ಹುಳಿಯಾರು ಪಟ್ಟಣ ಪಂಚಾಯಿತಿವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯುನ್ಮಾನ ಬಳಕೆ ಹಾಗೂ ಮತದಾರರ ಜಾಗೃತಿ ಅಭಿಯಾನಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಿರಣ್ ಕುಮಾರ್ ಚಾಲನೆ ನೀಡಿದರು.
ಈ ಬಗ್ಗೆ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭೂತಪ್ಪ ಸಾರ್ವತ್ರಿಕ ಚುನಾವಣೆಯಲ್ಲಿ ನಡೆಯಲಿರುವ ಇವಿಎಂ ಮತದಾನದ ಬಗ್ಗೆ ಯಾರೂ ಸಂಶಯ ಪಡುವುದು ಬೇಡ. ನೀವು ಮತ ಚಲಾಯಿಸಿದ ಕ್ಷಣ ಇವಿಎಂ ಪಕ್ಕದಲ್ಲಿ ಇರುವ ವಿವಿ ಪ್ಯಾಟ್, ನೀವು ಚಲಾಯಿಸಿದ ಮತವನ್ನು ಏಳು ಸೆಕೆಂಡುಗಳ ಕಾಲ ಪ್ರದರ್ಶನ ಗೊಳಿಸುವ ಮೂಲಕ ವಿವಿಪ್ಯಾಟ್ ಮರುಖಾತ್ರಿ ಪಡಿಸಲಿದೆ ಎಂದರು. ಅಲ್ಲದೆ ಇದರ ಮುದ್ರಿತ ಪ್ರತಿಯೂ ಕೂಡ ವಿವಿ ಪ್ಯಾಟ್ ನಲ್ಲಿ ಶೇಖರಣೆ ಗೊಳ್ಳಲಿದ್ದು ನೀವು ಚಲಾಯಿಸಿದ ಮತ ಅದಲು ಬದಲಾಗಿಲ್ಲ ಎಂಬುದನ್ನು ಈ ಮೂಲಕ ನೀವು ಖಾತರಿ ಪಡಿಸಿಕೊಳ್ಳಬಹುದು ಎಂದರು.
ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ ಮತದಾರರು ತಾವು ಮತ ಚಲಾಯಿಸಿದರ ಬಗ್ಗೆ ವಿವಿಪ್ಯಾಟ್ ಮೂಲಕ ಖಾತರಿ ಪಡಿಸಿಕೊಳ್ಳಬಹುದಾಗಿದ್ದು, ಈ ಬಗ್ಗೆ ಪಟ್ಟಣ ಪಂಚಾಯಿತಿಯಿಂದ ಎಲ್ಲಾ 16 ವಾರ್ಡ್ ಗಳಲ್ಲೂ ಅಭಿಯಾನ ನಡೆಸುವುದರ ಮೂಲಕ ಎಲ್ಲಾ ಮತದಾರರಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಅಬೂಬಕರ್ ಸಿದ್ದೀಕ್, ಮಹಮ್ಮದ್ ಜುಬೇರ್, ಚಂದ್ರಶೇಖರ್ ರಾವ್, ದಸ್ತಗಿರಿ ಸಾಬ್, ಸ್ಟುಡಿಯೋ ರಾಜು, ಇಂಜಿನಿಯರ್ ಮಂಜುನಾಥ್, ಚನ್ನಕೇಶವ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ