ಹುಳಿಯಾರು:ಕೇಂದ್ರ ಸರ್ಕಾರವು ಒಡವೆಗಳ ಮೇಲೆ ಹಾಲ್ ಮಾರ್ಕ್ ಮತ್ತು ಎಚ್‌ಯುಐಡಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಹುಳಿಯಾರು ಪಟ್ಟಣದ ಚಿನ್ನಾಭರಣಗಳ ಅಂಗಡಿ ಮಾಲೀಕರುಗಳು ಇಂದು ತಮ್ಮ ಚಿನ್ನ-ಬೆಳ್ಳಿ ಅಂಗಡಿಗಳನ್ನು ಇಡೀ ದಿನ ಬಂದ್ ಮಾಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟಿಸಿದರು.
ಈ ಬಗ್ಗೆ ಮಾತನಾಡಿದ ಹುಳಿಯಾರು ಚಿನ್ನ-ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಹೆಚ್.ಆರ್.ಶಂಕರ್ ಕೇಂದ್ರ ಸರ್ಕಾರ ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕ್ ಮತ್ತು ಎಚ್‌ಯುಐಡಿಯನ್ನು ಕಡ್ಡಾಯಗೊಳಿಸಿರುವುದರಿಂದ ಪ್ರತಿಯೊಬ್ಬ ಚಿನ್ನಬೆಳ್ಳಿ ವರ್ತಕರಿಗೆ ತೊಂದರೆಯಾಗಲಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಾಲ್ಮಾರ್ಕ್ ಯುನಿಕ್ ಐಡಿಯಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ತಾಂತ್ರಿಕ ಸಮಸ್ಯೆಗಳಿರುವುದರಿಂದ ಕೇಂದ್ರ ಸರ್ಕಾರ ತನ್ನ ಈ ನಿರ್ಧಾರವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಜಿಲ್ಲಾ ಸಂಘಟನೆಯ ಬಂದ್ ಗೆ ಬೆಂಬಲಿಸಿ ಹುಳಿಯಾರು ಪಟ್ಟಣದಲ್ಲಿರುವ ಎಲ್ಲಾ 42 ಆಭರಣ ಮಳಿಗೆಗಳನ್ನು ಇಂದು ಬಂದ್ ಮಾಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟಿಸಲಾಗಿದೆ. ಇಂದು ದೇಶಾದ್ಯಂತ ಸಾಧಾರಣ ಮಳಿಗೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟಿಸಲಾಗಿದ್ದು ಸರ್ಕಾರ ತನ್ನ ನಿಯಮವನ್ನು ಜಾರಿ ಮಾಡದಂತೆ ಆಗ್ರಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ