ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು ಪಟ್ಟಣ ಪಂಚಾಯಿತಿವತಿಯಿಂದ ವಿದ್ಯುನ್ಮಾನ ಬಳಕೆ ಹಾಗೂ ಮತದಾರರ ಜಾಗೃತಿ ಅಭಿಯಾನ

ಹುಳಿಯಾರು ಪಟ್ಟಣ ಪಂಚಾಯಿತಿವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯುನ್ಮಾನ ಬಳಕೆ ಹಾಗೂ ಮತದಾರರ ಜಾಗೃತಿ ಅಭಿಯಾನಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಿರಣ್ ಕುಮಾರ್ ಚಾಲನೆ ನೀಡಿದರು. ಈ ಬಗ್ಗೆ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭೂತಪ್ಪ ಸಾರ್ವತ್ರಿಕ ಚುನಾವಣೆಯಲ್ಲಿ ನಡೆಯಲಿರುವ ಇವಿಎಂ ಮತದಾನದ ಬಗ್ಗೆ ಯಾರೂ ಸಂಶಯ ಪಡುವುದು ಬೇಡ. ನೀವು ಮತ ಚಲಾಯಿಸಿದ ಕ್ಷಣ ಇವಿಎಂ ಪಕ್ಕದಲ್ಲಿ ಇರುವ ವಿವಿ ಪ್ಯಾಟ್, ನೀವು ಚಲಾಯಿಸಿದ ಮತವನ್ನು ಏಳು ಸೆಕೆಂಡುಗಳ ಕಾಲ ಪ್ರದರ್ಶನ ಗೊಳಿಸುವ ಮೂಲಕ ವಿವಿಪ್ಯಾಟ್ ಮರುಖಾತ್ರಿ ಪಡಿಸಲಿದೆ ಎಂದರು. ಅಲ್ಲದೆ ಇದರ ಮುದ್ರಿತ ಪ್ರತಿಯೂ ಕೂಡ ವಿವಿ ಪ್ಯಾಟ್ ನಲ್ಲಿ ಶೇಖರಣೆ ಗೊಳ್ಳಲಿದ್ದು ನೀವು ಚಲಾಯಿಸಿದ ಮತ ಅದಲು ಬದಲಾಗಿಲ್ಲ ಎಂಬುದನ್ನು ಈ ಮೂಲಕ ನೀವು ಖಾತರಿ ಪಡಿಸಿಕೊಳ್ಳಬಹುದು ಎಂದರು. ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ ಮತದಾರರು ತಾವು ಮತ ಚಲಾಯಿಸಿದರ ಬಗ್ಗೆ ವಿವಿಪ್ಯಾಟ್ ಮೂಲಕ ಖಾತರಿ ಪಡಿಸಿಕೊಳ್ಳಬಹುದಾಗಿದ್ದು, ಈ ಬಗ್ಗೆ ಪಟ್ಟಣ ಪಂಚಾಯಿತಿಯಿಂದ ಎಲ್ಲಾ 16 ವಾರ್ಡ್ ಗಳಲ್ಲೂ ಅಭಿಯಾನ ನಡೆಸುವುದರ ಮೂಲಕ ಎಲ್ಲಾ ಮತದಾರರಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಅಬೂಬಕರ್ ಸಿದ್ದೀಕ್, ಮಹಮ್ಮದ್ ಜುಬೇರ್, ಚಂದ್ರಶೇಖರ್ ರಾವ್, ದಸ್ತಗಿರಿ ಸಾಬ್, ಸ್ಟುಡಿಯೋ ರಾಜು, ಇಂಜಿನಿಯರ್ ಮಂಜುನಾಥ್, ಚನ್

ಬಿಸಿಲಿನಿಂದ ರಕ್ಷಣೆಗೆ ಹುಳಿಯಾರಿನ ಫುಟ್‌ಪಾತ್ ವ್ಯಾಪಾರಿಗಳಿಗೆ ಛತ್ರಿ ವಿತರಣೆ

ಹುಳಿಯಾರಿನ ಫುಟ್ಪಾತ್ ವ್ಯಾಪಾರಿಗಳಿಗೆ ಮಾಜಿ ಶಾಸಕ ಸಿಬಿ ಸುರೇಶ್ ಬಾಬು ಛತ್ರಿ ವಿತರಿಸಿದರು. ಛತ್ರಿ ವಿತರಿಸಿ ಮಾತನಾಡಿದ ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ದಿನೇ ದಿನೇ ಬಿಸಿಲಿನ ತಾಪಮಾನ ಏರುತ್ತಿದ್ದು, ಬಸ್ ನಿಲ್ದಾಣದ ಫುಟ್ಪಾತ್ ವ್ಯಾಪಾರಿಗಳಿ ಬಿಸಿಲಿನಿಂದ ಯಾವುದೇ ರಕ್ಷಣೆ ಇಲ್ಲದಿರುವ ಹಿನ್ನೆಲೆಯಲ್ಲಿ, ಆರೋಗ್ಯ ಕಾಪಾಡಿಕೊಳ್ಳಲಿ ಎನ್ನುವ ಉದ್ದೇಶದಿಂದ ಹುಳಿಯಾರಿನ ಐವತ್ತಕ್ಕೂ ಹೆಚ್ಚು ಹೂವು-ಹಣ್ಣು-ತರಕಾರಿ- ಎಲೆ ಅಡಿಕೆ ಮಾರುವ ವ್ಯಾಪಾರಿಗಳಿಗೆ ಛತ್ರಿ ವಿತರಿಸಲಾಗುತ್ತಿದ್ದು , ಉಳಿದಿರುವ ವ್ಯಾಪಾರಿಗಳ ಪಟ್ಟಿ ಮಾಡಿದಲ್ಲಿ ಅವರಿಗೂ ಸಹ ಛತ್ರಿ ವಿತರಿಸಲಾಗುವುದು ಎಂದರು. ಹುಳಿಯಾರು ಪಟ್ಟಣ ಪಂಚಾಯಿತಿಯಿಂದ ಫುಟ್ಪಾತ್ ವ್ಯಾಪಾರಿಗಳನ್ನು ಆಗಾಗ್ಗೆ ತೆರವು ಮಾಡಿಸುವ ಕ್ರಮಕ್ಕೆ ಮುಂದಾಗುತ್ತಿರುವುದನ್ನು ಖಂಡಿಸಿದ ಅವರು ಕರೋನಾ ಸಮಯದಿಂದ ಫುಟ್ಪಾತ್ ವ್ಯಾಪಾರಿಗಳ ಜೀವನ ಸ್ಥಿತಿ ಶೋಚನೀಯವಾಗಿದ್ದು, ಪ್ರತಿದಿನ ದುಡಿದೇ ಜೀವನ ಸಾಕಾಗಿಸಬೇಕಾಗಿರುವ ಅವರುಗಳಿಗೆ ಪಟ್ಟಣ ಪಂಚಾಯಿತಿಯಿಂದ ಅನುಕೂಲ ಕಲ್ಪಿಸಬೇಕೆ ಹೊರತು ಒಕ್ಕಲಿಬ್ಬಿಸುವುದು ತರವಲ್ಲ ಎಂದರು. ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆರವು ಮಾಡಿಸಲು ಮುಂದಾದಲ್ಲಿ ಯಾವುದೇ ಭಯವಿಲ್ಲದೆ ತೆರವು ಮಾಡುವುದು ಸಾಧ್ಯವಿಲ್ಲ ಎನ್ನೀರಿ ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಹೊನ್ನೇಬಾಗಿ ಶಶಿಧರ್,ನಾಗ

ಮಹಿಳೆಯರು ಎಲ್ಲಾ ರಂಗದಲ್ಲೂ ಸಬಲೆಯರಾಗಿ,ಸ್ವಾಭಿಮಾನದಿಂದ ಬದುಕುತ್ತಿದ್ದಾರೆ : ಶ್ರೀಮತಿ ಚೈತ್ರ

ಹುಳಿಯಾರು : ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದು , ಅನನ್ಯ ಸಾಧನೆ ಮಾಡುವ ಮೂಲಕ ಮಹಿಳೆಯರು ಈಗ ಎಲ್ಲಾ ರಂಗದಲ್ಲೂ ಸಬಲೆಯರಾಗಿದ್ದಾರೆ, ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೇಲ್ವಿಚಾರಕಿ ಚೈತ್ರ ತಿಳಿಸಿದರು. ಹುಳಿಯಾರಿನ ಗೌತಮ್ ಚಾರಿಟಬಲ್ ಟ್ರಸ್ಟ್ ಹಾಗೂ ಚಿಕ್ಕನಾಯಕನಹಳ್ಳಿಯ ಆರ್ಥಿಕ ಸಾಕ್ಷರತಾ ಕೇಂದ್ರ  ಇವರು ಹುಳಿಯಾರಿನಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿ ಮಹಿಳೆಯರು ಈಗ ಮೊದಲಿನಂತಿಲ್ಲ.ಈಗ ಎಲ್ಲಾ ಕ್ಷೇತ್ರಗಳಲ್ಲೂ ಜವಾನಿನಿಂದ ದಿವಾನನವರೆಗೂ ಮುಂದಿದ್ದಾರೆ. ಪುರುಷರಿಗಿಂತ ಹೆಚ್ಚು ಜವಾಬ್ದಾರಿಯುತವಾಗಿ ಎಲ್ಲಾ ಕೆಲಸವನ್ನು ನಿರ್ವಹಿಸುತ್ತಾರೆ ಎಂದು ನುಡಿದರು.  ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ, ಕೇಂದ್ರದ ಪರವಾಗಿ ಕು.ಪವಿತ್ರ ಮಾತನಾಡಿ ಪ್ರಧಾನಮಂತ್ರಿಗಳ ವಿಮಾ ಯೋಜನೆ ಆಯುಷ್ಮಾನ್ ಕಾರ್ಡ್  ಇ-ಶ್ರಮ್ ಕಾರ್ಡ್ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೇವಾ  ಪ್ರತಿನಿಧಿಗಳಾದ ಯಶೋಧ,ವಿಜಯ,ಮಹಾಲಕ್ಷ್ಮಿ ಹಾಗೂ ಗಂಗಮ್ಮನವರು ಮಹಿಳೆಯರನ್ನು ಉದ್ದೇಶಿಸಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಮಹಿಳಾ ಸದಸ್ಯರಾದ ಮಮತಾ,ಪವಿತ್ರ,ಚೈತ್ರ ,ವಿಜಯ, ಸುಜಾತ ಇನ