ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಕ್ತದಾನದ ಮೂಲಕ ಮೂರ್ತಣ್ಣನವರ ಎರಡನೇ ವರ್ಷದ ಪುಣ್ಯ ಸ್ಮರಣೆ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತಿಘಟ್ಟದ ಹೂ ಮತ್ತು ಹಣ್ಣಿನ ವ್ಯಾಪಾರಿಯಾಗಿದ್ದ ದಿವಂಗತ ಮೂರ್ತಣ್ಣನವರ(ನರಸಿಂಹಮೂರ್ತಿಯವರ)ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ರಕ್ತದಾನ ಮತ್ತು ಅನ್ನದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ನಮನ ಸಲ್ಲಿಸಲಾಯಿತು. ದಾನ ಧರ್ಮದ ಮೂಲಕ ಎಲ್ಲರಿಗೂ ಸಹ ಆತ್ಮೀಯರಾಗಿ, ಎಲ್ಲರನ್ನೂ ತುಂಬಾ ಗೌರವದಿಂದ ಕಾಣುತ್ತಿದ್ದ ಮೂರ್ತಣ್ಣನವರು ಆತ್ಮಕ್ಕೆ ಸದ್ಗತಿಯನ್ನು ಕೋರಿ ನಮಿಸಲಾಯಿತು. ರಕ್ತದಾನ ಮಾಡಿದಂತಹ ಎಲ್ಲಾ  ಹದಿನೈದು ಮಂದಿ ರಕ್ತದಾನಿಗಳಿಗೆ ಮತ್ತು ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ॥ಮಧುರಂಜನ್ ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ,ಮತಿಘಟ್ಟ ಪಿಡಿಓ ಸಿದ್ಧರಾಮಯ್ಯ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಲಯದ ಸಿಬ್ಬಂದಿ ವರ್ಗದವರಿಗೆ *ಮೂರ್ತಣ್ಣ ಹೂ ಮತ್ತು ಹಣ್ಣಿನ ಅಂಗಡಿ* ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಲಾಯಿತು.

ಆರ್‌ಎಸ್‌ಎಸ್ ಸ್ವಯಂಸೇವಕರಿಂದ ಹುಳಿಯಾರಿನ ಕೆಂಚಮ್ಮನ ತೋಪಿನ ಆವರಣದ ಸ್ವಚ್ಛತೆ

 ಹುಳಿಯಾರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಳಿಯಾರು ಭಗತ್ ಸಿಂಗ್ ಶಾಖೆಯಿಂದ ಸೇವಾ ಸಾಂಘಿಕದ ಅಂಗವಾಗಿ ಹುಳಿಯಾರಿನಲ್ಲಿನ ಕೆಂಚಮ್ಮನ ತೋಪಿನ ಆವರಣದಲ್ಲಿರುವ ದೇವಾಲಯದ ಕಟ್ಟೆಯನ್ನು ಸ್ವಚ್ಛತೆ ಮಾಡಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ತುಮಕೂರು ಜಿಲ್ಲಾ ಬೌದ್ಧಿಕ್ ಪ್ರಮುಖರಾದ ಭರತ್ ಹುಳಿಯಾರು ಕೆಂಚಮ್ಮನ ತೋಪಿನ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ತುಮಕೂರು ಜಿಲ್ಲಾ ಸೇವಾ ಪ್ರಮುಖ್ ರವಿ ತಂಡಗ ಅವರು ಆರೆಸ್ಸೆಸ್ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕೆಂಚಮ್ಮನ ಗುಂಡು ಇರುವ ಹುಳಿಯಾರು ಕೆರೆಯು ಅತ್ಯಂತ ಪವಿತ್ರ ಸ್ಥಳವಾಗಿದ್ದು, ಅದರ ಏರಿಯ ಮೇಲೆ ಎಲ್ಲಿ ನೋಡಿದರೂ ಕೋಳಿ ತ್ಯಾಜ್ಯ ಹಾಗೂ ಮಧ್ಯದ ಕವರುಗಳು ಬಿದ್ದಿದ್ದು,ಇದರಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಎಲ್ಲಾ ಸ್ವಯಂಸೇವಕರು ನಮ್ಮ ದೇವಾಲಯದ ಪಾವಿತ್ರತೆ ಕಾಪಾಡುವಲ್ಲಿ ತಮ್ಮ ಶ್ರಮ ವಹಿಸಬೇಕೆಂದು ಭರತ್ ಹುಳಿಯಾರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ವಯಂಸೇವಕರುಗಳಾದ ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್, ಗಂಗಾಧರಯ್ಯ,ವಿಶ್ವನಾಥ್ ,ಬಾಲಾಜಿ, ಬಸವರಾಜು, ಗುರು, ಮಧು ,ಜಗನ್ನಾಥ್ ಸಿಂಗ್, ರಾಮ್ ಪ್ರಸಾದ್ ಹಾಗೂ ಇತರರಿದ್ದರು.

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ

ಹುಳಿಯಾರು-ಕೆಂಕೆರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2ರ ವತಿಯಿಂದ, ಪ್ರಾಥಮಿಕ ಆರೋಗ್ಯ ಕೇಂದ್ರ ಹುಳಿಯಾರು ಇವರ ಸಹಯೋಗದೊಂದಿಗೆ ಇಂದು ಶುಕ್ರವಾರ " ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ" ವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದಲ್ಲಿ ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕರಾದ ಬಿ.ಸಿ.ರೇಣುಕಾ ರಾಜ್ ಮಾತನಾಡಿ  ವಿದ್ಯಾರ್ಥಿಗಳಿಗೆ ಕ್ಷಯ ರೋಗ, ಅದರ ಹರಡುವಿಕೆ, ಲಕ್ಷಣಗಳು ಹಾಗೂ ಅದನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.  ಉಪನ್ಯಾಸದ ನಂತರ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಸ್ಪರ್ಧೆಯಲ್ಲಿ ಕಾವ್ಯ ಸಿ.ಆರ್. ಪ್ರಥಮ ಬಿ.ಕಾಂ., ಪ್ರಥಮ ಬಹುಮಾನ; ರಾಧಿಕಾ ಕೆ., ಪ್ರಥಮ ಬಿ.ಕಾಂ., ದ್ವಿತೀಯ ಬಹುಮಾನ ಮತ್ತು ಪವನ ಸಿ.ಎಂ., ಪ್ರಥಮ ಬಿ.ಕಾಂ, ತೃತೀಯ ಬಹುಮಾನ ಪಡೆದರು.  ಪ್ರಾಚಾರ್ಯರಾದ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು . ಪ್ರಥಮ ಬಹುಮಾನವಾಗಿ 750ರೂ. ದ್ವಿತೀಯ ಬಹುಮಾನವಾಗಿ 500ರೂ. ಮತ್ತು ತೃತೀಯ ಬಹುಮಾನವಾಗಿ 250ರೂ. ಕೊಡಲಾಯಿತು.  ಕಾರ್ಯಕ್ರಮದ ಸಂಚಾಲಕರಾದ ಡಾ. ಮೋಹನ್ ಕುಮಾರ್  ಎಂ.