ಹುಳಿಯಾರು ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಪ್ರದೇಶದ ಬ್ಯಾಂಕ್ ಆಗಿದ್ದು ಇಲ್ಲಿನ ಸಿಬ್ಬಂದಿಗಳಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ವಿರಳವಾಗಿದ್ದು ಸಂವಹನ ಸಮಸ್ಯೆ ಎದುರಾಗಿದೆ.ಅಲ್ಲದೆ ಬ್ಯಾಂಕ್ ಪಾಸ್ ಬುಕ್ ಎಂಟ್ರಿ ಮಾಡಿಕೊಡಲು ನಿತ್ಯವೂ ನಾನಾ ರೀತಿಯ ಸಮಸ್ಯೆ ಹೇಳುತ್ತ ನಮ್ಮಂತ ವಯೋವೃದ್ಧರನ್ನು ಅನಾವಶ್ಯಕವಾಗಿ ಅಲೆದಾಡಿಸುತ್ತಿದ್ದಾರೆ ಎಂದು ಹುಳಿಯಾರು ಸಮೀಪದ ಕೆಂಕೆರೆಯ ಇಂಗ್ಲಿಷ್ ಮರುಳಪ್ಪ ದೂರಿದ್ದಾರೆ.
ನಮ್ಮ ಖಾತೆಗೆ ಹಣ ಬಂದಿದೆಯೇ ಇಲ್ಲವೆ ಎಂದು ನೋಡಲು ಪಾಸ್ಬುಕ್ ಅವಶ್ಯಕತೆ ಇದೆ. ನನ್ನ ಪಾಸ್ ಬುಕ್ ಮುಗಿದಿದ್ದು ಹೊಸ ಪಾಸ್ ಬುಕ್ ಕೊಡಲು ವಿನಾಕಾರಣ ಎರಡು ತಿಂಗಳಿನಿಂದಲೂ ಅಲೆದಾಡುತ್ತಿದ್ದಾರೆ. ಇದಕ್ಕಾಗಿ ನಿತ್ಯವೂ ಕೆಂಕೆರೆಯಿಂದ ಹುಳಿಯಾರಿಗೆ ಬಂದು ಹೋಗುವುದೇ ಕೆಲಸವಾಗಿದೆ. ಸಾಲದ್ದಕ್ಕೆ ಇಲ್ಲಿನ ಸಿಬ್ಬಂದಿಗಳಲ್ಲಿ ಕನ್ನಡ ಮಾತನಾಡಲು ಸರಿಯಾಗಿ ಬಾರದಿರುವವರ ಸಂಖ್ಯೆ ಹೆಚ್ಚಿದ್ದು, ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಸಂವಹನ ಸಮಸ್ಯೆ ಹೆಚ್ಚಾಗಿದೆ.ಇಲ್ಲಿ ಇನ್ನೂ ಹಲವಾರು ಸಮಸ್ಯೆಗಳಿದ್ದು, ಮೇಲಾಧಿಕಾರಿಗಳು ಗ್ರಾಹಕರ ಸಭೆ ಕರೆದು ಗ್ರಾಹಕರ ಸಮಸ್ಯೆ ಆಲಿಸುವ ಮೂಲಕ ಇಲ್ಲಿನ ಸಮಸ್ಯೆಗಳ ನ ಪರಿಹರಿಸುವಂತೆ ಅವರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ