆಯಲ್ಲಿ ಶ್ರವಣ ನ್ಯೂನ್ಯತೆಯ ಬಗ್ಗೆ ಜಾಗೃತಿ ಶಿಬಿರ- ಪೋಷಕರ ಸಭೆ ಹಾಗೂ ಅಗತ್ಯ ದಿನಸಿ ಕಿಟ್‌ಗಳ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರಯ್ಯನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಣೆಬೆನ್ನೂರು ಸೇವಾ ಅಂಧರ ಸಂಸ್ಥೆಯ ಶಿವಕುಮಾರ್, ನಿರ್ದೇಶಕರುಗಳಾದ ಶ್ರೀಮತಿ ಚಂದ್ರಮ್ಮ, ಬಸವರಾಜು ಅದಲಗೆರೆ, ಧ್ರುವತಾರೆ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷರಾದ ಸೋಮಶೇಖರ್, ಉಪಾಧ್ಯಕ್ಷರಾದ ಚಿಕ್ಕನಾಯಕನಹಳ್ಳಿಯ ಕೋದಂಡರಾಮಯ್ಯ ಕಾರ್ಯದರ್ಶಿಯಾದ ಬೆಂಗಳೂರಿನ ಬೆಟ್ಟೇಗೌಡರು, ನಿರ್ದೇಶಕರುಗಳಾದ ಹರೀಶ್ ರಾವ್ ,ಬಸವರಾಜು, ವಿಶೇಷ ಅತಿಥಿಗಳಾಗಿ ತಿಮ್ಮನಹಳ್ಳಿ ಸುಬ್ರಹ್ಮಣ್ಯ,ಚಿಕ್ಕನಾಯಕನಹಳ್ಳಿ ಪುರಸಭೆ ಕೌನ್ಸಿಲರ್ ಶ್ರೀಮತಿ ಲಕ್ಷ್ಮಿ ಪಾಂಡು, ಶ್ರೀಮತಿ ನಾಗರತ್ನ ಜಯರಾಮ್, ವಿಶಾಲ ನಾಯಕ್, ಸಿದ್ದರಾಮೇಶ್ವರ ಅಂಧರ ಸಂಸ್ಥೆಯ ಸಿಬ್ಬಂದಿಗಳಾದ ನಾಗೇಶ್ ,ಸಂಜುಶ್ರೀ,ಪ್ರೇರಣಾಶ್ರೀ ಸೇರಿದಂತೆ ಮಕ್ಕಳ ಪೋಷಕರು ಪಾಲ್ಗೊಂಡಿದ್ದರುಇದೇ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೂ ಆಹಾರದ ಕಿಟ್ ವಿತರಣೆ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಲಾಯಿತು.ಧೃವತಾರೆ ಚಾರಿಟಬಲ್ ಟ್ರಸ್ಟಿನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ