ವೀಕೆಂಡ್ ಲಾಕ್ ಡೌನ್...
ಹುಳಿಯಾರು ಸಂಪೂರ್ಣ ಸ್ತಬ್ಧ.!
ರಸ್ತೆ ಕಾಲಿ ಕಾಲಿ... ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್
ವೀಕೆಂಡ್ ಕರ್ಫ್ಯೂಗೆ ಹುಳಿಯಾರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ .
ಮೆಡಿಕಲ್ ಸ್ಟೋರ್ ಹೊರತುಪಡಿಸಿ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ.
ರಸ್ತೆಯಲ್ಲಿ ಜನ ಸಂಚಾರ ಸಂಪೂರ್ಣ ಕಡಿಮೆಯಾಗಿದ್ದು, ಆಗೊಂದು- ಈಗೊಂದು ಕೆಎಸ್ಆರ್ಟಿಸಿ ಬಸ್ ಗಳು ಮಾತ್ರ ಓಡಾಡುತ್ತಿದೆ. ತರಕಾರಿ-ದಿನಸಿ ಹೂವು ಹಣ್ಣಿನ ಅಂಗಡಿಗಳು ಬೆಳಿಗ್ಗೆ 10 ಗಂಟೆಯವರೆಗೆ ತೆರೆದಿದ್ದು ಆ ಸಮಯದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿ ಮಾಡಿದರು. ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಬೆಳಿಗ್ಗೆ ಅಲ್ಪಸ್ವಲ್ಪ ಸಂಚಾರ ಕಂಡು ಬಂದಿತ್ತಾದರೂ ಮಧ್ಯಾಹ್ನವಂತೂ ಇಡೀ ಪಟ್ಟಣ ಬಿಕೋ ಎನ್ನುತ್ತಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ