ಕೆಂಕೆರೆ ಜಿಲ್ಲಾ ಪಂಚಾಯಿತಿ/ತಾಲೂಕು ಪಂಚಾಯಿತಿ ವ್ಯಾಪ್ತಿಯ ಭಾ.ಜ.ಪ ಕಾರ್ಯಕರ್ತರ ಬೂತ್‌ಕಮಿಟಿ ಸಭೆ ಇಂದು ಹುಳಿಯಾರು ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆ ಆಡಿಟೋರಿಯಂನಲ್ಲಿ ಜರುಗಿತು.
ಮಾಜಿ ಶಾಸಕರು ಹಾಗೂ ಹಾಲಿ ಜೈವಿಕ ಇಂಧನ ಇಲಾಖೆ ಅಧ್ಯಕ್ಷರಾದ ಕೆ.ಎಸ್ ಕಿರಣ್‌ಕುಮಾರ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಭಾ.ಜ.ಪ ಕಾರ್ಯಕರ್ತರಾದ ಶ್ರೀಮತಿ ಬಿ.ಕವಿತಕಿರಣ್‌ಕುಮಾರ್ ರವರು, ಭಾರತಾಂಭೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಭಾರತೀಯ ಜನತಾ ಪಾರ್ಟಿಯ ಚಿಕ್ಕನಾಯಕನಹಳ್ಳಿ ಮಂಡಲದ ಅಧ್ಯಕ್ಷರಾದ ಎಂ.ಎಂ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬುಳ್ಳೇನಹಳ್ಳಿ ಪ್ರಕಾಶ್, ಮೇಲನಹಳ್ಳಿ ಮೋಹನ್ ,ಪ್ರಸನ್ನ ದಸೂಡಿ,ಚಿ.ನಾ.ಹಳ್ಳಿ ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಗುರುವಾಪುರ ದೇವರಾಜು,ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ರಮೇಶ್,ತಾಲ್ಲೂಕು ರೈತಮೋರ್ಚಾ ಕಾರ್ಯದರ್ಶಿ ಶ್ರೀಹರ್ಷ ಮತ್ತಿತರ ಮುಖಂಡರುಗಳು ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ