ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೀಕೆಂಡ್ ಲಾಕ್ ಡೌನ್... ಹುಳಿಯಾರು ಸಂಪೂರ್ಣ ಸ್ತಬ್ಧ.!

 ವೀಕೆಂಡ್ ಲಾಕ್ ಡೌನ್... ಹುಳಿಯಾರು ಸಂಪೂರ್ಣ ಸ್ತಬ್ಧ.! ರಸ್ತೆ ಕಾಲಿ ಕಾಲಿ... ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ವೀಕೆಂಡ್ ಕರ್ಫ್ಯೂಗೆ ಹುಳಿಯಾರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ .  ಮೆಡಿಕಲ್ ಸ್ಟೋರ್ ಹೊರತುಪಡಿಸಿ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ.  ರಸ್ತೆಯಲ್ಲಿ ಜನ ಸಂಚಾರ ಸಂಪೂರ್ಣ ಕಡಿಮೆಯಾಗಿದ್ದು, ಆಗೊಂದು- ಈಗೊಂದು ಕೆಎಸ್ಆರ್ಟಿಸಿ ಬಸ್ ಗಳು ಮಾತ್ರ ಓಡಾಡುತ್ತಿದೆ. ತರಕಾರಿ-ದಿನಸಿ ಹೂವು ಹಣ್ಣಿನ ಅಂಗಡಿಗಳು ಬೆಳಿಗ್ಗೆ 10 ಗಂಟೆಯವರೆಗೆ ತೆರೆದಿದ್ದು ಆ ಸಮಯದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿ ಮಾಡಿದರು. ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.‌ ಬೆಳಿಗ್ಗೆ ಅಲ್ಪಸ್ವಲ್ಪ ಸಂಚಾರ ಕಂಡು ಬಂದಿತ್ತಾದರೂ ಮಧ್ಯಾಹ್ನವಂತೂ ಇಡೀ ಪಟ್ಟಣ ಬಿಕೋ ಎನ್ನುತ್ತಿತ್ತು.