ಹುಳಿಯಾರು: ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದು , ಅನನ್ಯ ಸಾಧನೆ ಮಾಡುವ ಮೂಲಕ ಮಹಿಳೆಯರು ಈಗ ಎಲ್ಲಾ ರಂಗದಲ್ಲೂ ಸಬಲೆಯರಾಗಿದ್ದಾರೆ, ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೇಲ್ವಿಚಾರಕಿ ಚೈತ್ರ ತಿಳಿಸಿದರು.
ಹುಳಿಯಾರಿನ ಗೌತಮ್ ಚಾರಿಟಬಲ್ ಟ್ರಸ್ಟ್ ಹಾಗೂ ಚಿಕ್ಕನಾಯಕನಹಳ್ಳಿಯ ಆರ್ಥಿಕ ಸಾಕ್ಷರತಾ ಕೇಂದ್ರ ಇವರು ಹುಳಿಯಾರಿನಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿ ಮಹಿಳೆಯರು ಈಗ ಮೊದಲಿನಂತಿಲ್ಲ.ಈಗ ಎಲ್ಲಾ ಕ್ಷೇತ್ರಗಳಲ್ಲೂ ಜವಾನಿನಿಂದ ದಿವಾನನವರೆಗೂ ಮುಂದಿದ್ದಾರೆ. ಪುರುಷರಿಗಿಂತ ಹೆಚ್ಚು ಜವಾಬ್ದಾರಿಯುತವಾಗಿ ಎಲ್ಲಾ ಕೆಲಸವನ್ನು ನಿರ್ವಹಿಸುತ್ತಾರೆ ಎಂದು ನುಡಿದರು.
ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ, ಕೇಂದ್ರದ ಪರವಾಗಿ ಕು.ಪವಿತ್ರ ಮಾತನಾಡಿ ಪ್ರಧಾನಮಂತ್ರಿಗಳ ವಿಮಾ ಯೋಜನೆ ಆಯುಷ್ಮಾನ್ ಕಾರ್ಡ್ ಇ-ಶ್ರಮ್ ಕಾರ್ಡ್ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿಗಳಾದ ಯಶೋಧ,ವಿಜಯ,ಮಹಾಲಕ್ಷ್ಮಿ ಹಾಗೂ ಗಂಗಮ್ಮನವರು ಮಹಿಳೆಯರನ್ನು ಉದ್ದೇಶಿಸಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.
ಮಹಿಳಾ ಸದಸ್ಯರಾದ ಮಮತಾ,ಪವಿತ್ರ,ಚೈತ್ರ ,ವಿಜಯ, ಸುಜಾತ ಇನ್ನೂ ಮುಂತಾದವರು ಮಾತನಾಡಿ ಮಹಿಳೆಯರು ಎಲ್ಲಾ ರಂಗದಲ್ಲೂ ಮುಂದೆ ಬಂದಿರುವುದು ಸಂತಸದ ವಿಷಯ ಎಂದು ಬಣ್ಣಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ಕೀರ್ತನ ,ವಿಜಯಲಕ್ಷ್ಮಿ ಮತ್ತು ಮೇಘನಾ ಅವರಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಿತು.ನಾಗರತ್ನ ನಿರೂಪಿಸಿ, ಭಾವನ ಮತ್ತು ಹರ್ಷಿತಾ ಪ್ರಾರ್ಥಸಿ ಹಾಗೂ ನಾಗಮಣಿ ಸ್ವಾಗತಿಸಿ,ರೇಖಾ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ, ಗೌತಮ್ ಚಾರಿಟೇಬಲ್ ಟ್ರಸ್ಟ್ ನ ತರಬೇತುದಾರರಾದ ಚೈತ್ರ ವರದರಾಜು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಮಹಿಳೆಯರೇ ಕಾರ್ಯಕ್ರಮ ಆಯೋಜಿಸಿ,ಮಹಿಳೆಯರೇ ಸಭಾ ವೇದಿಕೆಯನ್ನು ನಿರ್ಮಿಸಿ,ಮಹಿಳೆಯರೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷವಾಗಿತ್ತು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ