ಹುಳಿಯಾರು:ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಳಿಯಾರು ಭಗತ್ ಸಿಂಗ್ ಶಾಖೆಯಿಂದ ಸೇವಾ ಸಾಂಘಿಕದ ಅಂಗವಾಗಿ ಹುಳಿಯಾರಿನಲ್ಲಿನ ಕೆಂಚಮ್ಮನ ತೋಪಿನ ಆವರಣದಲ್ಲಿರುವ ದೇವಾಲಯದ ಕಟ್ಟೆಯನ್ನು ಸ್ವಚ್ಛತೆ ಮಾಡಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ತುಮಕೂರು ಜಿಲ್ಲಾ ಬೌದ್ಧಿಕ್ ಪ್ರಮುಖರಾದ ಭರತ್ ಹುಳಿಯಾರು ಕೆಂಚಮ್ಮನ ತೋಪಿನ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ತುಮಕೂರು ಜಿಲ್ಲಾ ಸೇವಾ ಪ್ರಮುಖ್ ರವಿ ತಂಡಗ ಅವರು ಆರೆಸ್ಸೆಸ್ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಕೆಂಚಮ್ಮನ ಗುಂಡು ಇರುವ ಹುಳಿಯಾರು ಕೆರೆಯು ಅತ್ಯಂತ ಪವಿತ್ರ ಸ್ಥಳವಾಗಿದ್ದು, ಅದರ ಏರಿಯ ಮೇಲೆ ಎಲ್ಲಿ ನೋಡಿದರೂ ಕೋಳಿ ತ್ಯಾಜ್ಯ ಹಾಗೂ ಮಧ್ಯದ ಕವರುಗಳು ಬಿದ್ದಿದ್ದು,ಇದರಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಎಲ್ಲಾ ಸ್ವಯಂಸೇವಕರು ನಮ್ಮ ದೇವಾಲಯದ ಪಾವಿತ್ರತೆ ಕಾಪಾಡುವಲ್ಲಿ ತಮ್ಮ ಶ್ರಮ ವಹಿಸಬೇಕೆಂದು ಭರತ್ ಹುಳಿಯಾರು ಮನವಿ ಮಾಡಿದರು.ಈ ಸಂದರ್ಭದಲ್ಲಿ ಸ್ವಯಂಸೇವಕರುಗಳಾದ ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್, ಗಂಗಾಧರಯ್ಯ,ವಿಶ್ವನಾಥ್ ,ಬಾಲಾಜಿ, ಬಸವರಾಜು, ಗುರು, ಮಧು ,ಜಗನ್ನಾಥ್ ಸಿಂಗ್, ರಾಮ್ ಪ್ರಸಾದ್ ಹಾಗೂ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ